IPL 2024 RCB vs PBKS: ಹೋಳಿ ದಿನದಂದು ಪಂಜಾಬ್ ವಿರುದ್ಧ ಗೆಲುವಿನ ರಂಗು ಪಡೆಯಲು ಸಜ್ಜಾದ ಆರ್‌ಸಿಬಿ
ಸೋಮವಾರ, ಮಾರ್ಚ್ 25ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ತಮ್ಮ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿಗೆ ವಾಪಸ್ಸಾಗಿದೆ.
ಹೋಳಿ ಹಬ್ಬದ ದಿನದಂದು ಬೆಂಗಳೂರು ಅಭಿಮಾನಿಗಳ ಎದುರು ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ತಮ್ಮ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ.

ತವರಿನ ಅಂಗಳದಲ್ಲಿ ಆರ್‌ಸಿಬಿ ಸ್ಥಿರವಾದ ಯಶಸ್ಸನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಇದು ಕೆಲ ವರ್ಷಗಳಿಂದ ತಮ್ಮ ಬೌಲರ್‌ಗಳಿಗೆ ಕಠಿಣ ಬೇಟೆಯಾಗುತ್ತಿದೆ. ಗೆಲುವನ ನಗೆ ಬೀರಬೇಕಾದರೆ, ಆರ್‌ಸಿಬಿ ಬೌಲಿಂಗ್ ದಾಳಿಯು ತವರಿನಲ್ಲಿ ಪ್ರಾಬಲ್ಯ ಸಾಧಿಸಬೇಕಿದೆ.
ತನ್ನ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರೂ, ಆರ್‌ಸಿಬಿ ಅದನ್ನು ತವರಿನಲ್ಲಿ ಯಶಸ್ಸಿಗೆ ಪರಿವರ್ತಿಸಿಲ್ಲ. 40 ಪಂದ್ಯಳನ್ನು ಗೆದ್ದಿದೆ ಮತ್ತು ಫೇವರಿಟ್ ಸ್ಥಳದಲ್ಲಿ ಉಳಿದ ಪಂದ್ಯಗಳನ್ನು ಸೋತಿದೆ.
2024ರ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 18.4 ಓವರ್‌ಗಳಲ್ಲಿ 174 ರನ್ ಗಳಿಸುವ ಮೂಲಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದೌರ್ಬಲ್ಯ ಮತ್ತೊಮ್ಮೆ ಬಹಿರಂಗಗೊಂಡಿತು.

ಆರ್‌ಸಿಬಿ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಫಾರ್ಮ್‌ನಿಂದ ಹೊರಗುಳಿದಿದ್ದರು. ಆದರೆ ದುಬಾರಿ ಮೊತ್ತಕ್ಕೆ ಸಹಿ ಮಾಡಿದ ಅಲ್ಜಾರಿ ಜೋಸೆಫ್ ಅವರನ್ನು ಸೂಪರ್ ಕಿಂಗ್ಸ್ ಚೆನ್ನೈ ಬ್ಯಾಟರ್‌ಗಳು ದಂಡಿಸಿದರು.
ಇನ್ನು ಗುಜರಾತ್ ಟೈಟಾನ್ಸ್‌ನಿಂದ ಖರೀದಿಸಿದ ಯಶ್ ದಯಾಳ್, ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ತಲಾ 2 ವಿಕೆಟ್‌ಗಳೊಂದಿಗೆ ತಮ್ಮ ಅತ್ಯಂತ ಪ್ರಭಾವಶಾಲಿ ಬೌಲರ್ ಆಗಿ ಕಾಣಿಸಿಕೊಂಡರು.
ಪಂಜಾಬ್ ಕಿಂಗ್ಸ್ ಕಟ್ಟಿಹಾಕಬಲ್ಲರೇ ಆರ್‌ಸಿಬಿ ಬೌಲರ್‌ಗಳು?
ಸಿಎಸ್‌ಕೆ ವಿರುದ್ಧ ಆರ್‌ಸಿಬಿ 7 ಬೌಲರ್‌ಗಳನ್ನು ಬಳಸಿದ್ದರೂ, ತಮ್ಮ ಆರಂಭಿಕ ಪಂದ್ಯದಲ್ಲಿ ಆಕರ್ಷಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ದಕ್ಷಿಣಕ್ಕೆ ಪ್ರಯಾಣಿಸಿರುವ ಪಂಜಾಬ್ ಕಿಂಗ್ಸ್ ತಂಡವನ್ನು ತಡೆಯಬೇಕಾದರೆ ಬೌಲಿಂಗ್ ವಿಭಾಗ ಸುಧಾರಿಸಬೇಕು.
ಬಣ್ಣದ ಹಬ್ಬವಾದ ಹೋಳಿ ದಿನದಂದು ಆರ್‌ಸಿಬಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಮತ್ತು ಐಪಿಎಲ್ 2024ರಲ್ಲಿ ತಮ್ಮ ತಂಡವು ತಮ್ಮ ಗೆಲುವಿನ ಖಾತೆಯನ್ನು ತೆರೆಯಲು ಬಯಸುತ್ತಾರೆ.
ಆರ್‌ಸಿಬಿ ವೇಗಿಗಳು ಬೆಂಗಳೂರಿನಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಿಲ್ಲ. ಹೀಗಾಗಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಬಹುದು. ಎಡಗೈ ವೇಗಿ ರೀಸ್ ಟೋಪ್ಲಿ ಅಥವಾ ಟಾಮ್ ಕರ್ರಾನ್ ಉತ್ತಮ ಆಯ್ಕೆಯಾಗಲಿದ್ದಾರೆ.
ಆರ್‌ಸಿಬಿ ತಮ್ಮ ವೇಗದ ಫೈರ್‌ಪವರ್ ಸೇರಿಸಲು ಬೆಂಚ್‌ನಲ್ಲಿ ಆಕಾಶ್ ದೀಪ್ ಮತ್ತು ಸ್ಥಳೀಯ ಪ್ರತಿಭೆ ವಿಜಯ್‌ಕುಮಾರ್ ವೈಶಾಕ್ ಅವರಂತಹವರನ್ನು ಸಹ ಹೊಂದಿದೆ.
ಮತ್ತೊಂದೆಡೆ, ಸಿಎಸ್‌ಕೆ ವಿರುದ್ಧದ ಸಾಮಾನ್ಯ ಪ್ರದರ್ಶನದ ನಂತ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಉತ್ತಮ ಪ್ರದರ್ಶನ ನೀಡಲು ಆರ್‌ಸಿಬಿ ಬಯಸುತ್ತದೆ.
ಆರ್‌ಸಿಬಿ ತಂಡದಲ್ಲಿರುವ ಇಂಗ್ಲೆಂಡ್‌ನ ಬಿಗ್ ಹಿಟ್ಟರ್ ವಿಲ್ ಜ್ಯಾಕ್ಸ್ ಅವರನ್ನು ಅಗ್ರಸ್ಥಾನದಲ್ಲಿ ಬಳಸಿಕೊಳ್ಳುವ ಬಗ್ಗೆ ಯೋಚಿಸಬಹುದು ಮತ್ತು ಹೆಚ್ಚುವರಿ ಬೌಲಿಂಗ್ ಆಯ್ಕೆಯಾಗಿಯೂ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಸಂಭಾವ್ಯ ಆಡುವ 11ರ ಬಳಗ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಮಯಾಂಕ್ ಡಾಗರ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಟಾಮ್ ಕರ್ರಾನ್,
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications