RCB ಅಗ್ರಸ್ಥಾನವನ್ನು ಪಡೆಯುವ ಕನಸು ನುಚ್ಚುನೂರಾಗಲು ಕಾರಣ ಏನು?
ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 19ನೇ ಆವೃತ್ತಿಯ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಹತ್ತಿರವಾಗಬೇಕು ಎಂಬ ಕನಸು ಎರಡೂ ತಂಡಗಳದ್ದಾಗಿತ್ತು. ಈ ವೇಳೆ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು.
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮಾಡುವಾಗ ಮಳೆ ಪಂದ್ಯಕ್ಕೆ ಕಾಟ ನೀಡಿತು. ಪರಿಣಾಮ 20 ಓವರ್‌ಗಳ ಪಂದ್ಯವನ್ನು 19 ಓವರ್‌ಗಳಿಗೆ ಇಳಿಸಲಾಯಿತು. ಎಲ್‌ಎಸ್‌ಜಿ ಪರ ಮಿಚೆಲ್ ಮಾರ್ಷ್ (111 ರನ್, 9 ಬೌಂಡರಿ, 9 ಸಿಕ್ಸರ್) ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿ ಶತಕ ಸಿಡಿಸಿದರು. ನಿಕೋಲಸ್ ಪೂರನ್ (38 ರನ್), ರಿಷಭ್ ಪಂತ್ (32 ರನ್) ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಲಕ್ನೋ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಸೇರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದಂತೆ 213 ರನ್ ಗುರಿಯನ್ನು ಆರ್‌ಸಿಬಿ ತಂಡಕ್ಕೆ ನೀಡಿತು.

ಆರ್‌ಸಿಬಿ ಗುರಿಯನ್ನು ಬೆನ್ನಟ್ಟಿತು. ಈ ವೇಳೆ ಆರ್‌ಸಿಬಿ ಪವರ್ ಪ್ಲೇನಲ್ಲಿ ಆರಂಭಿಕರಾದ ಜಾಕೊಬ್ ಬೆಥೆಲ್ (4) ಹಾಗೂ ವಿರಾಟ್ ಕೊಹ್ಲಿ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ದೇವದತ್ ಪಡಿಕ್ಕಲ್ (34) ಹಾಗೂ ರಜತ್ ಪಾಟಿದಾರ್ (61) ತಂಡದ ಪರ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಜಿತೇಶ್ ಶರ್ಮಾ (1) ಜವಾಬ್ದಾರಿ ಮರೆತರು. ಟಿಮ್ ಡೇವಿಡ್ (40 ರನ್), ಕೃನಾಲ್ ಪಾಂಡ್ಯ (28*) ಮತ್ತು ರೊಮಾರಿಯೋ ಶೆಫರ್ಡ್ (23*) ತಂಡಕ್ಕೆ ಗೆಲುವಿನ ಮಾಲೆ ತೊಡಿಸಲಿಲ್ಲ. ಅಂತಿಮವಾಗಿ ಆರ್‌ಸಿಬಿ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್ ಕಲೆ ಹಾಕಿ ಸೋಲು ಕಂಡಿತು.
ಆರ್‌ಸಿಬಿ ಪಂದ್ಯದಲ್ಲಿ ಸೋಲಲು ಪ್ರಮುಖ ಕಾರಣ ಏನು?
ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಈ ವೇಳೆ ಆರ್‌ಸಿಬಿ ಪವರ್ ಪ್ಲೇನಲ್ಲಿ ವಿಕೆಟ್ ಕಬಳಿಸಲು ಪರದಾಡಿದರು. ಪರಿಣಾಮ ರನ್ ರೇಟ್‌ಗೆ ಕಡಿವಾಣ ಹಾಕಲು ವಿಫಲವಾಯಿತು. ಇನ್ನು ಕೊನೆಯ ಓವರ್‌ಗಳಲ್ಲಿ ಆರ್‌ಸಿಬಿ ಸಾಲು ಸಾಲು ಮೂರು ಕ್ಯಾಚ್ ಕೈ ಬಿಟ್ಟಿದೆ.
- - 16ನೇ ಓವರ್‌ನ ಎರಡನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಮಿಚೆಲ್ ಮಾರ್ಷ್ ಲಾಂಗ್ ಆಫ್ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ದೇವದತ್ ಪಡಿಕ್ಕಲ್ ಕ್ಯಾಚ್ ಬಿಟ್ಟರು. ಈ ಹಂತದಲ್ಲಿ ಮಿಚೆಲ್ ಮಾರ್ಷ್ 109 ರನ್ ಬಾರಿಸಿದ್ದರು. ಅಲ್ಲದೆ ಇವರು 111 ರನ್ ಬಾರಿಸಿ ಔಟ್ ಆದರು.
- - 17ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್ ವುಡ್ ಅವರು ಎಸೆದ ಫುಲ್ ಟಾಸ್ ಎಸೆತವನ್ನು ರಿಷಭ್ ಪಂತ್ (8 ರನ್) ಡೀಪ್ ಮಿಡ್ ವಿಕೆಟ್ ಕಡೆಗೆ ಬಾರಿಸಿದರು. ಈ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಜಾಕೊಬ್ ಬೆಥೆಲ್ ಕ್ಯಾಚ್ ಕೈ ಚೆಲ್ಲಿದರು. ಪಂತ್ ಈ ಜೀವದಾನದ ಲಾಭ ಪಡೆದು 24 ರನ್ ಬಾರಿಸಿದರು.
- - 18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಅವರು ಮತ್ತೊಂದು ಅವಕಾಶವನ್ನು ಸೃಷ್ಟಿಸಿದ್ದರು. ಈ ವೇಳೆ ನಿಕೋಲಸ್ ಪೂರನ್ ಅವರು ಪಾಯಿಂಟ್ ಮೇಲೆ ಬಿಗ್ ಹಿಟ್ ಬಾರಿಸಲು ಹೋಗಿ ಕೃನಾಲ್ ಪಾಂಡ್ಯ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಆಗ ನಿಕೋಲಸ್ ಪೂರನ್ 32 ರನ್ ಸಿಡಿಸಿದ್ದರು.
ಸಂಕ್ಷಿಪ್ತ ಸ್ಕೊರ್
ಲಕ್ನೋ ಸೂಪರ್ ಜೈಂಟ್ಸ್ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209: ಮಿಚೆಲ್ ಮಾರ್ಷ್ 111, ನಿಕೋಲಸ್ ಪೂರನ್ 38, ರಿಷಭ್ ಪಂತ್ ಅಜೇಯ 32, ಕೃನಾಲ್ ಪಾಂಡ್ಯ (ಆರ್‌ಸಿಬಿ) 31ಕ್ಕೆ 1
ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‌ಗೆ 6 ವಿಕೆಟ್‌ಗೆ 203: ರಜತ್ ಪಾಟಿದಾರ್ 61, ಟಿಮ್ ಡೇವಿಡ್ 40, ದೇವದತ್ ಪಡಿಕ್ಕಲ್ 34, ಪ್ರಿನ್ಸ್ ಯಾದವ್ (ಎಲ್‌ಎಸ್‌ಜಿ) 33ಕ್ಕೆ 3
ಪಂದ್ಯದ ಫಲಿತಾಂಶ: ಎಲ್‌ಎಸ್‌ಜಿಗೆ 9 ರನ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications