ಬುಧವಾರ, ಮೇ 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳ ನಡುವಿನ 'ಎಲಿಮಿನೇಟರ್' ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಐತಿಹಾಸಿಕ 8000 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್ ಗಳಿಸುತ್ತಿದ್ದಂತೆಯೇ ನೂತನ ಮೈಲಿಗಲ್ಲು ಸ್ಥಾಪಿಸಿದರು. ಅದೂ ಒಂದೇ ತಂಡದ ಪರ ಎಂಟು ಸಾವಿರ ರನ್ ಗಳಿಸಿ ಮೊದಲ ಆಟಗಾರನೂ ಆಗಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಚುಟುಕು ಸ್ವರೂಪದಲ್ಲಿ ತಮ್ಮ ಸ್ಟ್ರೈಕ್ ರೇಟ್ ಪ್ರಶ್ನಿಸಿದ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಆವೃತ್ತಿಯಲ್ಲಿ ಬಲಗೈ ಅನುಭವಿ ಬ್ಯಾಟರ್ ಅತಿ ಹೆಚ್ಚು ರನ್ ಗಳಿಸಿ 'ಆರೆಂಜ್ ಕ್ಯಾಪ್' ಹೋಲ್ಡರ್ ಆಗಿದ್ದಾರೆ.
ಅನುಭವಿ ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ 17 ವರ್ಷಗಳ ಇತಿಹಾಸ ಹೊಂದಿರುವ ಐಪಿಎಲ್‌ನಲ್ಲಿ 8000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
8ನೇ ಓವರ್‌ನಲ್ಲಿ ಯುಜ್ವೇಂದ್ರ ಚಹಾಲ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಈ ವೇಳೆ ಕೊಹ್ಲಿ ಜೋರಾಗಿ ಕೂಗುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದರು. ನಿರ್ಣಾಯಕ ಪಂದ್ಯದಲ್ಲಿ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 33 ರನ್ ಗಳಿಸಿದರು.
1000 ರನ್ - ಆಡಮ್ ಗಿಲ್‌ಕ್ರಿಸ್ಟ್
2000 ರನ್ - ಸುರೇಶ್ ರೈನಾ
3000 ರನ್ - ಸುರೇಶ್ ರೈನಾ
4000 ರನ್ - ವಿರಾಟ್ ಕೊಹ್ಲಿ
5000 ರನ್ - ಸುರೇಶ್ ರೈನಾ
6000 ರನ್ - ವಿರಾಟ್ ಕೊಹ್ಲಿ
7000 ರನ್ - ವಿರಾಟ್ ಕೊಹ್ಲಿ
8000 ರನ್ - ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ ಆಡಿದ 15 ಇನ್ನಿಂಗ್ಸ್‌ಗಳಲ್ಲಿ 61.75ರ ಸರಾಸರಿ ಮತ್ತು 154.70ರ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಈಗಾಗಲೇ ಆರ್‌ಸಿಬಿ ಅನುಭವಿ ಬ್ಯಾಟರ್ ಐಪಿಎಲ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 8 ಶತಕಗಳು ಮತ್ತು 55 ಅರ್ಧಶತಕಗಳು ಒಳಗೊಂಡಂತೆ 8004 ರನ್ ಕಳೆಹಾಕಿದ್ದಾರೆ.
ಇನ್ನು 222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಕಲೆಹಾಕಿರುವ ಶಿಖರ್ ಧವನ್ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ನಂತರ ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ಇದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ದಾಖಲೆಯನ್ನು ಈ ಬ್ಯಾಟರ್‌ಗಳು ಶೀಘ್ರದಲ್ಲೇ ಮುರಿಯುವ ಸಾಧ್ಯತೆಯಿಲ್ಲ.