RCB vs MI IPL 2025: ಗೆಲುವಿನ ಟ್ರ್ಯಾಕ್‌ಗೆ ಮರಳುವ ವಿಶ್ವಾಸದಲ್ಲಿ ಆರ್‌ಸಿಬಿ, ಮುಂಬೈ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಕಾದಾಟ ಮುಂಬೈನ ವಾಂಖೇಡೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕಸನು ಉಭಯ ತಂಡದ್ದಾಗಿದೆ. ಮುಂಬೈ ಆರಂಭ ಕಳಪೆಯಾಗಿದೆ. ಆರ್‌ಸಿಬಿ ಲೀಗ್‌ನಲ್ಲಿ ಅಬ್ಬರದ ಆರಂಭವನ್ನು ಕಂಡಿದೆ. ಉಭಯ ತಂಡಗಳ ಜಿದ್ದಾಜಿದ್ದಿನ ಫೈಟ್ ಸೋಮವಾರದ ಪ್ರಮುಖ ಆಕರ್ಷಣೆ.
ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಈ ವೇಳೆ ತಂಡದ ಗೆಲುವಿಗೆ ಅಗತ್ಯ ಕಾಣಿಕೆಯನ್ನು ಇವರು ನೀಡಬಲ್ಲರು. ಉಭಯ ತಂಡಗಳು ಒಟ್ಟಾರೆ ಐಪಿಎಲ್‌ನಲ್ಲಿ 33 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 19 ಗೆಲುವು ದಾಖಲಿಸಿದೆ. ಆರ್‌ಸಿಬಿ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಉಭಯ ತಂಡಗಳ ಪ್ಲೇ ಆಫ್ ಕನಸಿಗೆ ಪುಷ್ಠಿ ನೀಡಲು ಗೆಲುವು ಅನಿವಾರ್ಯವಾಗಿದೆ. ಒಟ್ಟಾರೆ ಈ ಮೈದಾನ 85 ಐಪಿಎಲ್ ಪಂದ್ಯಗಳಿಗೆ ಆತಿಥ್ಯ ನೀಡಿದೆ.

ಹೇಗಿರಲಿದೆ ಪಿಚ್?
ಸಾಮಾನ್ಯವಾಗಿ ಮುಂಬೈನಲ್ಲಿ ಕೆಂಪು ಮಣ್ಣಿನ ಪಿಚ್ ಇರುತ್ತದೆ. ಈ ಪಿಚ್‌ಗಳಲ್ಲಿ ಬ್ಯಾಟರ್‌ಗಳು ತಮ್ಮ ವೀರಾವೇಶದ ಬ್ಯಾಟಿಂಗ್ ನಡೆಸುತ್ತಾರೆ. ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಳ್ಳಬಹುದು.
ವಿರಾಟ್ ಮೇಲೆ ಚಿತ್ತ
ಆರ್‌ಸಿಬಿ ತಂಡ ಈ ಬಾರಿ ಸಂಘಟಿತ ಆಟವನ್ನು ಪ್ರದರ್ಶಿಸಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವಿನ ಜೋಶ್‌ನಲ್ಲಿತ್ತು. ಆದರೆ ಗುಜರಾತ್ ಟೈಟಾನ್ಸ್ ಈ ಜೋಶ್‌ಗೆ ಬ್ರೇಕ್ ಹಾಕಿದೆ. ಹೀಗಾಗಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವನ್ನು ಆಡುವ ಅನಿವಾರ್ಯತೆ ಇದೆ. ಟಾಪ್ ಆರ್ಡರ್‌ನಲ್ಲಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ದೊಡ್ಡ ಇನಿಂಗ್ಸ್ ಕಟ್ಟಬೇಕಿದೆ. ಆರಂಭದಲ್ಲಿ ತಾಳ್ಮೆಯಿಂದ ಆಟವಾಡಿ ನಂತರ ವೇಗವಾಗಿ ರನ್ ಕಲೆ ಹಾಕುವತ್ತ ಚಿತ್ತ ನೆಟ್ಟರೆ ಬೆಸ್ಟ್.
ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ದೇವದತ್ ಪಡಿಕ್ಕಲ್ ತಮ್ಮ ನೈಜ್ಯ ಆಟವನ್ನು ಆಡಬೇಕಿದೆ. ಇನ್ನು ನಾಯಕ ರಜತ್ ಪಟಿದಾರ್ ಈ ಲೀಗ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಇದೇ ಪ್ರದರ್ಶನ ಮುಂದುವರೆಸಬೇಕಿದೆ. ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಫಿನಿಷರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ. ಇನ್ನು ಟೀಮ್ ಡೇವಿಡ್ ಡೆತ್ ಓವರ್‌ಗಳಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಎದುರಾಳಿ ಬೌಲರ್‌ಗಳನ್ನು ಕಾಡಿದರೆ, ದೊಡ್ಡ ಮೊತ್ತ ಕಲೆ ಹಾಕಬಹುದಾಗಿದೆ.
