Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Smriti Mandhana: ಬ್ಯಾಟಿಂಗ್ ವಿಭಾಗ ಎಡವಿದ್ದು ಸೋಲಿಗೆ ಕಾರಣ: 2ನೇ ಸೋಲಿನ ಬಳಿಕ ಸ್ಮೃತಿ ಪ್ರತಿಕ್ರಿಯೆ

RCB vs MI: Smriti Mandhana reaction after rcb defeat against Mumbai Indians

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಸತತ ಎರಡನೇ ಸೋಲು ಅನುಭವಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಆರ್‌ಸಿಬಿ ಮಹಿಳಾ ತಂಡ 9 ವಿಕೆಟ್‌ಗಳ ಅಂತರದ ಬೃಹತ್ ಸೋಲು ಕಂಡಿದೆ. ಈ ಸೋಲಿನ ಬಳಿಕ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಪ್ರತಿಕ್ರಿಒಯೆ ನೀಡಿದ್ದು ತಂಡದ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

"ಇಂಥಾ ಬ್ಯಾಟಿಂಗ್ ಪಿಚ್‌ನಲ್ಲಿ ನಾವು ಹೆಚ್ಚಿನ ರನ್‌ಗಳಿಸಲು ಸಾಧ್ಯವಾಗಿದ್ದರೆ ಸಂತಸವಾಗುತ್ತಿತ್ತು. ಇಂದು ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲಿಲ್ಲ. ಖಂಡಿತವಾಗಿಯೂ ನಾವು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತೇವೆ. ನನ್ನನ್ನೂ ಸೇರಿದಂತೆ ಕೆಲ ಬ್ಯಾಟರ್‌ಗಳು 20ರ ಆಸುಪಾಸಿನಲ್ಲಿ ವಿಕೆಟ್ ಕಳೆದುಕೊಂಡೆವು. ಹೆಚ್ಚಿನ ಅವಧಿ ಬ್ಯಾಟಿಂಗ್ ನಡೆಸಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯಗಳಲ್ಲಿ ಒಮ್ಮೆ ನೆಲೆಯೂರಿದ ಬಳಿಕ ಹೆಚ್ಚಿನ ಅವಧಿ ನಾವು ಬ್ಯಾಟಿಂಗ್ ನಡೆಸಲಿದ್ದೇವೆ. ಯಾರಾದರೂ ಒಬ್ಬರು ಬ್ಯಾಡರ್ 18 ಓವರ್‌ಗಳ ವರೆಗೆ ಬ್ಯಾಟಿಂಗ್ ನಡೆಸಲು ಸಾಧ್ಯವಾದರೆ ನಾವು ಉತ್ತಮ ಮೊತ್ತ ಗಳಿಸಲಿದ್ದೇವೆ" ಎಂದಿದ್ದಾರೆ ಸ್ಮೃತಿ ಮಂಧಾನ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದ ಖ್ಯಾತನಾಮ ಆಟಗಾರ್ತಿಯರೆಲ್ಲರೂ ಮತ್ತೆಮ್ಮೆ ವೈಫಲ್ಯ ಅನುಭವಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ಆದರೆ ಅದರ ಹೊರತಾಗಿಯೂ ಕೆಳ ಕ್ರಮಾಂಕದ ಬ್ಯಾಟರ್‌ಗಳು ಆರ್‌ಸಿಬಿ ಹೋರಾಟವನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಂಡರು. ಹೀಗಾಗಿ ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಆರ್‌ಸಿಬಿ ಆಘಾತಕಾರಿ ಪ್ರದರ್ಶನ ನೀಡಿದ್ದು ಮುಂಬೈ ಇಂಡಿಯನ್ಸ್ ಇನ್ನೂ 34 ಎಸೆತಗಳು ಬಾಕಿಯಿರುವಂತೆ ಈ ಮೊತ್ತವನ್ನು ಬೆನ್ನಟ್ಟಿದೆ.

ಮುಂಬೈ ಇಂಡಿಯನ್ಸ್ ಆಡುವ ಬಳಗ: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮನಿ ಕಲಿತಾ, ಸೈಕಾ ಇಶಾಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್(ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಮೇಗನ್ ಶುಟ್, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ರೇಣುಕಾ ಠಾಕೂರ್ ಸಿಂಗ್

Story first published: Tuesday, March 7, 2023, 2:30 [IST]
Other articles published on Mar 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+