Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರಡನೇ ಬಾರಿ ಟ್ರೋಫಿ ಗೆದ್ದ ಆರ್‌ಸಿಬಿ: ವಿರಾಟ್‌ ಡ್ಯಾನ್ಸ್‌ ವೈರಲ್‌

19ನೇ ಆವೃತ್ತಿಯ ಐಪಿಎಲ್‌ನ ಚಾಂಪಿಯನ್ ಪಟ್ಟವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅಲಂಕರಿಸಿದೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಬೆಂಗಳೂರು ಎರಡನೇ ಬಾರಿ ಟ್ರೋಫಿಯನ್ನು ಗೆದ್ದು ಕೊಂಡು ಇತಿಹಾಸ ನಿರ್ಮಿಸಿದೆ.

ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡಿದ ಬಳಿಕ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಫೈನಲ್‌ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತ ವಿರಾಟ್ ಕೊಹ್ಲಿ ಪಡೆ ಅಬ್ಬರಿಸಿತು. ಗುಜರಾತ್ ನೀಡಿದ್ದ 156 ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್‌ ಗಳಿಸಿತು. ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 75 ರನ್‌ ಸಿಡಿಸಿದರು. ಈ ಫೈನಲ್‌ ಪಂದ್ಯದ ಬಳಿಕ ಆರ್‌ಸಿಬಿ ತಂಡ ಭರ್ಜರಿ ಸಂಭ್ರಮಾಚರಣೆ ಮಾಡಿತು.

RCB

ಆರ್‌ಸಿಬಿ ತಂಡ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ಆಟಗಾರರು ಸಂಭ್ರಮಿಸಿದರು. ಆಟಗಾರರು ಪಂದ್ಯದ ಬಳಿಕ ಹೋಟೆಲ್‌ಗೆ ಬಂದರು. ಆಗ ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಡ್ಯಾನ್ಸ್ ಮಾಡಿ ಖುಷಿ ಪಟ್ಟರು.

ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟಿ-ಶರ್ಟ್ ಧರಿಸಿ ಅನುಷ್ಕಾ ಶರ್ಮಾ ಅವರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಕೊಹ್ಲಿ ಮತ್ತು ಅನುಷ್ಕಾ ಅವರ ನೃತ್ಯವು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಡ್ಯಾನ್ಸ್‌ ಮಾಡುವ ವೇಳೆ ಕಿಂಗ್ ಕೊಹ್ಲಿ ಕೂಡ ದಿನೇಶ್ ಕಾರ್ತಿಕ್ ಅವರೊಂದಿಗೆ ನೃತ್ಯ ಮಾಡಿದರು.

ಚಾಂಪಿಯನ್‌ ಪಟ್ಟ ಅಲಂಕರಿಸಿದ ಬಳಿಕ ಭಾವುಕರಾದ ವಿರಾಟ್

ಪಂದ್ಯದ ನಂತರ ವಿರಾಟ್ ಭಾವುಕರಾದರು. ಪ್ರತಿಯೊಬ್ಬ ಆಟಗಾರನು ಇಂತಹ ಕ್ಷಣಕ್ಕೆ ಸಾಕ್ಷಿಯಾಗಲು ಬಯಸುತ್ತಾನೆ. ಇಂತಹ ಗೆಲುವನ್ನು ಅದೆಷ್ಟೋ ಬಾರಿ ಮನಸ್ಸಿನಲ್ಲಿ ನೆನಪಿಸಿಕೊಂಡಿದ್ದು, ವಿನ್ನಿಂಗ್ ರನ್ನ ತನ್ನ ಬ್ಯಾಟ್‌ನಿಂದಲೇ ಬಂದಿದ್ದಾಗಿ ಕಲ್ಪಿಸಿಕೊಂಡಿದ್ದೇ ಎಂದು ವಿರಾಟ್‌ ವಿವರಿಸಿದ್ದಾರೆ. ಇವರು ಮಾತುಗಳನ್ನು ಕೇಳಿದಾಗ ದೀರ್ಘ ವರ್ಷಗಳ ಕಠಿಣ ಪರಿಶ್ರಮ ಪ್ರತಿಬಿಂಬಿಸುವಂತೆ ಕಾಣುತ್ತದೆ. ಈ ಋತುವಿನಲ್ಲಿ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು. ಹೀಗಾಗಿ ತನ್ನ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರು. ಇದು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿತು ಎಂದಿದ್ದಾರೆ.

Story first published: Monday, June 1, 2026, 22:16 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+