Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಎಲ್‌ಎಸ್‌ಜಿ ತಂಡವನ್ನು 146 ರನ್‌ಗೆ ಕಟ್ಟಿ ಹಾಕಿದ ಆರ್‌ಸಿಬಿ; ರಸೀಕ್‌ಗೆ 4, ಭುವಿಗೆ 3 ವಿಕೆಟ್‌

ಬೆಂಗಳೂರು: ಭರವಸೆಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ (27ಕ್ಕೆ 3) ಹಾಗೂ ರಸೀಕ್ ಸಲಾಂ ಅವರ ಕರಾರುವಾಕ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಾಧಾರಣ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಕಟ್ಟಿ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಏಡನ್ ಮಾರ್ಕ್ರಾಮ್‌ (12) ಹಾಗೂ ಮಿಚೆಲ್‌ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ 32 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊತೆಯಾಟವನ್ನು ಬೇರ್ಪಡಿಸುವಲ್ಲಿ ರಸೀಕ್‌ ಸಲಾಂ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ‌ ಪೂರನ್‌ (1), ಜೋಶ್‌ ಹ್ಯಾಜಲ್‌ವುಡ್ ತೋಡಿದ ಖೆಡ್ಡಾಗೆ ಬಲಿಯಾದರು.

RCB vs LSG

ನಾಲ್ಕನೇ ವಿಕೆಟ್‌ಗೆ ಆಯುಷ್‌ ಬದೋನಿ ಅವರು ಆರಂಭಿಕ ಮಿಚೆಲ್ ಮಾರ್ಷ್ ಅವರನ್ನು ಸೇರಿಕೊಂಡರು. ಈ ಜೋಡಿ 22 ಎಸೆತಗಳಲ್ಲಿ 36 ರನ್‌ ಸೇರಿಸಿತು. ಈ ವೇಳೆ ಮಿಚೆಲ್ ಮಾರ್ಷ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್‌ ಬಾರಿಸಿದರು. ಕೃನಾಲ್‌ ಪಾಂಡ್ಯ ಅವರು ಮಿಷೆಲ್ ಮಾರ್ಷ್‌ ಅವರಿಗೆ ಖೆಡ್ಡಾ ತೋಡಿದರು. ಅಬ್ದುಲ್‌ ಸಮದ್‌ (0) ರನ್‌ ಕಲೆ ಹಾಕಲು ವಿಫಲರಾದರು.

5ನೇ ವಿಕೆಟ್‌ಗೆ ಆಯುಷ್‌ ಬದೋನಿ ಹಾಗೂ ಮುಕುಲ್ ಚೌಧರಿ ಜೋಡಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಆದರೂ ಈ ಜೋಡಿ 35 ರನ್‌ ಸೇರಿಸಿತು. ಆಯುಷ್‌ ಬದೋನಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದ ರಿಷಭ್‌ ಪಂತ್‌ ಗಾಯದಿಂದಾಗಿ ಮೈದಾನದಿಂದ ಹೊರ ನಡೆದರು. ಆದರೆ ಆಯುಷ್‌ ಬದೋನಿ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ರಿಷಭ್‌ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ರಸೀಕ್‌ ಸಲಾಂ ಅಬ್ಬರ

ಮುಕುಲ್ ಚೌಧರಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 39 ರನ್‌ ಸಿಡಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

RCB vs LSG

ಆರ್‌ಸಿಬಿ ತಂಡದ ಪರ ರಸೀಕ್‌ ಸಲಾಂ 24 ರನ್‌ ನೀಡಿ 4 ವಿಕೆಟ್‌ ಪಡೆದರು. ಸ್ವಿಂಗ್ ಬೌಲರ್ ಭುವಿ 27ಕ್ಕೆ 3 ವಿಕೆಟ್‌ ಪಡೆದರು. ಸ್ಪಿನ್ ಬೌಲರ್‌ ಕೃನಾಲ್ ಪಾಂಡ್ಯ 2 ವಿಕೆಟ್‌ ಉರುಳಿಸಿ ತಂಡಕ್ಕೆ ಆಧಾರವಾದರು.

Story first published: Wednesday, April 15, 2026, 21:42 [IST]
Other articles published on Apr 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+