Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಎರಡನೇ ಗೆಲುವಿನ ಹುಡುಕಾಟದಲ್ಲಿ ಆರ್‌ಸಿಬಿ: ಪಂದ್ಯದ ಸಮಯ, ನೇರ ಪ್ರಸಾರದ ಮಾಹಿತಿ

ನವಿ ಮುಂಬೈ: ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಯುಪಿ ವಾರಿಯರ್ಸ್‌ ವಿರುದ್ಧ ಕಾದಾಟ ನಡೆಸಲಿವೆ. ಎರಡೂ ತಂಡಗಳಲ್ಲೂ ಸ್ಟಾರ್ ವಿದೇಶಿ ಆಟಗಾರ್ತಿಯರು ಇದ್ದು, ಅಭಿಮಾನಿಗಳ ಚಿತ್ತ ಕದ್ದಿದೆ.

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಜಯ ಸಾಧಿಸಿರುವ ಆರ್‌ಸಿಬಿ, ಎರಡನೇ ಗೆಲುವಿನ ಹುಡುಕಾಟದಲ್ಲಿದೆ. ಈ ಪಂದ್ಯದಲ್ಲೂ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಸ್ಮೃತಿ ಮಂಧನಾ ಪಡೆಯದ್ದಾಗಿದೆ. ಇನ್ನು ಯುಪಿ ವಾರಿಯರ್ಸ್‌ ಗುಜರಾತ್ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

RCB-W vs UP Warriorz WPL Match Details XI amp amp Live Stream

ಡಿವೈ ಪಾಟೀಲ್‌ ಮೈದಾನದಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡಲು ಇಷ್ಟ ಪಡುತ್ತದೆ. ಏಕೆಂದರೆ ಈ ಮೈದಾನದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡಲು ಮುಂದಾಗುತ್ತದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಯುಪಿ ತಂಡಕ್ಕೆ ಮೆಗ್‌ ಲ್ಯಾನಿಂಗ್ ಅನುಭವದ ಬಲವಿದೆ.

ನಾಡೀನ್‌ ಡಿ ಕ್ಲರ್ಕ್‌ ಆಕರ್ಷಣೆ

ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಗ್ರೇಸ್‌ ಹ್ಯಾರಿಸ್‌ ಸಮಯೋಚಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಈ ಜೋಡಿ ಪವರ್‌ ಪ್ಲೇನಲ್ಲಿ ಯುಪಿ ಬೌಲರ್‌ಗಳಿಗೆ ಕಾಟ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಡಿ ಹೇಮಲತಾ, ರಿಚಾ ಘೋಷ್, ರಾಧಾ ಯಾದವ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಆಲ್‌ರೌಂಡರ್‌ ನಾಡೀನ್‌ ಡಿ ಕ್ಲರ್ಕ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಮೊದಲು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಆರ್‌ಸಿಬಿಗೆ ಜಯದ ಮಾಲೆ ತೊಡಿಸಿದ್ದರು. ಇನ್ನು ಲಾರೆನ್ ಬೆಲ್, ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್ ಬಿಗುವಿನ ದಾಳಿಯನ್ನು ನಡೆಸಿ ತಂಡಕ್ಕೆ ಆಧಾರವಾಗಬೇಕಿದೆ.

RCB-W vs UP Warriorz WPL Match Details XI amp amp Live Stream

ಆರ್‌ಸಿಬಿ ಸಂಭಾವ್ಯ ತಂಡ: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಡಿ ಹೇಮಲತಾ, ರಿಚಾ ಘೋಷ್, ರಾಧಾ ಯಾದವ್, ನಾಡೀನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಪ್ರೇಮಾ ರಾವತ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.

ಮೊದಲ ಗೆಲುವಿನ ಹುಡುಕಾಟ

ಸ್ಟಾರ್ ಆಟಗಾರ್ತಿಯರನ್ನು ತಮ್ಮ ತಂಡದಲ್ಲಿ ಹೊಂದಿರುವ ಯುಪಿ ವಾರಿಯರ್ಸ್‌, ಲೀಗ್‌ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಗುಜರಾತ್‌ ಜೈಂಟ್ಸ್ ವಿರುದ್ಧ ಮಾಡಿದ ತಪ್ಪನ್ನು ಮೆಟ್ಟಿನಿಂತು ಆಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಮೊದಲ ಗೆಲುವಿನ ಕನಸು ನನಸಾಗುತ್ತದೆ. ನಾಯಕಿ ಮೆಗ್‌ ಲ್ಯಾನಿಂಗ್‌, ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಅವಶ್ಯಕತೆ ಇದೆ. ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಾಟ ನೀಡಬೇಕಿದೆ.

ಯುಪಿ ಸಂಭಾವ್ಯ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಿಖಾ ಪಾಂಡೆ, ಡಿಯಾಂಡ್ರಾ ಡಾಟಿನ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಆಶಾ ಶೋಭನಾ, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಫೋಬೆ ಲಿಚ್‌ಫೀಲ್ಡ್, ಕ್ರಾಂತಿ ಗೌಡ್.

ಪಂದ್ಯವನ್ನು ನೋಡುವುದು ಹೇಗೆ?

ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯಗಳನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಪಂದ್ಯ ಆರಂಭವಾಗುವುದು ಯಾವಾಗ?

ಆರ್‌ಸಿಬಿ, ಯುಪಿ ವಾರಿಯರ್ಸ್‌ ನಡುವಣ ಪಂದ್ಯ ಸಂಜೆ 7.30ಕ್ಕೆ ನಡೆಯಲಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

Story first published: Monday, January 12, 2026, 8:53 [IST]
Other articles published on Jan 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+