ಇದು ನನ್ನ ಮನೆ! RCB ಚಾಂಪಿಯನ್ ಆದ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್
ಬೆಂಗಳೂರು: 2026 ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ಕೇವಲ 10 ದಿನಗಳ ನಂತರ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ತಮ್ಮ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಬಗ್ಗೆ ಮಾಡಿದ ಭಾವನಾತ್ಮಕ ಪೋಸ್ಟ್ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಲೀಗ್ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಎರಡನೇ ಕ್ವಾಲಿಫೈಯರ್ ಗೆದ್ದು ಫೈನಲ್ ಪ್ರವೇಶಿಸಿದ್ದ ಶುಭಮನ್ ಗಿಲ್ ಮುಂದಾಳತ್ವದ ಗುಜರಾತ್ ತಂಡ ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಆರ್‌ಸಿಬಿ ಸತತ 2ನೇ ಬಾರಿಗೆ ಟ್ರೋಫಿ ಎತ್ತಿ ಸಂಭ್ರಮಿಸಿತು.

ವಿರಾಟ್ ಕೊಹ್ಲಿ ಈ ಪ್ರಯಾಣದ ಬಗ್ಗೆ ತಂಡದ ಹೋರಾಟ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಕೇವಲ ನಾಲ್ಕರಿಂದ ಐದು ಸಾಲುಗಳಲ್ಲಿ ಹಂಚಿಕೊಂಡಿದ್ದಾರೆ. ಈ ಋತುವಿನ ಆರಂಭದಿಂದ ಚಾಂಪಿಯನ್ ಆಗುವವರೆಗಿನ ಪ್ರಯಾಣವನ್ನು ವಿವರಿಸುತ್ತಾ, "ನಾವು ಈ ಋತುವನ್ನು ಅಚಲ ನಂಬಿಕೆಯೊಂದಿಗೆ ಪ್ರಾರಂಭಿಸಿದ್ದು, ಸತತ ಎರಡು ಪ್ರಶಸ್ತಿಗಳನ್ನು ಗೆಲ್ಲುವುದರೊಂದಿಗೆ ಕೊನೆಗೊಳಿಸಿದ್ದೇವೆ. ನಮ್ಮ ತಂಡ ಗೆಲುವಿನ ಒತ್ತಡ, ಸಾಲು ಸಾಲು ಸವಾಲುಗಳು, ಸಂತೋಷ, ಅಭಿಮಾನಿಗಳ ಬೆಂಬಲ, ಎಲ್ಲ ಭಾವನೆಯನ್ನು ನಾವು ಒಟ್ಟಾಗಿ ಅನುಭವಿಸಿದ್ದೇವೆ ಎಂದು ವಿರಾಟ್ ಬರೆದುಕೊಂಡಿದ್ದಾರೆ. ಅಲ್ಲದೆ ಇದರ ಜೊತೆಗೆ ವಿಡಿಯೋವನ್ನೂ ಸಹ ಹಂಚಿಕೊಂಡಿದ್ದಾರೆ.
ಈ ಗೆಲುವು ನನಗೆ ವಿಶೇಷವೆನಿಸುತ್ತದೆ ಏಕೆಂದರೆ... ಈ ಸ್ಥಳ ನನ್ನ ಮನೆ! ಎಂದು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಸಾಧನೆ
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಒಂದೇ ತಂಡದ ಪರ 19 ಆವೃತ್ತಿಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಇತ್ತೀಚೆಗೆ ನಡೆದ ಐಪಿಎಲ್‌ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. 37 ವರ್ಷದ ವಿರಾಟ್ ಕೊಹ್ಲಿ ಐಪಿಎಲ್ 2026ರಲ್ಲಿ ಆಡಿದ 16 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 675 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸಹ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications