For Quick Alerts
ALLOW NOTIFICATIONS  
For Daily Alerts
 

IPL 2024: ಆರ್‌ಸಿಬಿ ಶ್ರೇಷ್ಠನ ವಿಕೆಟ್ ಪಡೆಯುವ 'ಚಾಲೆಂಜ್' ಮಾಡಿದ ಯುಜ್ವೇಂದ್ರ ಚಹಾಲ್

ಶನಿವಾರ, ಏಪ್ರಿಲ್ 6ರಂದು ಸಂಜೆ 7.30ಕ್ಕೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ರೋಚಕ ಹಣಾಹಣಿ ನಡೆಸಲಿವೆ.

ಇದೇ ವೇಳೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಬೇಗನೆ ಔಟ್ ಮಾಡುವುದರಿಂದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡ ಒತ್ತಡಕ್ಕೆ ಸಿಲುಕುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅಭಿಪ್ರಾಯಪಟ್ಟಿದ್ದಾರೆ.

RCB vs RR IPL 2024 Yuzvendra Chahal Wants To Geeting RCB Great Virat Kohli s Early Wicket

ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಜ್ವೇಂದ್ರ ಚಹಾಲ್, ಭಾರತದ ಲೆಜೆಂಡ್ ಬ್ಯಾಟರ್ ವಿರಾಟ್ ಕೊಹ್ಲಿ ರಾಜಸ್ಥಾನ್ ವಿರುದ್ಧ ತಂಡದ ಯೋಜನೆಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಲೆಗ್ ಸ್ಪಿನ್ನರ್ ತನ್ನ ಮಾಜಿ ಆರ್‌ಸಿಬಿ ಸಹ ಆಟಗಾರನ ಬಗ್ಗೆ ಹೆಚ್ಚಿನ ಪ್ರಶಂಸೆಯ ಮಾತುಗಳನ್ನಾಡಿದರು.

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ವಿರಾಟ್ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಎಂದು ಬಣ್ಣಿಸಿದರು ಮತ್ತು ಕೊಹ್ಲಿಯ ಮಹತ್ವದ ವಿಕೆಟ್ ಆರ್‌ಸಿಬಿ ತಂಡವನ್ನು ಒತ್ತಡದಲ್ಲಿ ಇರಿಸುತ್ತದೆ ಎಂದು ತಿಳಿಸಿದರು.

2024ರ ಐಪಿಎಲ್‌ನ ತವರು ಜೈಪುರದಲ್ಲಿ ಅಡಲಿರುವ ತಮ್ಮ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಲಿದೆ.

ರಾಜಸ್ಥಾನ್ ರಾಯಲ್ಸ್ ಪ್ರಸಕ್ತ ಪಂದ್ಯಾವಳಿಯಲ್ಲಿ ಮೂರು ಸತತ ಪಂದ್ಯಗಳನ್ನು ಗೆದ್ದಿದೆ ಮತ್ತು ನಾಲ್ಕನೇ ಗೆಲುವು ಅವರು ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮುನ್ನಡೆಯುವುದನ್ನು ನೋಡಬಹುದು.

ರಾಜಸ್ಥಾನ್ ರಾಯಲ್ಸ್ ಇದುವರೆಗೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವಿ ಪ್ರದರ್ಶನ ನೀಡಿದೆ. ಟ್ರೆಂಟ್ ಬೌಲ್ಟ್, ನಾಂದ್ರೆ ಬರ್ಗರ್ ಮತ್ತು ರಿಯಾನ್ ಪರಾಗ್ ರಾಜಸ್ಥಾನ್ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದಾರೆ. ಇಲ್ಲಿಯವರೆಗೆ ಅತ್ಯುತ್ತಮ ಪ್ರಭಾವ ಬೀರಿದ್ದಾರೆ ಮತ್ತು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

RCB vs RR IPL 2024 Yuzvendra Chahal Wants To Geeting RCB Great Virat Kohli s Early Wicket

"ಈ ಪಂದ್ಯದಲ್ಲಿ ನಾವು ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಬೇಗನೆ ಔಟ್ ಮಾಡಿದರೆ, ಆರ್‌ಸಿಬಿ ತಂಡ ಒತ್ತಡಕ್ಕೆ ಒಳಗಾಗುತ್ತದೆ," ಎಂದು ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯಂತಹ ಲೆಜೆಂಡ್ ಆಟಗಾರರು ಆಡುವುದರಿಂದಾಗಿ ತವರಿನ ಅಭಿಮಾನಿಗಳು ಬೇರೆ ತಂಡಗಳನ್ನು ಬೆಂಬಲಿಸುವ ಪ್ರವೃತ್ತಿಯ ಬಗ್ಗೆ ಕೇಳಿದಾಗ, ಅಂತಹ ಆಟಗಾರರು ತಮ್ಮ ಹಲವು ವರ್ಷಗಳ ಸಾಧನೆಗಾಗಿ ಆ ಗೌರವವನ್ನು ಗಳಿಸಿದ್ದಾರೆ ಎಂದು ಯುಜ್ವೇಂದ್ರ ಚಹಾಲ್ ಬುದ್ಧಿವಂತಿಕೆಯ ಉತ್ತರ ನೀಡಿದರು.

ಅಭಿಮಾನಿಗಳು ತಮ್ಮದೇ ಆದ ಟಿಕೆಟ್ ಖರೀದಿಸಿ ಬರುತ್ತಾರೆ ಮತ್ತು ಅವರು ಬಯಸಿದವರಿಗೆ ಪ್ರೀತಿಯನ್ನು ತೋರಿಸುವ ಹಕ್ಕು ಹೊಂದಿದ್ದಾರೆ ಎಂದು ಯುಜ್ವೇಂದ್ರ ಚಹಾಲ್ ಒತ್ತಿ ಹೇಳಿದರು.

"ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಅವರು ದೊಡ್ಡ ಆಟಗಾರರು ಮತ್ತು ಅವರು ಎಲ್ಲಾ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರ ಬೆಂಬಲವನ್ನು ಪಡೆಯುತ್ತಾರೆ. ಅಭಿಮಾನಿಗಳು ತಮ್ಮದೇ ಆದ ಟಿಕೆಟ್‌ಗಳನ್ನು ಖರೀದಿಸುತ್ತಾರೆ, ನಾವು ಅವರಿಗೆ ನೀಡುವುದಿಲ್ಲ," ಎಂದು ಯುಜ್ವೇಂದ್ರ ಚಹಾಲ್ ತವರಿನ ಪಂದ್ಯಗಳಲ್ಲಿ ಬೇರೆ ಆಟಗಾರರನ್ನು ಬೆಂಬಲಿಸುವ ಅಭಿಮಾನಿಗಳ ಮನಸ್ಥಿತಿಯ ಬಗ್ಗೆ ಮಾತನಾಡಿದರು.

ಮತ್ತೊಂದೆಡೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡ ಇಲ್ಲಿಯವರೆಗೆ ಉತ್ತಮ ಪ್ರದರ್ಶನವನ್ನು ಹೊಂದಿಲ್ಲ. ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಮ್ಮ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನುಜ್ ರಾವತ್ ಮತ್ತು ಮಹಿಪಾಲ್ ಲೊಮ್ರೋರ್ ಅವರನ್ನು ಹೊರತುಪಡಿಸಿ, ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗಿಲ್ಲ ಮತ್ತು ಬೌಲಿಂಗ್ ವಿಭಾಗದ ಹೀನಾಯ ಸ್ಥಿತಿಯಿಂದಾಗಿ ತಮ್ಮ ಅಭಿಮಾನಿಗಳಿಂದಲೇ ಟೀಕೆಗೊಳಗಾಗಿದೆ.

Story first published: Saturday, April 6, 2024, 15:17 [IST]
Other articles published on Apr 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+