Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs PBKS IPL Final: 18 ನಮ್ದೇ: ಆರ್‌ಸಿಬಿ ಮುಡಿಗೆ ಐಪಿಎಲ್‌ ಪಟ್ಟ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳು ಹಾಗೂ ತಂಡದ 17 ವರ್ಷದ ಕನಸು ಕೊನೆಗೂ ಸಾಕಾರವಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ದಾಖಲೆಯನ್ನು ಬರೆಯಿತು. ಮೂರು ಐಪಿಎಲ್‌ ಫೈನಲ್‌ನಲ್ಲಿ ನಿರಾಸೆ ಹೊಂದಿದ್ದ ಆರ್‌ಸಿಬಿ, ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾಯಿತು. ಈ ಮೂಲಕ ರಜತ್‌ ಪಾಟಿದಾರ್‌ ಮುಂದಾಳತ್ವದ ಆರ್‌ಸಿಬಿ ಐಪಿಎಲ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಿತು.

18ನೇ ಆವೃತ್ತಿಯ ಐಪಿಎಲ್‌ ನಮ್ಮದೇ ಎನ್ನುವ ಆಸೆಯೊಂದಿಗೆ ಆರ್‌ಸಿಬಿ ಅಭಿಯಾನವನ್ನು ಆರಂಭಿಸಿತು. ಅಮೋಘ ಪ್ರದರ್ಶನ ನೀಡಿದ ಆರ್‌ಸಿಬಿ ತನ್ನ ಘೋಷ ವಾಕ್ಯ ಈ ಸಲಾ ಕಪ್‌ ನಮ್ದೇ ಎನ್ನುವುದನ್ನು ನಿಜವಾಗಿಸಿತು. ಅಹಮದಾಬಾದ್‌ ಮೈದಾನದಲ್ಲಿ ಕೆಂಪು ಸಮೂದ್ರದ ಮಧ್ಯೆ ಆರ್‌ಸಿಬಿ ಪಂಜಾಬ್‌ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಆರ್‌ಸಿಬಿ 17 ವರ್ಷಗಳ ಬಳಿಕ ಮಾಡದ ಸಾಧನೆಯನ್ನು 2025ರಲ್ಲಿ ಮಾಡಿ ಬೀಗಿತು.

RCB vs PBKS IPL Final RCB Ends 17-Year Wait Lifts Maiden IPL Trophy

ಆರ್‌ಸಿಬಿ ಈ ಆವೃತ್ತಿಯಲ್ಲಿ ಮಾಡಿಕೊಂಡ ಪ್ಲ್ಯಾನ್‌ನಂತೆ ಆಡಿತು. ಐಪಿಎಲ್‌ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಒಂದೇ ಆವೃತ್ತಿಯಲ್ಲಿ ತವರಿನಾಚೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ ಆರ್‌ಸಿಬಿ 17 ವರ್ಷಗಳಿಂದ ಮಾಯಾ ಜಿಂಕೆಯಂತೆ ಕಾಡಿದ ಆರ್‌ಸಿಬಿ ತಂಡದ ಆಸೆಯನ್ನು ಈ ಬಾರಿ ರಜತ್‌ ಪಾಟಿದಾರ್‌ ಪಡೆ ಸಫಲವಾಗಿಸಿತು.

ವಿರಾಟ್ ಕೊಹ್ಲಿ ಅವರ ವಾರ್ಡ್‌ರೂಮ್‌ನಲ್ಲಿ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಗಳು ಇದ್ದವು. ಆದರೆ ಐಪಿಎಲ್‌ ಟ್ರೋಫಿ ಮಾತ್ರ ಇರಲಿಲ್ಲ. ಆದರೆ ಈ ಬಾರಿ ಈ ಒಂದು ಬರ ಸಹ ಈಗ ಕೊನೆಗೊಂಡಿತು. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್‌ 20 ಓವರ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 184 ರನ್‌ ಸೇರಿಸಿ ಸೋಲು ಕಂಡಿತು.

ಉತ್ತಮ ಆರಂಭ

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಪ್ರಿಯಾಂಶ್ ಆರ್ಯ (24) ಹಾಗೂ ಪ್ರಭಸಿಮ್ರನ್ ಸಿಂಗ್ (26) ಮೊದಲ ವಿಕೆಟ್‌ಗೆ 43 ರನ್‌ ಜೊತೆಯಾಟ ನೀಡಿತು. ಇನ್ನು ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ನಾಯಕ ಶ್ರೇಯಸ್ ಅಯ್ಯರ್‌ (1) ನಿರಾಸೆ ಅನುಭವಿಸಿದರು. ಮೂರನೇ ಕ್ರಮಾಂಕದಲ್ಲಿ ಜೋಶ್‌ ಇಂಗ್ಲಿಷ್‌ (39), ನೇಹಾಲ್‌ ವಧೇರಾ (15) ಆರ್‌ಸಿಬಿ ತಂಡದ ಬೌಲರ್‌ಗಳ ತಂತ್ರವನ್ನು ಅರಿಯುವಲ್ಲಿ ವಿಫಲರಾದರು. ಶಶಾಂಕ್‌ ಸಿಂಗ್‌ 6 ಸಿಕ್ಸರ್, 3 ಬೌಂಡರಿ ನೆರವಿನಿಂದ ಅಜೇಯ 61 ರನ್‌ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಆರ್‌ಸಿಬಿ ತಂಡದ ಪರ ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್‌ ಕಬಳಿಸಿದರು.

ಸಂಘಟಿತ ಆಟ

ಆರ್‌ಸಿಬಿ ತಂಡದ ಬ್ಯಾಟಿಂಗ್ ಸಂಘಟಿತ ಆಟದ ಪ್ರದರ್ಶನ ನೀಡಿತು. ಈ ವೇಳೆ ಫಿಲ್‌ ಸಾಲ್ಟ್ (16) ಹಾಗೂ ವಿರಾಟ್ ಕೊಹ್ಲಿ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಉಳಿದಂತೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ಮಯಾಂಕ್‌ ಅಗರ್‌ವಾಲ್‌ (24), ರಜತ್‌ ಪಾಟಿದಾರ್‌ (26), ಲಿಯಾಮ್‌ ಲಿವಿಂಗ್‌ಸ್ಟೋನ್‌ (25), ಜಿತೇಶ್‌ ಶರ್ಮಾ (24) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಉಳಿದಂತೆ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ 3 ಬೌಂಡರಿ ನೆರವಿನಿಂದ 43 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

Story first published: Tuesday, June 3, 2025, 23:27 [IST]
Other articles published on Jun 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+