
ಶೂನಲ್ಲಿ ವಿಶೇಷ ಸಂದೇಶ
ಬ್ಯಾಟಿಂಗ್ ಸ್ಟಾರ್ ರೋಹಿತ್ ಶರ್ಮಾ ಬಹಳ ಹಿಂದಿನಿಂದಲೂ ಭಾರತದಲ್ಲಿ ಒಂದು ಕೊಂಬಿನ ಘೇಂಡಾಮೃಗಗಳ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ರೋಹಿತ್, 'ಘೇಂಡಾಮೃಗಗಳನ್ನು ಉಳಿಸಿ' ಎನ್ನುವ ಸಂದೇಶ ಬರೆದಿದ್ದ ಶೂನೊಂದಿಗೆ ಮೈದಾನಕ್ಕಿಳಿದಿದ್ದರು.
ರೋಹಿತ್ ಶರ್ಮಾ ಟ್ವೀಟ್
ಈ ಬಗ್ಗೆ ಸ್ವತಃ ರೋಹಿತ್ ಅವರೇ ಟ್ವೀಟ್ ಮಾಡಿದ್ದರು. 'ನೆನ್ನೆ ನಾನು ಮೈದಾನಕ್ಕಿಳಿಯುವಾಗ ಅದು ಕೇವಲ ಪಂದ್ಯವಾಗಿರಲಿಲ್ಲ, ಅದಕ್ಕಿಂತಲೂ ಮಿಗಿಲಾಗಿತ್ತು. ಕ್ರಿಕೆಟ್ ಆಡೋದು ಮತ್ತು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿಸುವುದು ನನ್ನ ಕನಸಾಗಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸಿ ಎಲ್ಲರೂ ಮುಂದಡಿಯಿಡಬೇಕಾಗಿದೆ. ನಾನು ಇಷ್ಟಪಡುವುದನ್ನು ಮಾಡುವಾಗ ಮೈದಾನದಲ್ಲಿ ನನ್ನೊಂದಿಗೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರಣವನ್ನು ತೆಗೆದುಕೊಳ್ಳುವ ಸಂಗತಿ ನನಗೆ ವಿಶೇಷವೆನಿಸುತ್ತದೆ,' ಎಂದು ಟ್ವೀಟ್‌ನಲ್ಲಿ ರೋಹಿತ್ ಬರೆದುಕೊಂಡಿದ್ದರು. ಈ ಟ್ವೀಟ್‌ನಲ್ಲಿ ರೋಹಿತ್ ಶರ್ಮಾ ವಿಶೇಷ ಸಂದೇಶ ಬರೆದಿರುವ ಶೂನ ಚಿತ್ರ ಕೂಡ ಇತ್ತು.

ಬಲು ರೋಚಕ ಪಂದ್ಯ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 4ನೇ ಓವರ್ ವೇಳೆ ಕೊಹ್ಲಿಯ ಥ್ರೋ ಮತ್ತು ಯುಜುವೇಂದ್ರ ಚಾಹಲ್ ಫೀಲ್ಡಿಂಗ್‌ನಿಂದಾಗಿ ರನ್ ಔಟ್ ಆಗಿ 19 ರನ್‌ನೊಂದಿಗೆ ನಿರಾಶೆ ಅನುಭವಿಸಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ, ಕ್ರಿಸ್ ಲಿನ್ 49, ಸೂರ್ಯಕುಮಾರ್ ಯಾದವ್ 35, ಇಶಾನ್ ಕಿಶಾನ್ 28 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, 20 ಓವರ್‌ಗೆ 8 ವಿಕೆಟ್ ಕಳೆದು 160 ರನ್ ರನ್ ಬಾರಿಸಿ ಗೆಲುವನ್ನಾಚರಿಸಿತು.


Click it and Unblock the Notifications
