For Quick Alerts
ALLOW NOTIFICATIONS  
For Daily Alerts
 

RCB vs SRH: ಇಂದಿನಿಂದ ಆರ್‌ಸಿಬಿ ಪಂದ್ಯದ ಟಿಕೆಟ್ ಮಾರಾಟ ಶುರು, ಮೆಟ್ರೋ ಪ್ರಯಾಣ ಫ್ರೀ! ಬುಕಿಂಗ್ ಮಾಡೋದ್ಹೇಗೆ?

IPL 2026 RCB Ticket: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026ರ ಉದ್ಘಾಟನಾ ಪಂದ್ಯದ ಟಿಕೆಟ್ ಮಾರಾಟವು ಇಂದಿನಿಂದ (ಮಾರ್ಚ್ 24) ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಬಾರಿಯ ಚೊಚ್ಚಲ ಪಂದ್ಯವು ಮಾರ್ಚ್ 28ರಂದು ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಲಿವೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವಿನ ಐಪಿಎಲ್‌ 2026 ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಈ ನಡುವೆಯೇ ಇದೀಗ ಪಂದ್ಯದ ಟಿಕೆಟ್‌ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಅಭಿಮಾನಿಗಳು ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

RCB vs SRH IPL 2026 Ticket Booking Live How to Book Tickets in Online amp amp Offline and Match Day Guide

ಕಳೆದ ಬಾರಿ ಚಾಂಪಿಯನ್ ಆಗಿ ಸಂಭ್ರಮಿಸಿದ್ದ ವಿರಾಟ್ ಕೊಹ್ಲಿ ಪಡೆ, ಈ ಬಾರಿಯೂ ತನ್ನ ತವರು ಮೈದಾನದಲ್ಲಿ ಗೆಲುವಿನ ಓಟ ಆರಂಭಿಸಲು ಸಜ್ಜಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಈ ಪಂದ್ಯಕ್ಕೆ ಭಾರಿ ಬೇಡಿಕೆ ಇರುವುದರಿಂದ ಟಿಕೆಟ್‌ಗಳು ಕ್ಷಣಮಾತ್ರದಲ್ಲಿ ಮಾರಾಟವಾಗುವ ಸಾಧ್ಯತೆಯಿದೆ.

ಟಿಕೆಟ್ ಖರೀದಿ ಕುರಿತು ಮಹತ್ವದ ಮಾಹಿತಿ

* ಟಿಕೆಟ್‌ಗಳು ಕೇವಲ ಆರ್‌ಸಿಬಿ ಅಧಿಕೃತ ವೆಬ್‌ಸೈಟ್ ಮತ್ತು ಆರ್‌ಸಿಬಿ ಆ್ಯಪ್‌ನಲ್ಲಿ ಮಾತ್ರ ಲಭ್ಯವಿರುತ್ತವೆ.

* ಆರ್‌ಸಿಬಿ ಟಿಕೆಟ್ ಮಾರಾಟ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಯಾವುದೇ ನಕಲಿ ಅಥವಾ ಅನಧಿಕೃತ ವೆಬ್‌ಸೈಟ್‌ಗಳ ಜಾಲಕ್ಕೆ ಸಿಲುಕಬೇಡಿ.

ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಪ್ರಯಾಣ

* ಪಂದ್ಯದ ದಿನದಂದು ಸ್ಟೇಡಿಯಂಗೆ ಬರುವ ಅಭಿಮಾನಿಗಳಿಗಾಗಿ ಆರ್‌ಸಿಬಿ ವಿಶೇಷ ಸೌಲಭ್ಯ ನೀಡಿದೆ. ಆರ್‌ಸಿಬಿ ಪಂದ್ಯದ ಅಧಿಕೃತ ಟಿಕೆಟ್ ಹೊಂದಿರುವವರು ಪಂದ್ಯದ ದಿನದಂದು ಉಚಿತ ಮೆಟ್ರೋ ಪ್ರಯಾಣ ಸೌಲಭ್ಯವನ್ನು ಪಡೆಯಬಹುದು.

* ನಿಮ್ಮ ಟಿಕೆಟ್‌ನಲ್ಲಿ ಕ್ರೀಡಾಂಗಣದ ಪ್ರವೇಶ ದ್ವಾರ, ಒಳಭಾಗದ ದ್ವಾರ, ಸ್ಟ್ಯಾಂಡ್ ಹೆಸರು, ರೋ ಮತ್ತು ಆಸನ ಸಂಖ್ಯೆಯಂತಹ ಪ್ರಮುಖ ವಿವರಗಳು ಇರುತ್ತವೆ

* ಭದ್ರತೆಯ ದೃಷ್ಟಿಯಿಂದ, ಪ್ರವೇಶಕ್ಕಾಗಿ ಬೇಕಾದ ಕ್ಯೂಆರ್‌ ಕೋಡ್ ಪಂದ್ಯದ ದಿನ ಗೇಟ್ ತೆರೆಯುವ ಕೆಲವು ಗಂಟೆಗಳ ಮೊದಲು ಮಾತ್ರ ನಿಮ್ಮ ಫೋನ್‌ನಲ್ಲಿ ಗೋಚರಿಸುತ್ತದೆ.

ಪ್ರವೇಶ ಮತ್ತು ನಿರ್ಗಮನದ ಮಾಹಿತಿ

* ಪ್ರೇಕ್ಷಕರು ಕೇವಲ ಕಬ್ಬನ್ ರೋಡ್, ಲಿಂಕ್ ರೋಡ್ ಮತ್ತು ಎಂಜಿ ರೋಡ್ ಮೂಲಕ ಮಾತ್ರ ಕ್ರೀಡಾಂಗಣವನ್ನು ಪ್ರವೇಶಿಸಬೇಕು.

* ಕೆಲವು ನಿರ್ದಿಷ್ಟ ಪೆವಿಲಿಯನ್ ಸ್ಟ್ಯಾಂಡ್‌ಗಳನ್ನು ಹೊರತುಪಡಿಸಿ, ಕ್ವೀನ್ಸ್ ರೋಡ್ ಮೂಲಕ ಯಾರಿಗೂ ಪ್ರವೇಶವಿರುವುದಿಲ್ಲ. ಪಂದ್ಯದ ದಿನ ಯಾವುದೇ ಗೊಂದಲವಿಲ್ಲದೆ ಕ್ರೀಡಾಂಗಣ ತಲುಪಲು ನಿಮ್ಮ ಟಿಕೆಟ್‌ನಲ್ಲಿ ಮುದ್ರಿಸಲಾದ ಹೊರಗಿನ ಮತ್ತು ಒಳಗಿನ ಗೇಟ್ ಸಂಖ್ಯೆಯನ್ನು ಮೊದಲೇ ಪರಿಶೀಲಿಸಿಕೊಳ್ಳುವುದು ಉತ್ತಮ.

ಮೊದಲ ಹಂತದ ವೇಳಾಪಟ್ಟಿಯಲ್ಲಿ ಆರ್‌ಸಿಬಿಗೆ 4 ಪಂದ್ಯಗಳು

ದೇಶದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಕಾರಣ, ಐಪಿಎಲ್ ಆಡಳಿತ ಮಂಡಳಿಯು ಸದ್ಯಕ್ಕೆ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಆರಂಭಿಕ ಹಂತದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ.

ಆರ್‌ಸಿಬಿ ಪಂದ್ಯಗಳ ವಿವರ

* ಮಾರ್ಚ್‌ 28ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಪಂದ್ಯ.

* ಏಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಪಂದ್ಯ.

* ಏಪ್ರಿಲ್ 10ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಪಂದ್ಯ.

* ಏಪ್ರಿಲ್ 12ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಪಂದ್ಯ.

Story first published: Tuesday, March 24, 2026, 14:55 [IST]
Other articles published on Mar 24, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+