RCB vs PBKS IPL 2025: ಪಂಜಾಬ್ ತಂಡವನ್ನು 157 ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ
ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವನ್ನು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಸೇರಿಸಿತು. ಆರ್‌ಸಿಬಿ ತಂಡದ ಸ್ಪಿನ್ ಬೌಲರ್‌ಗಳಾದ ಸುಯೇಶ್ ಶರ್ಮಾ, ಕೃಣಾಲ್ ಪಾಂಡ್ಯ ಅಬ್ಬರದ ಬೌಲಿಂಗ್ ಪ್ರದರ್ಶನ ನೀಡಿದರು.
ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಈ ವೇಳೆ ಪಂಜಾಬ್ ಕಿಂಗ್ಸ್ ತಂಡದ ಭರವಸೆಯ ಆರಂಭಿಕ ಆಟಗಾರರ ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 42 ರನ್ ಸೇರಿಸಿತು. ಈ ಜೋಡಿಗೆ ಬ್ರೇಕ್ ಹಾಕುವಲ್ಲಿ ಕೃಣಾಲ್ ಪಾಂಡ್ಯ ಯಶಸ್ವಿಯಾದರು.

ಪಂದ್ಯದ ಐದನೇ ಓವರ್‌ನ ಮಾಡಲು ಬಂದ ಕೃಣಾಲ್ ಪಾಂಡ್ಯ ತಮ್ಮ ಈ ಓವರ್‌ನ ಎರಡನೇ ಎಸೆತದಲ್ಲಿ ಆರಂಭಿಕ ಪ್ರಿಯಾಂಶ್ ಆರ್ಯಗೆ ಖೆಡ್ಡಾ ತೋಡಿದರು. ಕೃಣಾಲ್ ಪಾಂಡ್ಯ ಎಸೆದ ಗಂಟೆಗೆ 96 ಕಿಲೋ ಮೀಟರ್ ವೇಗದ ಚೆಂಡನ್ನು ಸ್ಟ್ರೈಟ್ ಸಿಕ್ಸರ್ ಬಾರಿಸಲು ಹೋಗಿ ಟ್ರೀಮ್ ಡೇವಿಡ್‌ಗೆ ಕ್ಯಾಚ್ ನೀಡಿದರು. ಪ್ರಿಯಾಂಶ್ ಆರ್ಯ 15 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 22 ರನ್ ಸಿಡಿಸಿದರು. ಪ್ರಭಸಿಮ್ರನ್ ಸಿಂಗ್ ಸಹ ಹೆಚ್ಚು ಹೊತ್ತು ನಿಂತು ಬ್ಯಾಟ್ ಮಾಡಲಿಲ್ಲ. ಇವರ ಆಟಕ್ಕೂ ಕೃಣಾಲ್ ಬ್ರೇಕ್ ಹಾಕಿದರು. ಪ್ರಭಸಿಮ್ರನ್ ಸಿಂಗ್ ತಾವು ಎದುರಿಸಿದ 17ನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಬೌಂಡರಿ ಲೈನ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಟೀಮ್ ಡೇವಿಡ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ಶ್ರೇಯಸ್ ಆಟಕ್ಕೆ ಬ್ರೇಕ್
ಇನ್ನು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದ ರೊಮಾರಿಯೊ ಶೆಪರ್ಡ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇವರು 8ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಖೆಡ್ಡಾ ತೋಡಿದರು. ಇವರು ಸಹ ತಮ್ಮ ಬೌಲಿಂಗ್ ಮೂಲಕ ಶ್ರೇಯಸ್ ಅಯ್ಯರ್ ಅವರಿಗೆ ಔಟ್ ಮಾಡಿದರು. ಶ್ರೇಯಸ್ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಕೃಣಾಲ್ ಪಾಂಡ್ಯ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ಇನಿಂಗ್ಸ್‌ನ ಒಂಬತ್ತನೇ ಓವರ್‌ನ್ನು ಸುಯೇಶ್ ಶರ್ಮಾ ಮಾಡಲು ಬಂದರು. ಇವರು ಈ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜೋಶ್ ಇಂಗ್ಲೀಷ್ ಒಂದು ರನ್ ಪಡೆದರು. ಆದರೆ ನೆಹಾಲ್ ವಧೇರಾ ಎರಡು ರನ್ ಪಡಿಯುವ ಆಸೆಯಲ್ಲಿ ಇದ್ದರು. ಚೆಂಡು ಬೌಲರ್ ಎಂಡ್ ತಲುಪಿದಾಗ ನೇಹಾಲ್ ಸಹ ಬೌಲರ್ ಎಂಡ್ ತಲುಪಿ ಆಗಿತ್ತು. ವಿರಾಟ್ ಕೊಹ್ಲಿ ಚೆಂಡನ್ನು ಜಿತೇಶ್ ಶರ್ಮಾ ಅವರಿಗೆ ಚೆಂಡನ್ನು ನೀಡಿ ನೆಹಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಸ್ಪಿನ್ ಕಮಾಲ್
ಮಧ್ಯಮ ಕ್ರಮಾಂಕದ ಜೋಶ್ ಇಂಗ್ಲೀಷ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿ ಸುಯೇಶ್ ಶರ್ಮಾ ಅವರ ಸ್ಪಿನ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಇದೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ 1 ರನ್ ಬಾರಿಸಿದ್ದಾಗ ಸುಯೇಶ್ ತೋಡಿದ ಖೆಡ್ಡಾಗೆ ಬಲಿಯಾದರು.

ಏಳನೇ ವಿಕೆಟ್‌ಗೆ ಶಾಶಂಕ್ ಸಿಂಗ್ ಹಾಗೂ ಮಾರ್ಕೊ ಜಾನ್ಸನ್ 37 ಎಸೆತಗಳಲ್ಲಿ ಅಜೇಯ 43 ರನ್ ಸಿಡಿಸಿದರು. ಶಶಾಂಕ್ ಸಿಂಗ್ 33 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ ಅಜೇಯ 31 ರನ್ ಸಿಡಿಸಿದರೆ, ಮಾರ್ಕೊ ಜಾನ್ಸನ್ 2 ಸಿಕ್ಸರ್ ಸಹಾಯದಿಂದ ಅಜೇಯ 25 ರನ್ ಸಿಡಿಸಿ ಔಟ್ ಆದರು.
ಆರ್‌ಸಿಬಿ ತಂಡದ ಕೃಣಾಲ್ ಪಾಂಡ್ಯ, ಸುಯೇಶ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು. ರೋಮಿಯೋ ಒಂದು ವಿಕೆಟ್ ಕಬಳಿಸಿದಿರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications