RCB vs RR IPL 2024 Eliminator: ರಾಜಸ್ಥಾನ ಪರ ಹೊಸ ದಾಖಲೆ ಬರೆಯಲು ಸಜ್ಜಾದ ಯುಜ್ವೇಂದ್ರ ಚಹಾಲ್
ಮೇ 22 ಬುಧವಾರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಸೆಣಸಾಡುತ್ತಿದೆ.
ಉಭಯ ತಂಡಗಳು ಈ ಹೈವೋಲ್ಟೇಜ್ ಪಂದ್ಯ ಗೆಲ್ಲುವ ಒತ್ತಡದಲ್ಲಿವೆ. ಗೆಲ್ಲುವ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕ್ವಾಲಿಫೈಯರ್-2 ಆಡಲಿದೆ. ಸೋತ ತಂಡ ಟೂರ್ನಿನಿಂದ ಹೊರ ನಡೆಯಲಿದೆ.

ಆರ್‌ಸಿಬಿ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಆರ್‌ಆರ್ ಪರ ಚಹಾಲ್ ದೊಡ್ಡ ದಾಖಲೆ ಮಾಡವು ಅವಕಾಶವನ್ನು ಹೊಂದಿದ್ದಾರೆ. ಚಹಾಲ್ ಈ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರ ದಾಖಲೆಯನ್ನು ಚಹಾಲ್ ಮುರಿಯಲು ಸಜ್ಜಾಗಿದ್ದಾರೆ. ಆರ್‌ಆರ್ ಪ್ರಸ್ತುತ ಚಹಾಲ್ 65 ವಿಕೆಟ್‌ಗಳನ್ನು ಹೊಂದಿದ್ದರೆ, ಶೇನ್ ವ್ಯಾಟ್ಸನ್ 67 ವಿಕೆಟ್‌ಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಇದೀಗ ಚಾಹಲ್ 3 ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಅವರು 2 ವಿಕೆಟ್‌ಗಳನ್ನು ಕಬಳಿಸಲು ಶಕ್ತರಾದರೆ, ಅವರು ವ್ಯಾಟ್ಸನ್ ಅವರೊಂದಿಗೆ ಜಂಟಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗುತ್ತಾರೆ.
ಈ ಋತುವಿನಲ್ಲಿ ಚಹಾಲ್ ಭರ್ಜರಿ ಪ್ರದರ್ಶನ
ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಯುಜ್ವೇಂದ್ರ ಚಹಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ಆರ್‌ಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಈಗ ಎಲಿಮಿನೇಟರ್‌ನಲ್ಲೂ ರಾಜಸ್ಥಾನ ಅವರಿಂದ ಅತ್ಯುತ್ತಮ ಪ್ರದರ್ಶನ ನಿರೀಕ್ಷಿಸಲಿದೆ. ಇದುವರೆಗೆ ಚಹಾಲ್ ಒಟ್ಟು 13 ಪಂದ್ಯಗಳನ್ ಆಡಿದ್ದು, 17 ವಿಕೆಟ್ ಪಡೆದಿದ್ದಾರೆ.
ಈ ಋತುವಿನಲ್ಲಿ 11 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇದೀಗ ಈ ಬಿಗ್ ಮ್ಯಾಚ್‌ನಲ್ಲಿ ಚಹಾಲ್ ವಿರುದ್ಧ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಅವರ ಹೆಸರಿನಲ್ಲಿ ಈ ದೊಡ್ಡ ದಾಖಲೆ ಮಾಡುವ ಅವಕಾಶವೂ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications