For Quick Alerts
ALLOW NOTIFICATIONS  
For Daily Alerts
 

RCB ನಾಯಕನ ಬಗ್ಗೆ ಅಪ್‌ಡೇಟ್‌ ನೀಡಿದ ಮ್ಯಾನೇಜ್ಮೆಂಟ್‌: ಸ್ಟಾರ್‌ ಪ್ಲೇಯರ್‌ಗೆ ಮತ್ತೆ ಪಟ್ಟ?

ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ತನ್ನ ರಂಗು ದೇಶ ವ್ಯಾಪಿ ವ್ಯಾಪಿಸಿಕೊಳ್ಳಲಿದೆ. ಈ ಮೆಗಾ ಟೂರ್ನಿಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ಹಲವು ತಂಡಗಳು ತಮ್ಮ ತಮ್ಮ ನಾಯಕರನ್ನು ಘೋಷಿಸಿಕೊಂಡಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನಾಯಕನನ್ನು ಘೋಷಣೆ ಮಾಡಿಲ್ಲ. ಈ ತಂಡದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿದೆ.

ಈಗಾಗಲೇ 17 ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ ಅನುಭವ ಹೊಂದಿರುವ ಆರ್‌ಸಿಬಿ ತಂಡ ಒಮ್ಮೆಯೂ ಕಪ್‌ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈಗ ಆರ್‌ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ ರಿಷಭ್‌ ಪಂತ್‌, ಕೆಎಲ್‌ ರಾಹುಲ್‌ ಅವರನ್ನು ಖರೀದಿಸಬಹುದಿತ್ತು. ಆದರೆ ಆರ್‌ಸಿಬಿ ಈ ಆಟಗಾರರುನ್ನು ಖರೀದಿ ಮಾಡುವಲ್ಲಿ ಹಿಂದೆ ಬಿದ್ದಿತು.

RCB Yet to Announce Captain for IPL 2025 Amid Virat Kohli Leadership Speculations

ಆರ್‌ಸಿಬಿ ಮ್ಯಾನೇಜ್ಮೆಂಟ್‌ ಹೇಳಿದ್ದೇನು?

ಆರ್‌ಸಿಬಿ ಹರಾಜಿನಲ್ಲಿ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ಖರೀದಿ ಮಾಡುವಲ್ಲಿ ವಿಫಲರಾದರು. ಹೀಗಾಗಿ ಮ್ಯಾನೇಜ್ಮೆಂಟ್‌ ತಂಡದಲ್ಲಿರುವ ಆಟಗಾರರನ್ನೇ ನಾಯಕರನ್ನಾಗಿ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಇನ್ನು ಈ ಬಾರಿ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಬಗ್ಗೆ ಆರ್‌ಸಿಬಿ ಸಿಒಒ ರಾಜೇಶ್‌ ಮೇನನ್ ಈ ವಿಚಾರದ ಬಗ್ಗೆ ಸ್ಪೋರ್ಟ್ಸ್‌ ಟುಡೇ ಜೊತೆ ಮಾತನಾಡಿದ್ದಾರೆ. ನಮ್ಮ ತಂಡದಲ್ಲಿ ಸಾಕಷ್ಟು ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರು ಇದ್ದಾರೆ. ನಾವು ಇನ್ನು ಯಾವುದನ್ನು ಫೈನಲ್ ಮಾಡಿಲ್ಲ.

ಆರ್‌ಸಿಬಿ ನಾಯಕ ಯಾರು?

ಸದ್ಯ ನಾವು ಯಾವುದನ್ನು ಡಿಸೈಡ್ ಮಾಡಿಲ್ಲ. ನಮ್ಮ ತಂಡದಲ್ಲಿ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರು ಇದ್ದಾರೆ. ನಾವು ಯಾರನ್ನು ನಾಯಕರನ್ನಾಗಿ ಮಾಡಬೇಕು ಎಂಬ ಬಗ್ಗೆ ನಿರ್ಣಯವಾಗಿಲ್ಲ ಎಂದು ರಾಜೇಶ್‌ ಮೇನನ್ ತಿಳಿಸಿದ್ದಾರೆ.

RCB Yet to Announce Captain for IPL 2025 Amid Virat Kohli Leadership Speculations

ನಾವು ಸಹ ಆರ್‌ಸಿಬಿ ತಂಡದಲ್ಲಿ ಹಲವು ಖಾಲಿ ಸ್ಥಳಗಳು ಇವೆ. ಈ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಚಿನ್ನಸ್ವಾಮಿ ಅಂಗಳದಲ್ಲಿ ಯಾವ ರೀತಿ ಬೌಲರ್‌ಗಳ ಇರಬೇಕು ಎಂಬುದನ್ನು ಲೆಕ್ಕ ಹಾಕಿ ಆಟಗಾರರಿಗೆ ಮಣೆ ಹಾಕಿದೆ. ಇನ್ನು ಐಪಿಎಲ್‌ ಮೆಗಾ ಹರಾಜಿನಲ್ಲಿ ನಾವು ಮಾಡಿಕೊಂಡ ರಣ ತಂತ್ರದಂತೆ ಆಟಗಾರರ ಖರೀದಿ ನಡೆಸಿದ್ದೇವೆ ಎಂದು ಸಿಒಒ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕರಾಗಿ ದಶಕಗಳ ಕಾಲ ತಂಡವನ್ನು ಮುನ್ನಡೆಸಿದ ಕೀರ್ತಿಯನ್ನು ಹೊಂದಿದ್ದಾರೆ. ಇವರು ಈಗಾಗಲೇ ಆರ್‌ಸಿಬಿ ಪರ 143 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 48.56 ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ. ಇವರ ನಾಯಕತ್ವದಲ್ಲಿ ಆರ್‌ಸಿಬಿ ಒಮ್ಮೆ ಫೈನಲ್‌ಗೆ ಸಹ ಅರ್ಹತೆ ಪಡೆದಿದೆ. ಇವರ ಮುಂದಾಳತ್ವದಲ್ಲಿ ಆರ್‌ಸಿಬಿ 2016ರಲ್ಲಿ ಫೈನಲ್‌ ಪ್ರವೇಶವನ್ನು ಪಡೆದಿತ್ತು. ಈಗ ಮತ್ತೊಮ್ಮೆ ಫೈನಲ್‌ ಪ್ರವೇಶಿಸಿ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿದೆ.

Story first published: Tuesday, February 4, 2025, 14:05 [IST]
Other articles published on Feb 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+