ಐಪಿಎಲ್ ಹರಾಜು: ಆರ್‌ಸಿಬಿಗೆ ಅಮೂಲ್ಯ ಸಲಹೆ ನೀಡಿದ ಗೌತಮ್ ಗಂಭೀರ್

ಬೆಂಗಳೂರು: ಫೆಬ್ರವರಿ 18ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಗಾಗಿ ಆಟಗಾರರ ಹರಾಜು ನಡೆಯಲಿದೆ. ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಗೆ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಮೂಲ್ಯ ಸಲಹೆ ನೀಡಿದ್ದಾರೆ.
ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ 14ನೇ ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ತಮ್ಮ ತಮ್ಮ ತಂಡ ಬಲಿಷ್ಠಗೊಳಿಸಲು ಫ್ರಾಂಚೈಸಿಗಳು ಎದುರು ನೋಡುತ್ತಿವೆ. ಹೀಗಾಗಿ ಆರ್‌ಸಿಬಿ ಈ ಬಾರಿ ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತ ಆಟಗಾರರಿಗಾಗಿ ಎದುರು ನೋಡಬೇಕು ಎಂದು ಗೌತಮ್ ಗಂಭೀರ್ ಎಂದಿದ್ದಾರೆ.
'ಬಹುಶಃ ಆರ್‌ಸಿಬಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತ ಆಟಗಾರರಿಗಾಗಿ ಎದುರು ನೋಡುತ್ತಿದೆ. ಯಾಕೆಂದರೆ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲಿರುವ ಆಟಗಾರರ ಮೇಲಿರುವ ದೊಡ್ಡ ಒತ್ತಡವನ್ನು ಆರ್‌ಸಿಬಿ ಕಡಿಮೆ ಮಾಡಬೇಕಿದೆ,' ಎಂದು ಹರಾಜಿಗೂ ಮುನ್ನ ಮಾತನಾಡಿದ ಗಂಭೀರ್ ಹೇಳಿಕೊಂಡಿದ್ದಾರೆ.
ಈ ಬಾರಿ ಐಪಿಎಲ್ ಹರಾಜು ಕಣದಲ್ಲಿ 292 ಮಂದಿ ಆಟಗಾರರಿದ್ದಾರೆ. ಇವರಲ್ಲಿ ಟಿ20 ಸ್ಫೋಟಕ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದಲ್ಲಿದ್ದ ಮ್ಯಾಕ್ಸ್‌ವೆಲ್ ಮೂಲ ಬೆಲೆ 2 ಕೋ.ರೂ. ಆರ್‌ಸಿಬಿ ಪರ್ಸ್‌ನಲ್ಲಿ ಸದ್ಯ 35.40 ಕೋ.ರೂ. ಲಭ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications