Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs LSG: ಪಂದ್ಯಕ್ಕೆ ತಿರುವು ನೀಡಿದ್ದು ಇವರದ್ದೇ ಆಟ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನಲ್ಲಿ ಅಬ್ಬರಿಸಿದೆ. ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ತವರಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಮೂಲಕ ಆರ್‌ಸಿಬಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ ಅಮೋಘ ದಾಳಿಯನ್ನು ಸಂಘಟಿಸಿತು. ಎಲ್‌ಎಸ್‌ಜಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಸಫಲರಾಗಿದ್ದಾರೆ. ಪವರ್‌ ಪ್ಲೇನಲ್ಲಿ ಆರ್‌ಸಿಬಿ ತಂಡ 2 ವಿಕೆಟ್‌ ಪಡೆಯಿತು. ಆರಂಭಿಕರಾದ ಏಡನ್‌ ಮಾರ್ಕ್ರಾಮ್‌ (12), ನಿಕೋಲಸ್ ಪೂರನ್‌ (1) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಿಚೆಲ್ ಮಾರ್ಷ್ ಒಂದು ತುದಿಯನ್ನು ಕಚ್ಚಿಕೊಂಡು ಬ್ಯಾಟ್ ಮಾಡಿದರು. ಅಲ್ಲದೆ 40 ರನ್‌ ಬಾರಿಸಿದರು. ಇವರು ಔಟ್ ಆದ ಬಳಿಕ ಬಂದ ಆಯುಷ್ ಬದೋನಿ (38), ಮುಕುಲ್ ಚೌಧರಿ (39) ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಇದು ಸಹ ಆರ್‌ಸಿಬಿ ಎಲ್‌ಎಸ್‌ಜಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ನೆರವಾಯಿತು.

RCB vs LSG

ಜಮ್ಮು ಕಾಶ್ಮೀರ್ ತಂಡದ ವೇಗದ ಬೌಲರ್ ರಸೀಕ್ ಸಲಾಂ ದರ್‌ ಅವರು ಅಬ್ಬರಿಸಿದರು. ಇವರು 4 ಓವರ್‌ಗಳ ಕೋಟಾದಲ್ಲಿ 24 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಭುವನೇಶ್ವರ್ ಕುಮಾರ್ ಸಹ 27 ರನ್‌ಗೆ 3 ವಿಕೆಟ್‌ ಪಡೆದರು. ಇವರಿಬ್ಬರ ಬೌಲಿಂಗ್ ದಾಳಿ ಪಂದ್ಯಕ್ಕೆ ತಿರುವು ನೀಡಿದ್ದ ಅಂಶಗಳಲ್ಲಿ ಒಂದಾಗಿದೆ.

ಇದೇ ಪಂದ್ಯಕ್ಕೆ ತಿರುವು ನೀಡಿದ ಅಂಶ

ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಆಟಗಾರ ಫಿಲ್ ಸಾಲ್ಟ್‌ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪಿಚ್‌ ಮರ್ಮ ಅರಿತು ಬ್ಯಾಟ್ ಮಾಡಿದರು. ಇವರು ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿದರು. ಅಲ್ಲದೆ ಚೇಸಿಂಗ್ ಸ್ಟಾರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು.

ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ 34 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 49 ರನ್‌ ಬಾರಿಸಿದರು. ವಿರಾಟ್‌ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಪ್ರಿನ್ಸ್‌ ಯಾದವ್ ಅವರಿಗೆ ಒಂದೇ ಓವರ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿ ಮಿಂಚಿದರು. ವಿರಾಟ್ ಅವರ ಸಮಯೋಚಿತ ಬ್ಯಾಟಿಂಗ್ ಆರ್‌ಸಿಬಿ ತಂಡ ಪಂದ್ಯ ಗೆಲ್ಲಲು ಸಹಕಾರಿಯಾಯಿತು.

ಅಂತಿಮವಾಗಿ ಆರ್‌ಸಿಬಿ 15.1 ಓವರ್‌ಗಳಲ್ಲಿ 5 ವಿಕೆಟ್‌ಗೆ 149 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಆರ್‌ಸಿಬಿ ಆಡಿರುವ 5 ಪಂದ್ಯಗಳಲ್ಲಿ 4 ಜಯ ದಾಖಲಿಸಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Story first published: Thursday, April 16, 2026, 8:00 [IST]
Other articles published on Apr 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+