ಆರ್‌ಸಿಬಿ ಪರ ಗರಿಷ್ಠ ರನ್ ಸಾಧಕರು
ಫಿಲ್ ಸಾಲ್ಟ್, 3 ಪಂದ್ಯ, 102 ರನ್
ವಿರಾಟ್ ಕೊಹ್ಲಿ, 3 ಪಂದ್ಯ, 97 ರನ್
ರಜತ್ ಪಟಿದಾರ್, 3 ಪಂದ್ಯ, 97 ರನ್
ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್‌ಗೆ, ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ ಉತ್ತಮ ಸಾಥ್ ನೀಡಬೇಕಿದೆ. ಈ ಇಬ್ಬರೂ ಬೌಲರ್‌ಗಳು ಪವರ್ ಪ್ಲೇನಲ್ಲಿ ವಿಕೆಟ್ ಬೇಟೆ ನಡೆಸುವ ಅನಿವಾರ್ಯತೆ ಇದೆ. ಇನ್ನು ಮಿಡ್ಲ್ ಓವರ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಬಿಗುವಿನ ದಾಳಿ ನಡೆಸಿ ಭರವಸೆಯನ್ನು ಮೂಡಿಸಿದ್ದಾರೆ. ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ತಮ್ಮ ನೈಜ್ಯ ಸ್ಪಿನ್ ಮೋಡಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ. ಎಡಗೈ ವೇಗಿ ಯಶ್ ದಯಾಳ್ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡದ ಜಯದಲ್ಲಿ ಮಿಂಚಬೇಕಿದೆ.
ಈ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಹೆಚ್ಚು ವಿಕೆಟ್
ಜೋಶ್ ಹ್ಯಾಜಲ್‌ವುಡ್, 3 ಪಂದ್ಯ, 6 ವಿಕೆಟ್
ಯಶ್ ದಯಾಳ್, 3ಪಂದ್ಯ, 3 ವಿಕೆಟ್
ಕೃನಾಲ್ ಪಾಂಡ್ಯ, 3 ಪಂದ್ಯ, 3 ವಿಕೆಟ್,
ಗೆಲುವಿನ ವಿಶ್ವಾಸ
ಮುಂಬೈ ಇಂಡಿಯನ್ಸ್ ಗೆಲುವಿನ ಟ್ರ್ಯಾಕ್‌ಗೆ ಮರಳಲು ಇದು ಬೆಸ್ಟ್ ಚಾನ್ಸ್. ಆಡಿದ ನಾಲ್ಕು ಪಂದ್ಯಗಳಲ್ಲಿ ಮುಂಬೈ ಕೇವಲ ಒಂದು ಗೆಲುವು ದಾಖಲಿಸಿದ್ದು, ಈ ಲೀಗ್ ಈ ತಂಡಕ್ಕೆ ಅಂದುಕೊಂಡಂತೆ ನಡೆಯುತ್ತಿಲ್ಲ. ತವರಿನಲ್ಲಿ ಕೆಕೆಆರ್ ವಿರುದ್ಧ ನೀಡಿದ ಪ್ರದರ್ಶನನ್ನು ಮತ್ತೆ ಮರುಕಳಿಸಬೇಕಿದೆ. ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ನಿಶ್ಚಿತವಾಗಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ರಯಾನ್ ರಿಕೆಲ್ಟನ್ ಭರವಸೆಯ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಅಬ್ಬರ ನಡೆಸದೇ ಇರುವುದು ತಂಡದ ಟೆನ್ಷನ್ ಇಮ್ಮಡಿ ಗೊಳಿಸಿದೆ. ಸೂರ್ಯಕುಮಾರ್ ಯಾದವ್ ಈ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್ ನೀಡಬೇಕಿದೆ.

ಮುಂಬೈ ಪರ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್
ಸೂರ್ಯಕುಮಾರ್ ಯಾದವ್, 4 ಪಂದ್ಯ, 171 ರನ್
ತಿಲಕ್ ವರ್ಮಾ, 4 ಪಂದ್ಯ, 95 ರನ್
ರಯಾನ್ ರಿಕೆಲ್ಟನ್, 4 ಪಂದ್ಯ, 91 ರನ್
ಮುಂಬೈ ತಂಡದ ಪರ ಅನುಭವಿ ಬೌಲರ್‌ಗಳು ಬಿಗುವಿನ ದಾಳಿ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಯುವ ಬೌಲರ್‌ಗಳು ವಿಕೆಟ್ ಬೇಟೆ ನಡೆಸಿ ಭರವಸೆ ಮೂಡಿಸಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಈ ಐಪಿಎಲ್‌ನಲ್ಲಿ ತಮ್ಮ ಬೌಲಿಂಗ್‌ನಲ್ಲಿ ಸುಧಾರಣೆ ತಂದಿದ್ದು, ವಿಶ್ವಾಸ ಮೂಡಿಸಿದ್ದಾರೆ. ಯುವ ವೇಗಿ ಅಶ್ವನಿ ಕುಮಾರ್ ಹಾಗೂ ಸ್ಪಿನ್ ಬೌಲರ್ ವಿಘ್ನೇಶ್ ಪುತ್ತುರ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ದೀಪಕ್ ಚಹಾರ್ ಹಾಗೂ ಟ್ರೆಂಟ್ ಬೌಲ್ಟ್ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಎರಡನೇ ಗೆಲುವಿನ ಕನಸು ನನಸಾಗುತ್ತದೆ. ಸೋಮವಾರ ವಿಜಯ ಲಕ್ಷ್ಮಿ ಯಾರ ಕಡೆ ವಾಲುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ಸ್
ಹಾರ್ದಿಕ್ ಪಾಂಡ್ಯ, 3 ಪಂದ್ಯ, 8 ವಿಕೆಟ್
ಅಶ್ವನಿ ಕುಮಾರ್, 2 ಪಂದ್ಯ, 5 ವಿಕೆಟ್
ವಿಘ್ನೇಶ್ ಪುತ್ತೂರು, 3 ಪಂದ್ಯ, 5 ವಿಕೆಟ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications