ರಾಜಸ್ಥಾನದ ಜೈಪುರ್‌ದಲ್ಲಿ ಇಂದಿನಿಂದ ಐಪಿಎಲ್ ಹವಾ.. ಇದೇ ಮೊದಲ ಬಾರಿಗೆ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯ ಜೈಪುರ್‌ದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಉತ್ತಮ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲಿರುವ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎರಡೂ ತಂಡಗಳು ತಾವಾಡಿದ ಹಿಂದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದು ಗೆಲುವಿನ ಹುಡುಕಾಟದಲ್ಲಿವೆ.
ಉಭಯ ತಂಡಗಳ ನಡುವೆ ಈಗಾಗಲೇ ಐಪಿಎಲ್‌ನಲ್ಲಿ ಒಟ್ಟು 31 ಪಂದ್ಯಗಳು ನಡೆದಿದ್ದು, ಈ ವೇಳೆ ರಾಜಸ್ಥಾನ 14, ಆರ್‌ಸಿಬಿ 15 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವಿನ ಪಂದ್ಯದಲ್ಲಿ 217 ದೊಡ್ಡ ಮೊತ್ತವಾಗಿದೆ. ಎರಡೂ ತಂಡಗಳು ಮುಖಾಮುಖಿಯಾದಾಗ ಕನಿಷ್ಠ ಮೊತ್ತ 58 ಆಗಿದೆ.

ಈ ಪಿಚ್‌ನಲ್ಲಿ ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಸಮಾನವಾದ ಅವಕಾಶಗಳು ಸಿಗಲಿವೆ. ಹೀಗಾಗಿ ಈ ಮೈದಾನದಲ್ಲಿ 200 ರನ್‌ಗಳ ದಾಟುವುದು ಸುಲಭದ ಮಾತಲ್ಲ. ಪಿಚ್‌ನಲ್ಲಿ ಹುಲ್ಲು ಇರುವುದರಿಂದ ಆರಂಭಿಕ ಬ್ಯಾಟರ್‌ಗಳಿಗೆ ಆಡಲು ಕಷ್ಟವಾಗುತ್ತದೆ. ಈ ಮೈದಾನದಲ್ಲಿ ಇರುವ ದೊಡ್ಡ ಬೌಂಡರಿಗಳಿಂದ ಈ ಮೈದಾನದಲ್ಲಿ ಸ್ಪಿನ್ ಬೌಲರ್‌ಗಳನ್ನು ಎದುರಿಸುವುದು ಸುಲಭವಲ್ಲ. ಈ ಮೈದಾನದಲ್ಲಿ ಇಲ್ಲಿಯವರೆಗೆ 57 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 20, ಚೇಸ್ ಮಾಡಿದ ತಂಡ 37 ಬಾರಿ ಗೆದ್ದಿದೆ. ಹೀಗಾಗಿ ಈ ಮೈದಾನದಲ್ಲಿ ಟಾಸ್ ಗೆಲ್ಲುವ ತಂಡ ಬೌಲಿಂಗ್ ಮಾಡಬಹುದು.
ಆರ್‌ಸಿಬಿ ತಂಡ ಈ ಹಿಂದಿನ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕಿದೆ. ಹಿಂದಿನ ಪಂದ್ಯದಲ್ಲಿ ಭರ್ಜರಿ ಆರಂಭವನ್ನು ಪಡೆದರೂ, ಅದನ್ನು ಕನ್ವರ್ಟ್ ಮಾಡುವಲ್ಲಿ ವಿಫಲವಾಯಿತು. ಈ ನ್ಯೂನತೆಯನ್ನು ಮೆಟ್ಟಿನಿಲ್ಲುವ ಅನಿವಾರ್ಯತೆ ಆರ್‌ಸಿಬಿ ತಂಡಕ್ಕಿದೆ. ಆರಂಭಿಕರು ತಮ್ಮ ನೈಜ್ಯ ಆಟವನ್ನು ಆಡಿ ಪವರ್ ಪ್ಲೇನ್‌ಲ್ಲಿ ಸ್ಕೋರ್ ಏರಿಸುತ್ತಾ ಸಾಗಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ತಾಳ್ಮೆಯಿಂದ ನೆಲಕ್ಕೂರಿ ನಿಂತು ಬಳಿಕ ಬಿಗ್ ಹಿಟ್ ಬಾರಿಸುವಲ್ಲಿ ಸಫಲರಾದರೆ, ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ.
ವಿರಾಟ್ ಕೊಹ್ಲಿ, 5 ಪಂದ್ಯ, 186 ರನ್
ರಜತ್ ಪಟಿದಾರ್, 5 ಪಂದ್ಯ, 186 ರನ್
ಫಿಲ್ ಸಾಲ್ಟ್, 5 ಪಂದ್ಯ, 143 ರನ್
ಆರ್‌ಸಿಬಿ ಪರ ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಕೃನಾಲ್ ಪಾಂಡ್ಯ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರು ಪರಿಸ್ಥಿತಿಗೆ ಅನುಸಾರವಾಗಿ ಬೌಲಿಂಗ್ ಮಾಡುವ ಅನಿವಾರ್ಯತೆ ಇದೆ. ಇನ್ನು ಲಿಯಾಮ್ ಲಿವಿಂಗ್‌ಸ್ಟೋನ್ ಲಯಕ್ಕಾಗಿ ಪರದಾಡುತ್ತಿದ್ದು, ಇವರ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಿದರೆ ಬೆಸ್ಟ್. ಇನ್ನು ವೇಗದ ಬೌಲಿಂಗ್ ವಿಭಾಗದ ನೊಗವನ್ನು ಹೊತ್ತುಕೊಂಡಿರುವ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ ನಿಡುವ ಅನಿವಾರ್ಯತೆ ಇದೆ. ಸುಯೇಶ್ ಶರ್ಮಾ, ಯಶ್ ದಯಾಳ್ ಈ ಹಿಂದಿನ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಪುನಾರ್ವತಿಸಬೇಕಿದೆ.
ಜೋಶ್ ಹ್ಯಾಜಲ್‌ವುಡ್, 5 ಪಂದ್ಯ, 8 ವಿಕೆಟ್
ಕೃನಾಲ್ ಪಾಂಡ್ಯ, 5 ಪಂದ್ಯ, 7 ವಿಕೆಟ್
ಯಶ್ ದಯಾಳ್, 5 ಪಂದ್ಯ, 6 ವಿಕೆಟ್
ಆರ್‌ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್ / ಜಾಕೋಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ಮ ಶರ್ಮಾ.
ತನ್ನ ತವರಿನಲ್ಲಿ ಇದೇ ಮೊದಲ ಪಂದ್ಯವನ್ನು ಆಡುತ್ತಿರುವ ರಾಜಸ್ಥಾನ ರಾಯಲ್ಸ್ ತನ್ನ ಸ್ಥಿರ ಪ್ರದರ್ಶನವನ್ನು ಮುಂದುವರೆಸಬೇಕಿದೆ. ಈ ಅಂಗಳದ ಬಗ್ಗೆ ಹೆಚ್ಚಿನ ಮಾಹಿತಿ ಇರುವು ಸಂಜು ಸ್ಯಾಮ್ಸನ್ ನಾಯಕನ ಆಟವನ್ನು ಆಡಬೇಕಿದೆ. ಕಳೆದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಆಡುವ ಯೋಚನೆಯನ್ನು ಹೊಂದಿದ್ದ ಯಶಸ್ವಿ ಜೈಸ್ವಾಲ್ ಬೇಗನೆ ಪೆವಿಲಿಯನ್ ಸೇರಿದರು. ಇವರು ತಮ್ಮ ಹಳೆಯ ಲಯವನ್ನು ಕಂಡು ಕೊಳ್ಳುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಹಾಗೂ ಶಿಮ್ರೋನ್ ಹೆಟ್ಮೆಯರ್ ಪರಿಸ್ಥಿತಿಗೆ ಅನುಗಣವಾಗಿ ಬ್ಯಾಟ್ ಮಾಡಿದರೆ ಗೆಲುವಿನ ಆಸೆ ಚಿಗುರುತ್ತದೆ.
ಸಂಜು ಸ್ಯಾಮ್ಸನ್, 5 ಪಂದ್ಯ, 178 ರನ್
ಶಿಮ್ರೋನ್ ಹೆಟ್ಮೆಯರ್, 5 ಪಂದ್ಯ, 140 ರನ್
ರಿಯಾನ್ ಪರಾಗ್, 5 ಪಂದ್ಯ, 135 ರನ್

ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಜೋಫ್ರಾ ಆರ್ಚರ್ ಇದೇ ಬೌಲಿಂಗ್ ಮುಂದುವರೆಸಬೇಕಿದೆ. ಇವರನ್ನು ಬಿಟ್ಟರೆ ಉಳಿದ ಬೌಲರ್‌ಗಳನ್ನು ರನ್ ನೀಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇವರು ತಮ್ಮ ಅನುಭವದ ಸಂಪೂರ್ಣ ಲಾಭವನ್ನು ಪಡೆದು ಬೌಲ್ ಮಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ವನಿಂದು ಹಸರಂಗಾ, 3 ಪಂದ್ಯ, 6 ವಿಕೆಟ್
ಮಹೀಶ್ ತೀಕ್ಷಣಾ, 5 ಪಂದ್ಯ, 6 ವಿಕೆಟ್
ಸಂದೀಪ್ ಶರ್ಮಾ, 5 ಪಂದ್ಯ, 5 ವಿಕೆಟ್
ಆರ್‌ಆರ್ ಸಂಭವ್ಯ ತಂಡ: ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ / ಕುಮಾರ್ ಕಾರ್ತಿಕೇಯ, ಸಂದೀಪ್ ಶರ್ಮಾ, ಫಜಲ್ಹಕ್ ಫಾರೂಕಿ
ವಿಕೆಟ್ ಕೀಪರ್ ಆಗಿ ಫಿಲ್ ಸಾಲ್ಟ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡುವುದು ಉತ್ತಮ. ಈ ಮೂವರು ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಈ ಮೂರು ಆಟಗಾರರನ್ನು ಉಳಿಸಿಕೊಳ್ಳುವುದು ಬೆಸ್ಟ್. ಇನ್ನು ಬ್ಯಾಟರ್‌ಗಳಾಗಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ ರನ್ ಕಲೆ ಹಾಕಬೇಕು ಎಂಬ ಒತ್ತಡದಲ್ಲಿದ್ದು, ಇವರ ಮೇಲೆ ಭರವಸೆಯ ಹೆಚ್ಚುವುದು ಬೆಸ್ಟ್.

ಆಲ್‌ರೌಂಡರ್‌ಗಳಾಗಿ ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ ಹಾಗೂ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್. ವೇಗಿಗಳಾಗಿ ಭುವನೇಶ್ವರ್ ಕುಮಾರ್ ಹಾಗೂ ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ.
ನಾಯಕರನ್ನಾಗಿ ಸಂಜು ಸ್ಯಾಮ್ಸನ್, ಇಲವೇ ವಿರಾಟ್ ಕೊಹ್ಲಿ ಒಳ್ಳೆಯ ಆಯ್ಕೆ. ಉಪಾಯಕನ ಸ್ಥಾನವನ್ನು ಕೃನಾಲ್ ಪಾಂಡ್ಯ, ಭುವನೇಶ್ವರ್ ಅವರಿಗೆ ನೀಡಿದರೆ ಒಳ್ಳೆಯದು.