For Quick Alerts
ALLOW NOTIFICATIONS  
For Daily Alerts
 

IPL 2024: ಎಸ್‌ಆರ್‌ಹೆಚ್‌ ಸಂಘಟಿತ ಆಟಕ್ಕೆ ಬ್ರೇಕ್‌ ಹಾಕಲು ಆರ್‌ಸಿಬಿ ಏನು ಮಾಡಬೇಕು?

ಐಪಿಎಲ್‌ 2024ರ ಆವೃತ್ತಿಯಲ್ಲಿ 250ನೇ ಪಂದ್ಯವಾಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ಕಣಕ್ಕೀಳಿಯುತ್ತಿದೆ. ಈ ಪಂದ್ಯಕ್ಕೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಸಜ್ಜಾಗಿದೆ.

ಕಳೆದ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ಎದುರು ತವರಿನಲ್ಲಿ ಸೋತಿರುವ ಆರ್‌ಸಿಬಿ ಈ ಬಾರಿ ಹೊಸ ತಂತ್ರಗಾರಿಕೆಯೊಂದಿಗೆ ಅಂಗಳಕ್ಕೆ ಇಳಿಯಲಿದೆ. ಆರ್‌ಸಿಬಿ ಮೊದಲು ಟಾಸ್‌ ಗೆಲ್ಲವುದು ಪಂದ್ಯದ ಮೇಲೆ ಹಿಡತ ಸಾಧಿಸುವುದಕ್ಕೆ ಮುಖ್ಯವಾಗುತ್ತದೆ. ಟಾಸ್‌ ಗೆದ್ದ ನಂತರ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೂ ಅನುಗುಣವಾಗಿ ಬಲಿಷ್ಠ ಹೈದರಾಬಾದ್‌ ತಂಡಕ್ಕೆ ಆರ್‌ಸಿಬಿ ಬೃಹತ್‌ ಟಾರ್ಗೆಟ್‌ ನೀಡಬೇಕು. ಇಲ್ಲವಾದರೆ ಎಸ್‌ಆರ್‌ಹೆಚ್‌ ಪಂದ್ಯವನ್ನು ಗೆಲ್ಲುವ ಅವಕಾಶಗಳು ಹೆಚ್ಚಿವೆ.

RCB vs SRH Royal Challengers Bengaluru vs Sunrisers Hyderabad Match Report

ಬೃಹತ್‌ ಟಾರ್ಗೆಟ್‌ ನೀಡುವುದಕ್ಕೆ ಕೇವಲ ವಿರಾಟ್‌ ಕೊಹ್ಲಿ ಆಟವಾಡಿದರೆ ಸಾಲದು, ನಾಯಕ ಫಾಪ್‌ ಡು ಪ್ಲೆಸಿಸ್‌ ಕೂಡ ಜವಾಬ್ದಾರಿ ಆಟವಾಡಬೇಕು. ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಣಕ್ಕೀಳಿದರೆ ಆರ್‌ಸಿಬಿಗೆ ನೆರವಾಗುವಂತ ಇನ್ನಿಂಗ್ಸ್‌ ಆಡಬೇಕು. ಈಗಾಗಲೇ ಕೆಕೆಆರ್ ವಿರುದ್ಧ ತಮಗೆ ಸಿಕ್ಕಿದ ಅವಕಾಶದಲ್ಲಿ ವಿಲ್‌ ಜ್ಯಾಕ್ಸ್‌ ಅರ್ಧಶತಕ ಬಾರಿಸಿ ನಾನು ಫಾರ್ಮ್‌ನಲ್ಲಿದ್ದೇನೆ ಎಂಬ ಸಂದೇಶ ನೀಡಿದ್ದಾರೆ. ಇನ್ನು ರಜತ್‌ ಪಾಟಿದಾರ್‌ ಸಹಾ ಕಳೆದ ಪಂದ್ಯದಂತೆ ಹೈದರಾಬಾದ್‌ ಬೌಲರ್ಸ್‌ ಎದುರು ತಮ್ಮ ಖದರ್‌ ಮತ್ತೊಮ್ಮೆ ತೋರಿಸಬೇಕು. ಹೀಗಿದ್ದಾಗ ಮಾತ್ರ ಹೈದರಾಬಾದ್‌ಗೆ ಅಧಿಕ ರನ್‌ಗಳ ಟಾರ್ಗೆಟ್‌ ನೀಡಲು ಸಾಧ್ಯ.

ಬೃಹತ್‌ ಟಾರ್ಗೆಟ್‌ ನೀಡುವುದರ ಜೊತೆಗೆ ಕಳಪೆ ಬೌಲಿಂಗ್‌ ಫಾರ್ಮ್‌ನಿಂದ ಸ್ಟಾರ್‌ ಬೌಲರ್ಸ್‌ ಹೊರ ಬಂದು ಆರ್‌ಸಿಬಿ ಗೆಲುವಿಗೆ ಶ್ರಮಿಸಬೇಕು. ಕಳೆದ ಪಂದ್ಯ ಕೆಕೆಆರ್‌ ವಿರುದ್ಧ ಆರ್‌ಸಿಬಿ ಬೌಲಿಂಗ್‌ನಲ್ಲಿ ಸುಧಾರಣೆ ಕಂಡಿತ್ತು. ಸ್ಪೋಟಕ ಬ್ಯಾಟರ್‌ಗಳಾದ ಸುನಿಲ್‌ ನರೈನ್‌, ಆಂಡ್ರೆ ಅವರನ್ನು ಆರ್‌ಸಿಬಿ ಬೌಲರ್‌ ಉತ್ತಮವಾಗಿ ಬೌಲ್‌ ಮಾಡಿ ಕಟ್ಟಿಹಾಕಿದ್ದರು. ಇಂದು ಕೂಡ ಹೈದರಾಬಾದ್‌ ಎದುರು ಇದಕ್ಕಿಂತ ಉತ್ತಮವಾಗಿ ಕರಣ್‌ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್‌ ಪ್ರದರ್ಶನ ನೀಡಬೇಕು.

ಆಗ ಮಾತ್ರ ಐಪಿಎಲ್‌ ಇತಿಹಾಸದ ಪವರ್‌ ಫ್ಲೇನಲ್ಲಿ ಅತಿ ಹೆಚ್ಚು ರನ್‌ ಹೊಡೆದ ದಾಖಲೆ ಹೊಂದಿರುವ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ರನ್ನು ಔಟ್‌ ಮಾಡಬಹುದು. ಜೊತೆಗೆ ಹೈದರಾಬಾದ್‌ ಮಾಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಯಾಗಿರುವ ಹೆನ್ರಿಚ್‌ ಕ್ಲಾಸೆನ್‌ ವಿರುದ್ಧ ಉತ್ತಮವಾಗಿ ಬೌಲಿಂಗ್‌ ಮಾಡಿ ಖೆಡ್ಡಾಕ್ಕೆ ಬೀಳಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಹುದು.

Story first published: Thursday, April 25, 2024, 14:23 [IST]
Other articles published on Apr 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+