Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಬ್ಯಾಟರ್‌ಗಳ ಪ್ರಯತ್ನವನ್ನು ನಾವು ಬೌಲರ್‌ಗಳು ಹಾಳು ಮಾಡಿದೆವು: RCB ವೇಗಿಯ ಬೇಸರದ ನುಡಿ

ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲಿ ನಡೆದ ಐಪಿಎಲ್ ಸೆಣೆಸಾಟದಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ. ಸಾಕಷ್ಟು ಏರಿಳಿತಗಳಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅವಕಾಶವಿತ್ತು. ಅಂತಿಮ ಎಸೆತದಲ್ಲಿ ಒಂಟಿ ರನ್ ಕದಿಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿದೆ.

ಇನ್ನ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಬಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 212 ರನ್‌ಗಳನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಟ್ಸ್ ತಂಡ ಸೋಲಿನತ್ತ ಮುಖಮಾಡಿದ್ದರೂ ಮಾರ್ಕಸ್ ಸ್ಟೋಯ್ನಿಸ್ ಹಾಗೂ ನಿಕೋಲಸ್ ಪೂರನ್ ಪ್ರದರ್ಶನದಿಂದಾಗಿ ಆರ್‌ಸಿಬಿ ತಂಡ ಆಘಾತಕಾರಿ ಸೋಲು ಕಾಣುವಂತಾಯಿತು. ಈ ಸೋಲಿನ ಬಳಿಕ ಆರ್‌ಸಿಬಿ ತಂಡದ ವೇಗಿ ವೇಯ್ನ್ ಪಾರ್ನೆಲ್ ಮಾತನಾಡಿದ್ದರು ತಂಡದ ಸೋಲಿನ ಬಗ್ಗೆ ಬೇಸರ ಹೊರಹಾಕಿದ್ದಾರೆ.

RCB vs LSG: RCB pacer Wayne Parnell disappointed after defeat said We bowlers let our batters down

ಆರ್‌ಸಿಬಿ ಬೌಲಿಂಗ್ ಆಲ್‌ರೌಂಡರ್ ವೇಯ್ನ್ ಪಾರ್ನೆಲ್ ಆರ್‌ಸಿಬಿ ತಂಡದಲ್ಲಿ ಗಾಯಗೊಂಡ ಬೌಲರ್ ರೀಸ್ ಟೋಪ್ಲಿ ಬದಲಿಗೆ ಸೇರಿಕೊಂಡಿದ್ದಾರೆ. ಆರ್‌ಸಿಬಿ ಪರವಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಅವರು ಮೂರು ವಿಕೆಟ್ ಕಿತ್ತು ತಂಡಕ್ಕೆ ಯಶಸ್ಸು ತಂದುಕೊಟ್ಟರಾದರೂ 41 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದ್ದಾರೆ.

"ಕೊನೆಯ ಎಸೆತದಲ್ಲಿ ಒಂದು ರನ್‌ಗಳ ಅಗತ್ಯವಿದ್ದಾಗ ಬಹಳ ಆತಂಕವಾಗಿತ್ತು. ಆದರೆ ದುರದೃಷ್ಟವಶಾತ್ ಅಂತಿಮ ಎಸೆತ ನಮ್ಮ ಪರವಾಗಿ ಆಗಲಿಲ್ಲ. ಅವರು ರನ್ ಬೆನ್ನಟ್ಟಿದ ರೀತಿಗೆ ಎಲ್ಲಾ ಶ್ರೇಯಸ್ಸು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಬೇಕು. ಅವರ ಒಂದಿಬ್ಬರು ಆಟಗಾರರು ಕಣಕ್ಕಿಳಿದು ಯಾವ ಎಸೆತವನ್ನು ಕೂಡ ಬಿದಲಾರೆವು ಎಂಬಂತೆ ಅಬ್ಬರಿಸಿದರು. ಅದುವೇ ಈ ಪಂದ್ಯದಲ್ಲಿ ನಮ್ಮ ಹಿನ್ನಡೆಗೆ ಕಾರಣವಾಯಿತು" ಎಂದಿದ್ದಾರೆ ವೇಯ್ನ್ ಪಾರ್ನೆಲ್.

"ಚಿನ್ನಸ್ವಾಮಿಯಲ್ಲಿ ಸಾಮಾನ್ಯವಾಗಿ ಎರಡನೇ ಸರದಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಲು ಸಾಧ್ಯವಾಗುತ್ತದೆ. ಸ್ಟೋಯ್ನಿಸ್ ಕಣಕ್ಕಿಳಿದು ಆಡಿದ ರೀತಿಯಿಂದಾಗಿ ಪಂದ್ಯದಲ್ಲಿ ಇನ್ನೂ ಮುಂದುವರಿಸಿದ್ದೇವೆ ಎಂಬುದನ್ನು ಸಾರಿದ್ದರು. ಅದಾದ ಬಳಿಕ ಪೂರನ್ ತಮ್ಮ ಕರ್ತವ್ಯವನ್ನು ಪೂರೈಸಿದರು. ಇಲ್ಲಿನ ಪಿಚ್ ಸ್ವಲ್ಪ ನಿಧಾನವಾಗಿತ್ತು. ಮುಂಬೈ ವಿರುದ್ಧ ಆಡಿದ್ದ ಪಿಚ್ಚನ್ನೇ ಬಳಸಲಾಗಿತ್ತು" ಎಂದಿದ್ದಾರೆ ಪಾರ್ನೆಲ್.

ಮುಂದುವರಿದು ಮಾತನಾಡಿದ ಅವರು "ಫಾಫ್ ಹಾಗೂ ವಿರಾಟ್ ಸ್ವಾಭಾವಿಕ ಶೈಲಿಯಲ್ಲಿ ಬ್ಯಾಟಿಂಗ್ ನಡೆಸುವ ಆಟಗಾರರು. ಅವರು ಬ್ಯಾಟಿಂಗ್‌ನಲ್ಲಿ ಎಲ್ಲಿಯೂ ಎಡವಲಿಲ್ಲ. ವಿರಾಟ್ ಕೊಹ್ಲಿ ಅದ್ಭುತವಾದ ಇನ್ನಿಂಗ್ಸ್ ಆಡಿದರು. ಫಾಫ್ ಕೂಡ ಅದ್ಭುತವಾಗಿ ಪ್ರದರ್ಶಣ ನೀಡಿದ್ದಾರೆ. ಯಾವುದೇ ಕೋಚ್‌ಗಾದರೂ ಈ ಬ್ಯಾಟಿಂಗ್ ಬಹಳ ಇಷ್ಟವಾಗುತ್ತದೆ. ಆದರೆ ಬೌಲಿಂಗ್ ವಿಭಾಗದಿಂದ ನೋಡಿದರೆ ನಮ್ಮ ಬ್ಯಾಟರ್‌ಗಳ ಪ್ರಯತ್ನವನ್ನು ನಾವು ಹಾಳು ಮಾಡಿದೆವು" ಎಂದಿದ್ದಾರೆ ವೇಯ್ನ್ ಪಾರ್ನೆಲ್.

ಈ ಪಂದ್ಯದಲಲ್ಇ ಆರ್‌ಸಿಬಿ ಪರವಾಗಿ ಮೊಹಮ್ಮದ್ ಸಿರಾಜ್ ಮಾತ್ರವೇ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ನಾಲ್ಕು ಓವರ್‌ಳ ದಾಳಿಯಲ್ಲಿ ಸಿರಾಜ್ 5.50 ಎಕಾನಮಿಯಲ್ಲಿ ಕೇವಲ 22 ರನ್ ನೀಡಿದ್ದು 3 ವಿಕೆಟ್ ಸಂಪಾದಿಸಿದರು. ಪಾರ್ನೆಲ್ ಮೂರು ವಿಕೆಟ್ ಪಡೆದರಾದರೂ 41 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದರು. ಇನ್ನು ಹರ್ಷಲ್ ಪಟೇಲ್ ಕೂಡ ಬೌಲಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ.

Story first published: Tuesday, April 11, 2023, 12:53 [IST]
Other articles published on Apr 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+