ಬಹುನೀರಿಕ್ಷಿತ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯಗಳ ನಡುವಿನ ಪಂದ್ಯವನ್ನು ಫಾಫ್ ಡುಪ್ಲೇಸಿಸ್ ಪಡೆ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಮೂಲಕ ಐಪಿಎಲ್ 2024ರಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಈವರೆಗೆ ನಡೆದ ಆರೂ ಪಂದ್ಯಗಳನ್ನು ತವರಿನ ತಂಡವೇ ಗೆದ್ದಿರುವುದು ವಿಶೇಷವಾಗಿತ್ತು. ಈ ಸಾಲಿಗೆ ಮತ್ತೊಂದು ಪಂದ್ಯ ಸೇರಿಕೊಂಡಿದೆ.
ಪಂಜಾಬ್ ನೀಡಿದ್ದ 177 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವವರೆಗೂ ಸುಲಭವಾಗಿ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಆದರೆ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ, ರನ್ ರೇಟ್ ಹಿಗ್ಗಿತು. ಆದರೆ ಡೆತ್ ಓವರ್‌ಗಳಲ್ಲಿ ಆಡುವ ಕಲೆಯನ್ನು ಕರಗತ್ ಮಾಡಿಕೊಂಡಿರುವ ದಿನೇಶ್ ಕಾರ್ತಿಕ್ ಸೊಗಸಾದ ಇನ್ನಿಂಗ್ಸ್ ಕಟ್ಟಿ ತಂಡದ ಜಯದಲ್ಲಿ ಮಿಂಚಿದರು. ಇವರು 10 ಎಸೆತಗಳಲ್ಲಿ 280 ಸ್ಟ್ರೈಕ್ ರೇಟ್‌ನಲ್ಲಿ 28 ರನ್ ಸಿಡಿಸಿದರು.

ಗೆಲುವಿಗೆ ಕಾರಣವಾದ ಅಂಶಗಳು ಯಾವವು?
ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಭರವಸೆಯ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಹಗೂ ಯಶ್ ದಯಾಳ್ ಬಿಗುವಿನ ದಾಳಿ ಸಂಘಟಿಸಿದರು. ಇವರಿಬ್ಬರೂ 8 ಓವರ್ ಬೌಲಿಂಗ್ ಮಾಡಿ 49 ರನ್ ನೀಡಿದರು. ಸಿರಾಜ್ 6.50 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 2 ವಿಕೆಟ್ ಕಬಳಿಸಿದರೆ, ಯಶ್ ದಯಾಳ್ 5.75ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 1 ವಿಕೆಟ್ ಕಬಳಿಸಿದರು.
ಬ್ಯಾಟಿಂಗ್‌ನಲ್ಲಿ ಒನ್ ಆಂಡ್ ಓನ್ಲಿ ವಿರಾಟ್ ಕೊಹ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಇವರು 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 77 ರನ್ ಸಿಡಿಸಿದರು. ಡೆತ್ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಜವಾಬ್ದಾರಿ ಅರಿತು ಬ್ಯಾಟ್ ಮಾಡಿದರು.
ಟರ್ನಿಂಗ್ ಪಾಯಿಂಟ್ ಯಾವುದು?
ಮೊದಲ ಓವರ್‌ನಲ್ಲಿ ವಿರಾಟ್ ಕೊಹ್ಲಿ ಅವರ ಕ್ಯಾಚ್‌ನ್ನು ಪಂಜಾಬ್ ಕೈ ಚೆಲ್ಲಿತು. ಇದು ನಿಜಕ್ಕೂ ದುಬಾರಿ ಆಗಿ ಪರಿಣಮಿಸಿತು. ಅಲ್ಲದೆ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ಸಂಘಟಿಸುವಲ್ಲಿ ವಿಫಲವಾದ ಪಂಜಾಬ್ ನಿರಾಸೆ ಕಂಡಿತು. ದಿನೇಶ್ ಕಾರ್ತಿಕ್ ತಮ್ಮಲ್ಲಿ ಇನ್ನು ಕ್ರಿಕೆಟ್ ಬಾಕಿ ಇದೆ ಎಂದು ಸಾರಿದರು.

ಪವರ್ ಪ್ಲೇನಲ್ಲಿ ಆರ್‌ಸಿಬಿ ಹೇಗೆ ಬ್ಯಾಟಿಂಗ್ ಮಾಡಿತು?
ನಿಶ್ಚಿತವಾಗಿ ಆರ್‌ಸಿಬಿ ತಾನು ಅಂದುಕೊಂಡ ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಫಾಫ್ ಡುಪ್ಲೇಸಿಸ್ 3 ರನ್ ಗಳಿಸಿ ಕಗಿಸೊ ರಬಾಡ್‌ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಬಿದ್ದರೂ ಧೃತಿ ಗೆಡದ ಆರ್‌ಸಿಬಿ ಮೊದಲ ನಾಲ್ಕು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 41 ರನ್ ಸೇರಿಸಿತು.
ಮಿಡ್ಲ್ ಓವರ್‌ಗಳಲ್ಲಿ ಆರ್‌ಸಿಬಿ ಬ್ಯಾಟಿಂಗ್ ಹೇಗಿತ್ತು?
ಮಿಡ್ಲ್ ಓವರ್‌ಗಳಲ್ಲಿ ಆರ್‌ಸಿಬಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ವೇಳೆ ಆರ್‌ಸಿಬಿ 4 ವಿಕೆಟ್ ಕಳೆದುಕೊಂಡು 89 ರನ್ ಸಿಡಿಸಿತು.
ಡೆತ್ ಓವರ್‌ನಲ್ಲಿ ನಡೆದಿದ್ದೇನು?
15.6ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಚಿನ್ನಸ್ವಾಮಿ ಅಂಗಳ ಪಿನ್ ಡ್ರಾಪ್ ಸೈಲೆಂಟ್ ಆಗಿತ್ತು. ಕೊನೆಯ ನಾಲ್ಕು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 47 ರನ್ ಅವಶ್ಯಕತೆ ಇತ್ತು. 17ನೇ ಓವರ್‌ನಲ್ಲಿ 11 ರನ್, 18ನೇ ಓವರ್‌ನಲ್ಲಿ 13 ರನ್ ಸಿಡಿಸಿದ ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲೋಮ್ರೊರ್ ಜೋಡಿ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿತು. 19ನೇ ಓವರ್ ಬೌಲ್ ಮಾಡಿದ ಹರ್ಷಲ್ ಪಟೇಲ್ ಸಹ 13 ರನ್ ನೀಡಿದರು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಬಾರಿಸಿ ಒತ್ತಡವನ್ನು ಎದುರಾಳಿ ತಂಡದ ಮೇಲೆ ಹೇರಿದರು. ನಂತರ ಅರ್ಷದೀಪ್ ಸಿಂಗ್ ಒಂದು ವೈಡ್ ಹಾಕಿದರು. ಎರಡನೇ ಎಸೆತದಲ್ಲಿ ಕಾರ್ತಿಕ್ ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ಮೊದಲ ಗೆಲುವಿನ ಮಾಲೆ ತೊಡಿಸಿದರು.

ಪಂಜಾಬ್ ಕಿಂಗ್ಸ್ ಪವರ್ ಪ್ಲೇನಲ್ಲಿ ಆಡಿದ್ದು ಹೇಗೆ?
ಪಂಜಾಬ್ ಕಿಂಗ್ಸ್ ಮೊದಲ ಪವರ್ ಪ್ಲೇನಲ್ಲಿ ಕೇವಲ 24 ರನ್ ಮಾಡಿ ಒಂದು ವಿಕೆಟ್ ಕಳೆದುಕೊಂಡಿತು. ಸ್ಟಾರ್ ಆಟಗಾರ ಜಾನಿ ಬೇರ್‌ಸ್ಟೋ ಅವರಿಗೆ ಖೆಡ್ಡಾ ತೋಡವಲ್ಲಿ ಸಿರಾಜ್ ಸಫಲರಾದರು. ಇನ್ನು ಮಿಡ್ಲ್ ಓವರ್‌ನಲ್ಲಿ ಪಂಜಾಬ್ ಮೂರು ವಿಕೆಟ್ ಕಳೆದುಕೊಂಡು 108 ರನ್ ಕಲೆ ಹಾಕಿತು.
ಡೆತ್ ಓವರ್‌ಗಳಲ್ಲಿ ನೀಡಿದ ರನ್ ಎಷ್ಟು
17ನೇ ಓವರ್‌ನ್ನು ಅಲ್ಜಾರಿ ಜೋಸೆಫ್ ಬೌಲ್ ಮಾಡಿದರು. ಈ ಓವರ್‌ನಲ್ಲಿ ಅಲ್ಜಾರಿ ಜೋಸೆಫ್ ಕೇವಲ 7 ರನ್ ನೀಡಿದರು. 18ನೇ ಓವರ್ ಬೌಲ್ ಮಾಡಿದ ಯಶ್ ದಯಾಳ್ 13 ರನ್ ನೀಡಿ ಒಂದು ವಿಕೆಟ್ ಪಡೆದರು. 19ನೇ ಓವರ್‌ನ್ನು ಮೊಹಮ್ಮದ್ ಸಿರಾಜ್ ಎಸೆದರು. ಈ ಓವರ್‌ನಲ್ಲಿ ಕೇವಲ ನಾಲ್ಕು ರನ್ ನೀಡಿ ಒಂದು ವಿಕೆಟ್ ಪಡೆದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಅಲ್ಜಾರಿ ಜೋಸೆಫ್ 20 ರನ್ ನೀಡಿ ಕೈ ಸುಟ್ಟುಕೊಂಡರು. ಡೆತ್ ಓವರ್‌ನಲ್ಲಿ ಆರ್‌ಸಿಬಿ 44 ರನ್ ನೀಡಿತು.
ಪಂದ್ಯದಲ್ಲಿ ದಾಖಲಾದ ಬೌಂಡರಿ, ಸಿಕ್ಸರ್‌ಗಳೆಷ್ಟು?
ಪಂಜಾಬ್ ಪರ 15 ಬೌಂಡರಿ, 8 ಸಿಕ್ಸರ್
ಆರ್‌ಸಿಬಿ ಪರ 18 ಬೌಂಡರಿ, 6 ಸಿಕ್ಸರ್