RCB vs RR: ಜೈಪುರದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲ್ಲ; ಅಂಕಿಅಂಶಗಳೇ ಹೇಳುತ್ತಿವೆ ಕಳಪೆ ಇತಿಹಾಸ!
ಶನಿವಾರ, ಏಪ್ರಿಲ್ 6ರಂದು ಜೈಪುರದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧ ಮುಖಾಮುಖಿಯಾಗಲು ಸಜ್ಜಾಗುತ್ತಿದ್ದಂತೆ, ಎಲ್ಲರ ಕಣ್ಣುಗಳು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲಿರಲಿವೆ.
ವಿರಾಟ್ ಕೊಹ್ಲಿ ಸದ್ಯ ಆರ್‌ಸಿಬಿ ತಂಡಕ್ಕೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಏಕೆಂದರೆ, ಇದುವರೆಗೆ ಆರ್‌ಸಿಬಿ ಅಸ್ಥಿರವಾದ ಬ್ಯಾಟಿಂಗ್ ಲೈನ್-ಅಪ್ ಹೊಂದಿದೆ. ಉಳಿದ ಬ್ಯಾಟರ್‌ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ.

ಮೂರು ಪಂದ್ಯಗಳ ಅಜೇಯ ಗೆಲುವಿನಿಂದ ಉತ್ಸುಕರಾಗಿರುವ ರಾಜಸ್ಥಾನ್ ರಾಯಲ್ಸ್, ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರುದ್ಧ ಆಡಲಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡ ಈ ಆವೃತ್ತಿಯಲ್ಲಿ ತಮ್ಮ ಗೆಲುವು-ಸೋಲಿನ ದಾಖಲೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯದ ಮಾತ್ರ ಗೆದ್ದಿದೆ.
ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದ್ದರೂ, ಇದುವರೆಗಿನ ಪಂದ್ಯಾವಳಿಯಲ್ಲಿ ಅತ್ಯಂತ ನಿರಾಶಾದಾಯಕ ವಿಷಯವೆಂದರೆ, ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ಅವರ ಸ್ಟಾರ್-ಸ್ಟಡ್ ಲೈನ್ ಅಪ್ ಅಸ್ಥಿರ ಪ್ರದರ್ಶನ ನೀಡುತ್ತಿರುವುದು.
ಈ ಕಳಪೆ ಆವೃತ್ತಿಯಲ್ಲಿ ಈವರೆಗೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಏಕೈಕ ಭರವಸೆಯಾಗಿ ಕಂಡುಬಂದಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 67.66ರ ಸರಾಸರಿ ಮತ್ತು 141ರ ಸ್ಟ್ರೈಕ್ ರೇಟ್‌ನೊಂದಿಗೆ 203 ರನ್ ಗಳಿಸಿದ್ದಾರೆ ಮತ್ತು ಎರಡು ಅರ್ಧಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಅತ್ಯುತ್ತಮ ಸ್ಕೋರ್ ಅಜೇಯ 83 ರನ್ ಆಗಿದೆ. ಕೊಹ್ಲಿ ಇದುವರೆಗಿನ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.
ಆದರೆ, ಜೈಪುರದಲ್ಲಿ ಆಡುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಕೆಲವು ಆತಂಕಕಾರಿ ಇತಿಹಾಸ ಹೊಂದಿದ್ದಾರೆ. ಅದು ಪ್ರತಿ ಬಾರಿಯೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುವಾಗ ಪ್ಲಾಪ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿಗೆ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಅದ್ಭುತವಾಗಿದೆ. ಆದರೆ ಐಪಿಎಲ್‌ನಲ್ಲಿ ಈ ಕ್ರೀಡಾಂಗಣದಲ್ಲಿ ತನ್ನ ಅಂತಾರಾಷ್ಟ್ರೀಯ ಸಂಖ್ಯೆಯನ್ನು ಪುನರಾವರ್ತಿಸಲು ವಿಫಲರಾಗಿದ್ದಾರೆ.

ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಆಡಿದ ಮೂರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 97.50ರ ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 195 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಅವರ ಶತಕವು ಅಕ್ಟೋಬರ್ 2013ರಲ್ಲಿ ಕೇವಲ 52 ಎಸೆತಗಳಲ್ಲಿ ಬಂದಿತ್ತು ಮತ್ತು ಈಗಲೂ ಭಾರತೀಯರ ವೇಗದ ಏಕದಿನ ಶತಕವಾಗಿದೆ. ಆದರೆ, ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ತವರು ಮೈದಾನದಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಮುರಿಯುವ ಬ್ಯಾಟಿಂಗ್ ಅನ್ನು ನಿಯಂತ್ರಣದಲ್ಲಿಟ್ಟಿದೆ.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ 21.29ರ ಸರಾಸರಿ ಮತ್ತು ಕೇವಲ 94ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 149 ರನ್ ಗಳಿಸಿದ್ದಾರೆ.
ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯ ಅತ್ಯುತ್ತಮ ಸ್ಕೋರ್ ಅಜೇಯ 39 ರನ್ ಮತ್ತು ಇಲ್ಲಿ ವಿರಾಟ್ ಕೊಹ್ಲಿ ಒಂದೇ ಒಂದು ಅರ್ಧಶತಕ ಅಥವಾ ಶತಕ ಗಳಿಸಿಲ್ಲ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ಕೊಹ್ಲಿ 19 ಎಸೆತಗಳಲ್ಲಿ ನಿಧಾನಗತಿಯ 18 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕನಿಷ್ಠ ಎಂಟು ಇನ್ನಿಂಗ್ಸ್‌ಗಳನ್ನು ಬ್ಯಾಟಿಂಗ್ ಮಾಡಿದ ಎಲ್ಲಾ ಮೈದಾನಗಳಿಗಿಂತ, ಜೈಪುರದಲ್ಲಿ ಅತ್ಯಂತ ಕೆಟ್ಟ ಸರಾಸರಿಯನ್ನು ಹೊಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವೇಗಿ ಸಂದೀಪ್ ಶರ್ಮಾ ಅವರು ವಿರಾಟ್ ಕೊಹ್ಲಿಗೆ ದೊಡ್ಡ ಬೆದರಿಕೆಯಾಗಿದ್ದಾರೆ. ಐಪಿಎಲ್‌ನ 15 ಸಂದರ್ಭಗಳಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಸಂದೀಪ್ ಶರ್ಮಾ ವಿರುದ್ಧ ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ 87 ರನ್ ಗಳಿಸಿದ್ದಾರೆ ಮತ್ತು ಏಳು ಬಾರಿ ಔಟಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications