WPL 2026: ಆರ್‌ಸಿಬಿಗೆ 9 ವಿಕೆಟ್ ಭರ್ಜರಿ ಜಯ: ಸ್ಮೃತಿ ಪಡೆಗೆ ಅಗ್ರಸ್ಥಾನ
ನವಿ ಮುಂಬೈ: ಭರವಸೆಯ ಆರಂಭಿಕ ಆಟಗಾರ್ತಿಯರಾದ ಗ್ರೇಸ್ ಹ್ಯಾರಿಸ್ ಹಾಗೂ ನಾಯಕಿ ಸ್ಮೃತಿ ಮಂಧಾನ ಅವರು ಭರ್ಜರಿ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಣಿಸಿತು. ಈ ಮೂಲಕ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.
ಯುಪಿ ನೀಡಿದ್ದ 144 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರೀಸ್ ಜೋಡಿ ತಂಡಕ್ಕೆ ಭರ್ಜರಿ ಆರಂಭದ ಬುನಾದಿ ಹಾಕಿಕೊಟ್ಟರು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೊಡಿ ಮೊದಲ ವಿಕೆಟ್‌ಗೆ 11.4 ಓವರ್‌ಗಳಲ್ಲಿ 137 ರನ್‌ಗಳ ಜೊತೆಯಾಟ ನೀಡಿತು.

ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ಗ್ರೇಸ್ ಹ್ಯಾರೀಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಬಿರುಸಿನ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಈ ಮೂಲಕ ಎಲ್ಲಿಸ್ ಪೆರ್ರಿಸ್ ಸ್ಥಾನವನ್ನು ತುಂಬಲು ರೆಡಿ ಇರುವುದಾಗಿ ಘೋಷಿಸಿದರು. ಇವರು ಯುಪಿ ವಿರುದ್ಧ 212 ರನ್‌ಗಳ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು ಕೇವಲ 40 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಾಯದಿಂದ 85 ರನ್ ಬಾರಿಸಿ ಔಟ್ ಅದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಯುಪಿ ತಂಡದ ಆರಂಭಿಕರಾದ ಮೆಗ್ ಲ್ಯಾನಿಂಗ್ (14), ಹರ್ಲಿನ್ ಡಿಯೋಲ್ (11), ಫೋಬೆ ಲಿಚ್‌ಫೀಲ್ಡ್ (20), ಕಿರಣ್ ನವಗಿರೆ (5), ಶ್ವೇತಾ ಶೇರಾವತ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 6ನೇ ವಿಕೆಟ್‌ಗೆ ಭರವಸೆಯ ಆಲ್‌ರೌಂಡರ್ ದೀಪ್ತಿ ಶರ್ಮಾ ಹಾಗೂ ಡಿಯಾಂಡ್ರಾ ಡಾಟಿನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 72 ಎಸೆತಗಳಲ್ಲಿ ಅಜೇಯ 93 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.
ಆರ್‌ಸಿಬಿಗೆ ಅಗ್ರಸ್ಥಾನ
ನಾಯಕಿ ಸ್ಮೃತಿ ಮಂಧಾನ ಅವರು ಗ್ರೇಸ್ ಹ್ಯಾರಿಸ್ ಅವರಿಗೆ ಉತ್ತಮ ಸಾಥ್ ನೀಡಿದರು. ಇವರು 32 ಎಸೆತಗಳಲ್ಲಿ 9 ಬೌಂಡರಿ ಸಹಾಯದಿದ ಅಜೇಯ 47 ರನ್ ಬಾರಿಸಿದರು. ರಿಚಾ ಘೋಷ್ ಅಜೇಯ 4 ರನ್ ಸಿಡಿಸಿದರು. ಅಂತಿಮವಾಗಿ ಆರ್‌ಸಿಬಿ 12.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 145 ರನ್ ಸೇರಿಸಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿಅಗ್ರ ಸ್ಥಾನಕ್ಕೆ ಏರಿತು.

6ನೇ ವಿಕೆಟ್‌ಗೆ ಉತ್ತಮ ಜೊತೆಯಾಟ
ಆಲ್‌ರೌಂಡರ್ ದೀಪ್ತಿ ಶರ್ಮಾ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಸಿಡಿಸಿದರು. ಡಿಯಾಂಡ್ರಾ ಡಾಟಿನ್ 37 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಸೇರಿಸಿತು. ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್, ನಾಡಿನ್ ಡಿ ಕ್ಲರ್ಕ್ ತಲಾ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications