ಬುಧವಾರ, ಮೇ 23ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ತಮ್ಮ ಹೃದಯ ವಿದ್ರಾವಕ ಸೋಲಿನ ನಂತರ, ಆರ್‌ಸಿಬಿ ತಂಡದ ಪ್ರಯಾಣವನ್ನು ಪ್ರತಿಬಿಂಬಿಸಿದ ನಾಯಕ ಫಾಫ್ ಡು ಪ್ಲೆಸಿಸ್, ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ನಡೆಸಿದ ಹೋರಾಟದ ಬಗ್ಗೆ ಹೆಮ್ಮೆಪಟ್ಟರು.

ಕ್ವಾಲಿಫೈಯರ್ 2 ಪ್ರವೇಶಿಸಲು ನಡೆದ ನಿಕಟ ಪೈಪೋಟಿಯ ಪಂದ್ಯದಲ್ಲಿ ಆರ್‌ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಸೋಲು ಅನುಭವಿಸಿತು. 2ನೇ ಇನಿಂಗ್ಸ್‌ನಲ್ಲಿ 179 ರನ್ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು.
ಟೂರ್ನಿಯಲ್ಲಿ ಅದ್ಭುತ ಪುನರಾಗಮನ ಮಾಡಿದ್ದ ಆರ್‌ಸಿಬಿ ತಂಡಕ್ಕೆ ಎಲ್ಲರ ಒಲವು ತೋರುವುದರೊಂದಿಗೆ ಮೆಚ್ಚಿನ ತಂಡವವೆಂದು ಬಿಂಬಿಸಲಾಗಿದ್ದರೂ, ರಾಜಸ್ಥಾನ್ ರಾಯಲ್ಸ್ ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಮುಂದಿನ ಹಂತಕ್ಕೆ ಏರಿತು.

ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ತಂಡ 200 ರನ್‌ಗಳ ಗಡಿ ದಾಟಲು ತೋರಿದ ಅಸಮರ್ಥತೆಯನ್ನು ಎತ್ತಿ ತೋರಿಸಿದರು, ಕಳಪೆ ಬ್ಯಾಟಿಂಗ್‌ನಿಂದಾಗಿ ಪಂದ್ಯವನ್ನು ಸೋಲಬೇಕಾಯಿತು ಎಂದು ದೂಷಿಸಿದರು.
"ಇಬ್ಬನಿ ಇರುವುದರಿಂದ, ನಾವು ಬ್ಯಾಟ್‌ನೊಂದಿಗೆ ಹಿನ್ನಡೆಯಲ್ಲಿದ್ದೇವೆ ಎಂದು ನಾವು ಭಾವಿಸುತ್ತೇನೆ. ಪಂದ್ಯವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಇನ್ನೂ ಕೆಲವು ರನ್‌ಗಳ ಅಗತ್ಯವಿತ್ತು. ಆದರೂ ಅದರ ವಿರುದ್ಧ ಹೋರಾಡಿದ ಹುಡುಗರಿಗೆ ಕ್ರೆಡಿಟ್ ಸಲ್ಲಬೇಕು. ಪಿಚ್ ಅನ್ನು ಸ್ವಾಭಾವಿಕವಾಗಿ ನಿರ್ಣಯಿಸಲು ಅದು 180 ರನ್‌ಗಳ ಪಿಚ್‌ನಂತೆ ಕಾಣುತ್ತದೆ," ಎಂದರು.
"ಈ ಆವೃತ್ತಿಯಲ್ಲಿ ಒಂದು ಹೆಚ್ಚುವರಿ ಬ್ಯಾಟರ್ ಮತ್ತು ಲಾಂಗ್ ಲೈನ್-ಅಪ್‌ನೊಂದಿಗೆ ಕೊರತೆ ಅನುಭವಿಸಿದ್ದೇವೆ. ಎದುರಾಳಿಗೆ ಸವಾಲು ಹಾಕಲು ನಾವು ಹೆಚ್ಚು ಸ್ಕೋರ್ ಮಾಡಬೇಕೆಂದು ನಮಗೆ ತಿಳಿದಿತ್ತು," ಎಂದು ಫಾಫ್ ಡು ಪ್ಲೆಸಿಸ್ ಹೇಳಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಕಟ್ಟಿಹಾಕಿದರು. ಆರ್‌ಸಿಬಿ ಇನ್ನಿಂಗ್ಸ್‌ನುದ್ದಕ್ಕೂ ಯಾವುದೇ ದೊಡ್ಡ ಜೊತೆಯಾಟಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ ಮತ್ತು 172 ರನ್‌ಗಳ ಸಾಧಾರಣ ಮೊತ್ತದೊಂದಿಗೆ ಮುಗಿಸಿತು.
ಉತ್ತಮ ಆರಂಭದ ಹೊರತಾಗಿಯೂ, ರಾಜಸ್ಥಾನ್ ರಾಯಲ್ಸ್ ಚೇಸ್‌ನ ಇನ್ನಿಂಗ್ಸ್‌ನ ಮಧ್ಯದಲ್ಲಿ 4 ವಿಕೆಟ್‌ಗೆ 112 ರನ್‌ಗಳಿಗೆ ಕುಸಿಯಿತು. ಆದರೆ, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಜೋಡಿ 45 ರನ್‌ಗಳ ಜೊತೆಯಾಟದಿಂದ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವನ್ನು ಖಚಿತಪಡಿಸಿತು.
ಲೀಗ್ ಹಂತದಲ್ಲಿ ತಮ್ಮ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತರೂ ಆರ್‌ಸಿಬಿ ಪ್ಲೇಆಫ್ ತಲುಪಲು ಅದ್ಭುತವಾಗಿ ಪುನರಾಗಮನ ಮಾಡಿದ ರೀತಿಯನ್ನು ನಾಯಕ ಫಾಫ್ ಡು ಪ್ಲೆಸಿಸ್ ಶ್ಲಾಘಿಸಿದರು.