Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs MI: ವಿರಾಟ್ ಕೊಹ್ಲಿ ವಿವಾದಾತ್ಮಕ ತೀರ್ಪು: ಸಾಕ್ಷಿ ಮುಂದಿಟ್ಟ ಆರ್‌ಸಿಬಿ

RCB vs MI: RCB reaction on Virat Kohlis controversial dismissal against Mumbai Indians
Kohli 48ಕ್ಕೆ ಔಟ್ ಆದ ನಂತರ ಮಾಡಿದ್ದೇನು | Oneindia Kannada

ಶನಿವಾರ ನಡೆದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಫಾಫ್ ಡು ಪ್ಲೆಸಿಸ್ ಪಡೆ ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಔಟಾದ ರೀತಿಯ ಬಗ್ಗೆ ವಿವಾದವೆದ್ದಿದೆ. ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 48 ರನ್‌ಗಳಿಸಿದ್ದ ವೇಳೆ ವಿರಾಟ್ ಕೊಹ್ಲಿ ಥರ್ಡ್ ಅಂಪೈರ್ ನೀಡಿದ ಗೊಂದಲಕಾರಿ ತೀರ್ಪಿಗೆ ಬಲಿಯಾಗಬೇಕಾಯಿತು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ನೀಡಿದ್ದ 152 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. 50 ರನ್‌ಗಳಿಸಿದ್ದ ಆರಂಭಿಕ ಜೋಡಿ ಬೇರ್ಪಟ್ಟ ಬಳಿಕ ವಿರಾಟ್ ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಉತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 48 ರನ್‌ಗಳಿಸಿ ಅರ್ಧ ಶತಕದತ್ತ ಮುನ್ನುಗ್ಗಿದ್ದರು. ಈ ಸಂದರ್ಭದಲ್ಲಿ ಡೆವಾಲ್ಡ್ ಬ್ರೆವಿಸ್ ಎಸೆತವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಾಗಿರಲಿಲ್ಲ.

ಈ ಚೆಂಡು ಕಾಲಿಗೆ ಬಡಿದದ್ದನ್ನು ಗಮನಿಸಿದ ಅಂಪೈರ್ ಎಲ್‌ಬಿಡಬ್ಲ್ಯು ತೀರ್ಪು ನೀಡಿದರು. ಹೀಗಾಗಿ ವಿರಾಟ್ ಕೊಹ್ಲಿ ಡಿಆರ್‌ಎಸ್ ಮೊರೆ ಹೋದರು. ದೃಶ್ಯಾವಳಿಗಳನ್ನು ಗಮನಿಸಿದ ಥರ್ಡ್ ಅಂಪೈರ್ ಚೆಂಡು ಬ್ಯಾಟ್ ಹಾಗೂ ಪ್ಯಾಡ್‌ಅನ್ನು ಒಂದೇ ಕ್ಷಣದಲ್ಲಿ ಸ್ಪರ್ಶಿಸಿದೆ ಎಂಬುದನ್ನು ತೋರಿಸುತ್ತಿತ್ತು. ಟಿವಿ ಅಂಪಾಯರ್ ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನು ಬದಲಾಯಿಸಲು ಸಾಕಾಗುವಷ್ಟು ಸಾಕ್ಷಿಯಿಲ್ಲ ಎಂದು ನಿರ್ಧರಿಸಿ ಔಟ್ ಎಂದು ಘೋಷಿಸಿದರು.

ಈ ತೀರ್ಪನ್ನು ಗಮನಿಸಿದ ವಿರಾಟ್ ಕೊಹ್ಲಿ ಅಸಮಾಧಾನದಿಂದಲೇ ಕ್ರೀಸ್ ತೊರೆದಿದ್ದರು. ತಮ್ಮ ಅಸಮಾಧಾನವನ್ನು ಬ್ಯಾಟ್ ಮೈದಾನಕ್ಕೆ ಬಾರಿಸುವ ಮೂಲಕ ವ್ಯಕ್ತಪಡಿಸಿದ್ದರು ವಿರಾಟ್ ಕೊಹ್ಲಿ. ಈ ತೀರ್ಪು ತಂಡದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದಾಗಲೇ ಆರ್‌ಸಿಬಿ ಗೆಲುವಿನ ಸನಿಹದಲ್ಲಿತ್ತು. ಅಂತಿಮವಾಗಿ ಆರ್‌ಸಿಬಿ ಈ ಪಂದ್ಯದಲ್ಲಿ ಇನ್ನೂ 9 ವಿಕೆಟ್‌ಗಳು ಬಾಕಿಯಿರುವಂತೆ 7 ವಿಕದೆಟ್‌ಗಳ ಅಂತರದ ಗೆಲುವು ಸಾಧಿಸಿತು.

ಆದರೆ ವಿರಾಟ್ ಕೊಹ್ಲಿಗೆ ನೀಡಿದ ಈ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದೆ. ಅಸಮಾಧಾನಗೊಂಡಿರುವ ಅಭಿಮಾನಿಗಳು ಅಂಪಾಯರ್ ಮೇಲೆ ಕಿಡಿಕಾರಿದ್ದು ಇಂಥಾ ಅಂಪಾಯರ್‌ಗಳಿಗೆ ತಿಳುವಳಿಕೆ ನೀಡಿ ಎಂದು ಆಗ್ರಹಿಸಿದ್ದಾರೆ.

ಇನ್ನು ಆರ್‌ಸಿಬಿ ತಂಡ ಕೂಡ ಈ ವಿಚಾರವಾಗಿ ತನ್ನ ಪ್ರತಿಕ್ರಿಯೆ ನೀಡಿದೆ. ಕ್ರಿಕೆಟ್ ಕಾನೂನುಗಳನ್ನು ರೂಪಿಸುವ ಎಂಸಿಸಿ ಕಾನೂನಿನಲ್ಲಿ ಈ ವಿಚಾರವಾಗಿ ಏನಿದೆ ಎಂಬ ಅಂಶವನ್ನು ಉಲ್ಲೇಖಿಸಿ ಅಂಪಾಯರ್ ತೀರ್ಪು ತಪ್ಪು ಎಂದು ಆರ್‌ಸಿಬಿ ಸಾಕ್ಷಿ ಮುಂದಿಟ್ಟಿದೆ. "ನಾವು ಎಲ್‌ಬಿಡಬ್ಲ್ಯು ನಿರ್ಧಾರಕ್ಕೆ ಸಂಬಂಧಿಸಿದ ಎಂಸಿಸಿಯ ಲಾ ಆಫ್ ಕ್ರಿಕೆಟ್‌ಅನ್ನು ಈಗಷ್ಟೇ ಓದಿದೆವು. ಅದರಲ್ಲಿ ನಮಗೆ ಈ ಮಾಹಿತಿ ದೊರೆತಿದೆ" ಎಂದು ಎಂಸಿಸಿ ನಿಯಮವನ್ನು ಉಲ್ಲೇಖಿಸಿದೆ.

"ಸ್ಟ್ರೈಕ್‌ನಲ್ಲಿರುವ ವ್ಯಕ್ತಿಯನ್ನು ಮತ್ತು ಬ್ಯಾಟ್‌ಅನ್ನು ಒಂದೇ ಕ್ಷಣದಲ್ಲಿ ಸ್ಪರ್ಶಿಸಿದರೆ ಚೆಂಡು ಮೊದಲು ಬ್ಯಾಟ್‌ಅನ್ನು ಸ್ಪರ್ಶಿಸಿದೆ ಎಂದು ನಿರ್ಧರಿಸಲಾಗುತ್ತದೆ" ಎಂದು ಎಂಸಿಸಿ ಕಾನೂನು ಹೇಳುತ್ತದೆ ಎಂದು ಆರ್‌ಸಿಬಿ ಈ ಟ್ವೀಟ್ ಮೂಲಕ ಹಂಚಿಕೊಂಡಿದೆ. ಅಲ್ಲದೆ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ದುರದೃಷ್ಟಕರ ರೀತಿಯಲ್ಲಿ ಫೆವಿಲಿಯನ್‌ಗೆ ಮರಳಬೇಕಾಯಿತು ಎಂದು ಟ್ವೀಟ್‌ನಲ್ಲಿ ಹೇಳಿದೆ.

Story first published: Monday, April 11, 2022, 10:01 [IST]
Other articles published on Apr 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+