IPL 2025 RCB: ಆರ್‌ಸಿಬಿ ಪರ ನಾಲ್ಕು ಆಟಗಾರರು ಅಬ್ಬರಿಸಿದರೆ, ಈ ಸಲ ಕಪ್ ನಮ್ದೆ
ಐಪಿಎಲ್ 2025ಕ್ಕೆ ಭರದ ಸಿದ್ಧತೆಗಳು ನಡೆದಿವೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ ಅಗಿದೆ. 17 ವರ್ಷಗಳಿಂದ ಆಗ ಸಾಧನೆಯನ್ನು 18ರ ಆವೃತ್ತಿಯಲ್ಲಿ ಮಾಡುವ ಕನಸುನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾಣುತ್ತಿದೆ. ಆರ್‌ಸಿಬಿ ಈ ಬಾರಿ ಟ್ರೋಫಿಗೆ ಮುತ್ತಿಡುವ ಆಸೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹೀಗಾಗಿ ಅಭಿಮಾನಿಗಳಲ್ಲಿ ನವ ಉತ್ಸಾಹ ತುಂಬಿದೆ. ಆರ್‌ಸಿಬಿ ಪ್ರಶಸ್ತಿ ಕನಸಿನ ಬರವನ್ನು ನೀಗಿಸಲು ನಾಲ್ಕು ಆಟಗಾರರು ಸನ್ನದ್ಧರಾಗಿದ್ದಾರೆ.
ಸತತ 17 ಆವೃತ್ತಿಗಳಲ್ಲಿ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಪಡೆದಿದ್ದೇ ದೊಡ್ಡ ಸಾಧನೆ. ಇದನ್ನು ಬಿಟ್ಟರೆ ಒಮ್ಮೆಯೂ ಆರ್‌ಸಿಬಿ ಪ್ರಶಸ್ತಿಯನ್ನು ಎತ್ತಿಲ್ಲ. ಈಗ ರೆಡ್ ಆರ್ಮಿಯ ಈ ಕನಸಿಗೆ ಪುಷ್ಠಿ ನೀಡಬಲ್ಲ ಪ್ಲೇಯರ್ಸ್ ತಂಡವನ್ನು ಸೇರಿದ್ದು ಉತ್ಸಾಹ ಇಮ್ಮಡಿಯಾಗಿದೆ. ಹಾಗಿದ್ದರೆ ಆ ಪ್ಲೇಯರ್‌ಗಳು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಜಾಕಬ್ ಬೇತೆಲ್
ಆರ್‌ಸಿಬಿ ಮೆಗಾ ಹರಾಜಿನಲ್ಲಿ ಜಾಕಬ್ ಬೇತೆಲ್ ಮೇಲೆ ಹಣ ಹೂಡಿದಾಗ, ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇವರು ಆಡುತ್ತಿರುವ ಧಾಟಿಯನ್ನು ಕಂಡು ಫ್ಯಾನ್ಸ್ ನಿರಾಳರಾಗಿದ್ದಾರೆ. ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿ, ಆಫ್ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆಯನ್ನು ಇವರು ಹೊಂದಿದ್ದಾರೆ. ಅಲ್ಲದೆ ಇವರು ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಬ್ಯಾಟಿಂಗ್ ಗೇರ್ ಶಿಫ್ಟ್ ಮಾಡಬಲ್ಲ ಪ್ಲೇಯರ್. 21 ವರ್ಷದ ಯುವ ