RCB vs PBKS IPL Final: ಐಪಿಎಲ್ ಫೈನಲ್‌ನ ಕೆಲವು ಇಂಟ್ರಸ್ಟಿಂಗ್ ಅಂಕಿ ಅಂಶಗಳು
ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿರುವ ಪಂಜಾಬ್ ಕಿಂಗ್ಸ್ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಬಾರಿ ನೂತನ ಚಾಂಪಿಯನ್ ಆಯ್ಕೆ ಆಗುವುದು ಕನ್ಫರ್ಮ್ ಆಗಿದೆ. ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳು ಕಳೆದ 17 ವರ್ಷಗಳಿಂದ ಪ್ರಶಸ್ತಿ ಎತ್ತುವಲ್ಲಿ ವಿಫಲವಾಗಿವೆ. ಹೀಗಾಗಿ ಈ ಎರಡೂ ತಂಡಗಳಿಗೆ ಇದು ಬೆಸ್ಟ್ ಚಾನ್ಸ್ ಆಗಿರಲಿದೆ.
18ನೇ ಆವೃತ್ತಿಯ ಫೈನಲ್ ಪಂದ್ಯ ಸಹ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ನಾಲ್ಕು ಬಾರಿ ಫೈನಲ್ ಆಡಿರುವ ಅನುಭವ ಹೊಂದಿರುವ ಆರ್‌ಸಿಬಿ, ಎರಡು ಬಾರಿ ಫೈನಲ್ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹಾಗಿದ್ದರೆ ಫೈನಲ್ ಪಂದ್ಯದ ಇಂಟ್ರಸ್ಟಿಂಗ್ ಅಂಕಿ ಅಂಶಗಳ ವರದಿ ಇಲ್ಲಿದೆ.

ಐಪಿಎಲ್ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್..
2023ರಲ್ಲಿ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಜಿಟಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಗಳಿಸಿದ್ದು ಗರಿಷ್ಠ ಸ್ಕೋರ್.
ಎಷ್ಟು ಆಟಗಾರರು ಐಪಿಎಲ್ ಫೈನಲ್‌ನಲ್ಲಿ ಶತಕ ಬಾರಿಸಿದ್ದಾರೆ?
ಒಟ್ಟಾರೆ 17 ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಇಬ್ಬರು ಆಟಗಾರರು ಶತಕ ಬಾರಿಸಿದ್ದಾರೆ.
1- ಪಂಜಾಬ್ ಕಿಂಗ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮನ್ ಸಹಾ 2014ರಲ್ಲಿ ಕೆಕೆಆರ್ ವಿರುದ್ಧ 115 ರನ್
2- ಚೆನ್ನೈ ಸೂಪರ್ ಕಿಂಗ್ಸ್ ಪರ ಶೇನ್ ವ್ಯಾಟ್ಸನ್ 2108ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 117 ರನ್
ಐಪಿಎಲ್ ಫೈನಲ್‌ಗೆ ಅತಿ ಹೆಚ್ಚು ಬಾರಿ ಪ್ರವೇಶಿಸಿದ ತಂಡ ಯಾವುದು?
ಐಪಿಎಲ್ ಫೈನಲ್‌ಗೆ ಚೆನ್ನೈ ಸೂಪರ್ ಕಿಂಗ್ಸ್ 10 ಬಾರಿ ಹಾಗೂ ಮುಂಬೈ ಇಂಡಿಯನ್ಸ್ 6 ಬಾರಿ ಪ್ರವೇಶ ಪಡೆದಿದೆ.
ಫೈನಲ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತ
2024ರ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 113 ರನ್ ಕಲೆ ಹಾಕಿದ್ದು ಕನಿಷ್ಠ ಮೊತ್ತ
ಫೈನಲ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ ಬೌಲರ್ ಯಾರು?
ಅನಿಲ್ ಕುಂಬ್ಳೆ 2009ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 16 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.
ಫೈನಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ಐಪಿಎಲ್ ಫೈನಲ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಡ್ವೇನ್ ಬ್ರಾವೋ (10 ವಿಕೆಟ್)
ಒಟ್ಟಾರೆ ಐಪಿಎಲ್ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು?
ಐಪಿಎಲ್ ಫೈನಲ್‌ಗಳಲ್ಲಿ ಸುರೇಶ್ ರೈನಾ ಒಟ್ಟಾರೆಯಾಗಿ 249 ರನ್ ಸಿಡಿಸಿದ್ದಾರೆ.
ಐಪಿಎಲ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ರನ್ ಎಷ್ಟು?
ಒಟ್ಟಾರೆ ಮೂರು ಐಪಿಎಲ್ ಫೈನಲ್ ಆಡಿರುವ ವಿರಾಟ್ ಕೊಹ್ಲಿ ಒಟ್ಟಾರೆ 96 ರನ್ ಬಾರಿಸಿದ್ದಾರೆ.
ಐಪಿಎಲ್ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಎಷ್ಟು ಬಾರಿ ಗೆದ್ದಿದೆ?
9
ಚೇಸಿಂಗ್ ಮಾಡಿದ ತಂಡ ಎಷ್ಟು ಬಾರಿ ಗೆದ್ದಿದೆ?
8
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications