Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಸ್ಯಗಾರ ದಾನಿಶ್‌ಗೆ ವಿಭಿನ್ನ ರೀತಿಯಲ್ಲಿ ಬರ್ತ್‌ ಡೇ ವಿಶ್ ಮಾಡಿದ ಆರ್‌ಸಿಬಿ

RCB wishes comedian Danish Sait in different way on his birthday

ಬೆಂಗಳೂರು, ಜುಲೈ 1: ಕನ್ನಡಿಗರನ್ನು ವಿಭಿನ್ನ ರೀತಿಯಲ್ಲಿ ನಗಿಸುತ್ತಿರುವವರು ಹಾಸ್ಯಗಾರ, ನಟ ದಾನಿಶ್ ಸೇಠ್. ಜುಲೈ 1ರಂದು ತನ್ನ 33ನೇ ಹುಟ್ಟುಹಬ್ಬ ಆಚರಿಸುತ್ತಿರುವ ದಾನಿಶ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಭಿನ್ನ ರೀತಿಯಲ್ಲಿ ಶುಭಹಾರೈಸಿದೆ.

ಬೆಂಗಳೂರು ತಂಡದ ಆಟಗಾರರನ್ನು ನಗಿಸುತ್ತಿರುವ ದಾನಿಶ್‌ಗೆ ಶುಭ ಹಾರೈಸಿ ಆರ್‌ಸಿಬಿ ಟ್ವೀಟ್ ಮಾಡಿದೆ. 'ತನ್ನ ವಿಭಿನ್ನ ನಡೆಯಿಂದ ನಮ್ಮನ್ನು ನಗಿಸುವ, ಇಂಗ್ಲಿಷ್ ಭಾಷೆಯ ಮೂಲಕ ನಮ್ಮನ್ನು ಅಳಿಸುವ ಮಿಸ್ಟರ್ ನಾಗ್ಸ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು,' ಆರ್‌ಸಿಬಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ದಾನಿಶ್ ಸೇಠ್ ಅವರು 2018ರಲ್ಲಿ 'ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್' ಎನ್ನುವ ಕನ್ನಡ ಹಾಸ್ಯ ಚಲನಚಿತ್ರದಲ್ಲಿ ನಟಿಸಿದ್ದಾರೆ. ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್ ಸಿನಿಮಾದಲ್ಲಿ ದಾನಿಶ್ ವೇಷವೇ ಬದಲಾಗಿತ್ತು. ಆ ಚಿತ್ರದ ಪಾತ್ರಧಾರಿಯನ್ನೇ ಮುಂದಿಟ್ಟು ಆರ್‌ಸಿಬಿ ವಿಶ್ ಮಾಡಿದೆ.

ಆರ್‌ಸಿಬಿ ಶುಭಹಾರೈಸಿ ಮಾಡಿರುವ ಟ್ವೀಟ್‌ಗೆ ದಾನಿಶ್ ತಮಾಷೆಯಾಗೇ ಪ್ರತಿಕ್ರಿಯಿಸಿದ್ದಾರೆ. 'ಧನ್ಯವಾದಗಳು ಸ್ನೇಹಿತರೆ, ಅಮ್ಮ ನನಗೆ ಜನ್ಮ ನೀಡಿದಳು. ನಾನು ಮತ್ತು ನೀವು ಸೇರಿ ಈ ವಿಚಿತ್ರ ಜೀವಿಗೆ ಜನ್ಮ ನೀಡಿದೆವು,' ಎಂದು ತನ್ನ ಫೋಟೋವನ್ನೇ ಉದ್ದೇಶಿಸಿ ದಾನಿಶ್ ತಮಾಷೆಯಾಗಿ ಬರೆದುಕೊಂಡಿದ್ದಾರೆ.

Story first published: Wednesday, July 1, 2020, 16:46 [IST]
Other articles published on Jul 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+