IPL 2024 Eliminator: ಪರಾಗ್-ಹೆಟ್ಮೆಯರ್ ಅಬ್ಬರದ ಜೊತೆಯಾಟ; ಆರ್‌ಸಿಬಿ ಎದುರು ರಾಜಸ್ಥಾನ ಗೆಲುವು
ಮೇ 22 ಬುಧವಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಗೆದ್ದು ಬೀಗಿದೆ.
ಸಂಕಷ್ಟದಲ್ಲಿದ್ದ ಆರ್‌ಆರ್ ಪರ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಉತ್ತಮ ಜೊತೆಯಾಟವಾಡುವ ಮೂಲಕ ಆರ್‌ಸಿಬಿ ಎದುರು ಗೆಲುವು ತಂದು ಕೊಟ್ಟರು. ಹೀಗಾಗಿ ಆರ್‌ಸಿಬಿ ಟೂರ್ನಿನಿಂದ ಹೊರ ನಡೆದಿದೆ. ಸನ್ ರೈಸರ್ಸ್ ಹೈದರಾಬಾದ್ ಎದುರು ಆರ್‌ಆರ್ ಕ್ವಾಲಿಫೈಯರ್-2 ಆಡಲಿದೆ.

ಆರ್‌ಸಿಬಿ ನೀಡಿದ 173 ರನ್ ಬೆನ್ನಟ್ಟಿದ್ದ ಆರ್‌ಆರ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಟಾಮ್ ಕೊಹ್ಲರ್-ಕ್ಯಾಡ್ಮೋರ್ 20 ರನ್‌ಗಳಿಸಿ ಔಟ್ ಆದರು. ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ ಎಂದಿನಂತೆ ಬ್ಯಾಟ್ ಬೀಸಿ ರನ್ ಗಳಿಸಿದರು.
ಅರ್ಧಶತಕದ ಹೊಸ್ತಿಲಲ್ಲಿದ ಯಶಸ್ವಿ ಜೈಸ್ವಾಲ್ 45 ರನ್‌ಗೆ ವಿಕೆಟ್ ಕಳೆದುಕೊಂಡರು. ಬಳಿಕ ನಾಯಕ ಸಂಜು ಸ್ಯಾಮ್ಸನ್ ಸಹಾ 17 ರನ್‌ಗೆ ಔಟ್ ಆದರು. ಈ ಹಂತದಲ್ಲಿ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಜೋಡಿ ಚೇತರಿಕೆ ಆಟವಾಡಿತು.
ಆದರೆ ದುರದೃಷ್ಟಕರ ಧ್ರುವ್ ಜುರೆಲ್ 8 ರನೌಟ್‌ಗೆ ಬಲಿಯಾದರು. ಈ ಸಮಯದಲ್ಲಿ ಆರ್‌ಸಿಬಿ ಗೆಲುವಿನ ಕಡೆ ಪಂದ್ಯ ಹೋಗಿತ್ತು. ಆದರೆ ಒಂದಾದ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ನಿಧಾನವಾಗಿ ರನ್ ಹೊಡೆದು ಆರ್‌ಆರ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆದರೆ ಕೊನೆವರೆಗೆ ಈ ಜೋಡಿ ಕ್ರೀಸ್‌ನಲ್ಲಿ ಆಡಲಿಲ್ಲ. ರಿಯಾನ್ ಪರಾಗ್ 36 ರನ್‌ಗೆ ಔಟ್ ಆದರೆ, ಶಿಮ್ರಾನ್ ಹೆಟ್ಮೆಯರ್ 26 ರನ್‌ಗೆ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ರೋವ್ಮನ್ ಪೊವೆಲ್ ಅಜೇಯ 16 ರನ್ ಹೊಡೆಯುವ ಮೂಲಕ ಆರ್‌ಆರ್‌ಗೆ ಜಯ ತಂದು ಕೊಟ್ಟರು.
ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿ ಸಂಭ್ರಮಿಸಿದರು. ಲಾಕಿ ಫರ್ಗುಸನ್, ಕರಣ್ ಶರ್ಮಾ ಮತ್ತು ಕ್ಯಾಮೆರಾನ್ ಗ್ರೀನ್ ತಲಾ 1 ವಿಕೆಟ್ ಪಡೆದರು.
ಆರ್‌ಸಿಬಿ ಮೊದಲ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ 15 ರನ್‌ಗಳಿ ಔಟ್ ಆದರೆ, ವಿರಾಟ್ ಕೊಹ್ಲಿ 33 ರನ್‌ಗೆ ವಿಕೆಟ್ ಕಳೆದುಕೊಂಡರು.
ನಂತರ ಕ್ಯಾಮೆರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ವೇಗವಾಗಿ ರನ್‌ಗಳಿಸಲು ಮುಂದಾದರು. ಆದರೆ ಗ್ರೀನ್ 27 ರನ್‌ಗಳಿಗೆ ಔಟದರೆ, ಪಾಟಿದಾರ್ 2 ಸಿಕ್ಸರ್ ಹಾಗು 2 ಬೌಂಡರಿ ಮೂಲಕ 34 ರನ್‌ಗಳಿಸಿ ಔಟ್ ಆದರು.
ಸಂಕಷ್ಟದಲ್ಲಿದ್ದ ಆರ್‌ಸಿಬಿಗೆ ನೆರವಾಗದ ಗ್ಲೆನ್ ಮ್ಯಾಕ್ಸ್‌ವೆಲ್ 0 ವಿಕೆಟ್ ಕಳೆದುಕೊಂಡರು. ದಿನೇಶ್ ಕಾರ್ತಿಕ್ 11 ರನ್ ಬಾರಿಸಿ ಔಟ್ ಆದರು.
ಕೊನೆಯಲ್ಲಿ ಆರ್‌ಸಿಬಿ ರನ್ ಹೆಚ್ಚಿಸಿದ ಮಹಿಪಾಲ್ ಲೊಮ್ರೊರ್ 32 ರನ್ ಗಳಿಗೆ ಆಟ ನಿಲ್ಲಿಸಿದರು. ಸ್ವಪ್ನಿಲ್ ಸಿಂಗ್ ಅಜೇಯ 9 ರನ್ ಗಳಿಸದರೆ, ಕರಣ್ ಶರ್ಮಾ 5 ರನ್‌ಗೆ ಔಟ್ ಆದರು. ಹೀಗಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಆರ್‌ಸಿಬಿ 173 ರನ್ ಗಳಿಸಿತು.
ರಾಜಸ್ಥಾನ ರಾಯಲ್ ಪರ ಅವೇಶ್ ಖಾನ್ 3 ಉರುಳಿಸಿ ಮಿಂಚಿದರು. ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಹಾಗು ಯುಜ್ವೇಂದ್ರ ಚಹಾಲ್ ತಲಾ 1 ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications