Virat Kohli: ಐಪಿಎಲ್‌ನ ಅತ್ಯಧಿಕ ರನ್ ಹಾದಿಯಲ್ಲಿ ಬೃಹತ್ ವಿಶ್ವದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಶನಿವಾರ, ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವು ಏಕ ವ್ಯಕ್ತಿ ಕೇಂದ್ರಿತ ಆಟವಾಗಿತ್ತು. ಅದು ಬೇರಾರು ಅಲ್ಲ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.
ಐಪಿಎಲ್ 2024ರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದರು.
ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 8ನೇ ಐಪಿಎಲ್ ಶತಕವನ್ನು ವಿಸ್ತರಿಸುವ ದಾಖಲೆಯನ್ನು ನಿರ್ಮಿಸಿದರು.

ವಿರಾಟ್ ಕೊಹ್ಲಿ ಅಜೇಯ 113 ರನ್ ಬಾರಿಸಿದರು. ಇದು ಐಪಿಎಲ್‌ನಲ್ಲಿ ತಮ್ಮದೇ ಜಂಟಿ-ಗರಿಷ್ಠ ಸ್ಕೋರ್ ಎನಿಸಿತು. ಅಲ್ಲದೆ ಐಪಿಎಲ್‌ನಲ್ಲಿ 7500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಆದರು.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 7579 ರನ್ ಗಳಿಸಿದ್ದಾರೆ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿಗಾಗಿ 424 ರನ್ ಗಳಿಸಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ 8003 ರನ್ ಕಲೆಹಾಕಿದ್ದಾರೆ.
ಹೀಗಾಗಿ ವಿರಾಟ್ ಕೊಹ್ಲಿ ಇದೀಗ ಟಿ20 ಮಾದರಿಯಲ್ಲಿ ಒಂದೇ ತಂಡಕ್ಕಾಗಿ 8000ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದೇ ವೇಳೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಅವರನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ ಪ್ರಸ್ತುತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದ್ದರೆ, ಎಂಎಸ್ ಧೋನಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಮಿಂಚಿನ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 183 ರನ್ ಕಲೆಹಾಕಿತು.
ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ 7,500 ರನ್ ಗಳಿಸಿದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಅವರ ಕೆಲವು ಸ್ಫೋಟಕ ಹೊಡೆತಗಳಿಗೆ 'ಪಿಂಕ್ ಸಿಟಿ' ಜೈಪುರ ಸಾಕ್ಷಿಯಾಯಿತು.
ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಅನ್ನು ಮತ್ತೊಮ್ಮೆ ಏಕಾಂಗಿಯಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿದರು. 72 ಎಸೆತಗಳನ್ನು ಎದುರಿಸಿ 12 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 113 ರನ್ ಕಲೆಹಾಕಿದರು. ನಾಯಕ ಫಾಫ್ ಡು ಪ್ಲೆಸಿಸ್ 44 ರನ್ ಗಳಿಸಿದರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು
- ವಿರಾಟ್ ಕೊಹ್ಲಿ 242 ಪಂದ್ಯ - 7519 ರನ್
- ಶಿಖರ್ ಧವನ್ 221 ಪಂದ್ಯ - 6755 ರನ್
- ಡೇವಿಡ್ ವಾರ್ನರ್ 180 ಪಂದ್ಯ - 6545 ರನ್
- ರೋಹಿತ್ ಶರ್ಮಾ 246 ಪಂದ್ಯ - 6280 ರನ್
- ಸುರೇಶ್ ರೈನಾ 208 ಪಂದ್ಯ - 5528 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications