Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs MI: ಭುವಿ ಸ್ವಿಂಗ್ ಬೌಲಿಂಗ್ ಎದುರಿಸುವಲ್ಲಿ ಮುಂಬೈ ಕಂಗಾಲು

ರಾಯ್‌ಪುರ್‌: ಭರವಸೆಯ ವೇಗದ ಬೌಲರ್‌ ಭುವನೇಶ್ವರ್ ಕುಮಾರ್ ಅವರ ಬಿಗುವಿನ ದಾಳಿ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 19ನೇ ಆವೃತ್ತಿಯ 54ನೇ ಪಂದ್ಯದಲ್ಲಿ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 166 ರನ್‌ಗಳಿಗೆ ಮುಂಬೈ ಇಂಡಿಯನ್ಸ್‌ ತಂಡವನ್ನು ಕಟ್ಟಿ ಹಾಕಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಮುಂಬೈ ಇಂಡಿಯನ್ಸ್‌ ಕಳಪೆ ಆರಂಭವನ್ನು ಕಂಡಿತು. ರಯಾನ್‌ ರಿಕಲ್ಟನ್‌ ಅವರು ಭುವನೇಶ್ವರ್ ಕುಮಾರ್ ಅವರ ಗುಡ್ ಲೆಂತ್‌ ಎಸೆತವನ್ನು ಮಿಡ್ ಆಫ್‌ಗೆ ತಳ್ಳಿದರು. ಅಲ್ಲಿ ನಿಂತಿದ್ದ ರಜತ್‌ ಪಾಟಿದಾರ್‌ಗೆ ಕ್ಯಾಚ್ ನೀಡಿದರು. ಇವರು ಔಟ್ ಆದಾಗ ಮುಂಬೈ ತಂಡದ ಮೊತ್ತ 4 ಆಗಿತ್ತು. ಭರವಸೆಯ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ಭುವಿ ನಕಲ್ ಬಾಲ್ ಎಸೆದು ವಂಚಿಸಿದರು. ರೋಹಿತ್‌ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 22 ರನ್‌ ಸಿಡಿಸಿದರು.

RCB vs MI

ರೋಹಿತ್‌ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಸ್ಟಂಪ್‌ ಹೊರಗಿನ ಚೆಂಡನ್ನು ಕೆಣಕಿ ಸ್ಲಿಪ್‌ನಲ್ಲಿದ್ದ ಕೊಹ್ಲಿ ಅವರಿಗೆ ಕ್ಯಾಚ್ ನೀಡಿದರು. ಮುಂಬೈ ಇಂಡಿಯನ್ಸ್‌ ಪವರ್ ಪ್ಲೇನಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ತಿಲಕ್ ಅರ್ಧಶತಕ

ನಾಲ್ಕನೇ ವಿಕೆಟ್‌ಗೆ ತಿಲಕ್ ವರ್ಮಾ ಹಾಗೂ ನಮನ್ ಧೀರ್ ಜೋಡಿ ಕೊಂಚ ಆರ್‌ಸಿಬಿ ಬೌಲರ್‌ಗಳನ್ನು ಕಾಡಿತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಜೋಡಿ ಬಳಿಕ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿತು. ಈ ಜೋಡಿ 57 ಎಸೆತಗಳಲ್ಲಿ 82 ರನ್ ಸೇರಿಸಿತು. ನಮನ್‌ ಧೀರ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 47 ರನ್‌ ಸಿಡಿಸಿದರು.

RCB vs MI

ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್‌ ತಿಲಕ್ ವರ್ಮಾ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಇವರು 3 ಬೌಂಡರಿ, 2 ಸಿಕ್ಸರ್‌ ಸಹಿತ 57 ರನ್‌ ಬಾರಿಸಿ ಆರ್ಭಟಿಸಿದರು. ವಿಲ್ ಜಾಕ್ಸ್‌ 10, ರಾಜ್ ಬಾವಾ 16 ರನ್‌ ಬಾರಿಸಿದರು. ಮುಂಬೈ ಇಂಡಿಯನ್ಸ್‌ ಡೆತ್ ಓವರ್‌ಗಳ ಲಾಭ ಪಡೆಯುವಲ್ಲಿ ವಿಫಲರಾದರು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್‌ ಸೇರಿಸಿತು.

ಭುವಿ ಕಮಾಲ್‌

ಆರ್‌ಸಿಬಿ ತಂಡದ ಸ್ಟಾರ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕಮಾಲ್ ಬೌಲಿಂಗ್ ನಡೆಸಿದರು. ಇವರು 4 ಓವರ್‌ ಬೌಲಿಂಗ್ ನಡೆಸಿ 23 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಈ ಮೂಲಕ ಈ ಲೀಗ್‌ನಲ್ಲಿ 21 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದರು. ಜೋಶ್‌ ಹ್ಯಾಜಲ್‌ವುಡ್, ರಸಿಕ್ ಸಲಾಂ, ರೊಮಾರಿಯೋ ಶೆಫರ್ಡ್‌ ತಲಾ ಒಂದು ವಿಕೆಟ್‌ ಪಡೆದರು.

Story first published: Sunday, May 10, 2026, 21:26 [IST]
Other articles published on May 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+