WPL 2026: ಆರ್‌ಸಿಬಿ ಗೆಲುವಿಗೆ 144 ರನ್ ಗುರಿ ನೀಡಿದ ಯುಪಿ
ನವಿ ಮುಂಬೈ: ಭರವಸೆಯ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್‌ನ 5ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಯುಪಿ ತಂಡದ ಪರ ಆರಂಭಿಕ ಆಟಗಾರರಾದ ಮೆಗ್ ಲ್ಯಾನಿಂಗ್ ಹಾಗೂ ಹರ್ಲಿನ್ ಡಿಯೋಲ್ ಜೋಡಿ ತಂಡಕ್ಕೆ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 21 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ ಹರ್ಲಿನ್ ಡಿಯೋಲ್ 11 ರನ್ ಬಾರಿಸಿ ಲಾರೆನ್ ಬೆಲ್ ಎಸೆತದಲ್ಲಿ ಔಟ್ ಆದರು. ಭರವಸೆಯ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರು 14 ರನ್ ಬಾರಿಸಿದ್ದಾಗ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ರಾಧಾ ಯಾದವ್ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು.

ಫೋಬೆ ಲಿಚ್‌ಫೀಲ್ಡ್ 11 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 20 ರನ್ ಬಾರಿಸಿ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಮಂಧಾನ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು. ಕಿರಣ್ ನವಗಿರೆ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. ಶ್ವೇತಾ ಶೇರಾವತ್ ಸೊನ್ನೆ ಸುತ್ತಿದ್ದರು.
ದೀಪ್ತಿ, ಡಾಟಿನ್ ಜುಗಲ್‌ಬಂಧಿ
50 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೀಪ್ತಿ ಶರ್ಮಾ ಹಾಗೂ ಡಿಯಾಂಡ್ರಾ ಡಾಟಿನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯ ಆಟಕ್ಕೆ ಆಟಕ್ಕೆ ಬ್ರೇಕ್ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾದರು. ಈ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ 72 ಎಸೆತಗಳಲ್ಲಿ ಅಜೇಯ 93 ರನ್ ಜೊತೆಯಾಟದ ಕಾಣಿಕೆ ನೀಡಿದರು.

ಆಲ್‌ರೌಂಡರ್ ದೀಪ್ತಿ ಶರ್ಮಾ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಡಿಯಾಂಡ್ರಾ ಡಾಟಿನ್ 37 ಎಸೆತಗಳಲ್ಲಿ ಅಜೇಯ 40 ರನ್ ಸೇರಿಸಿದರು. ಅಂತಿಮವಾಗಿ ಯುಪಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಸೇರಿಸಿತು. ಆರ್‌ಸಿಬಿ ನಾಡಿನ್ ಡಿ ಕ್ಲರ್ಕ್, ಶ್ರೇಯಾಂಕ ಪಾಟೀಲ್ ತಲಾ 2 ವಿಕೆಟ್ ಪಡೆದು ಬೀಗಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications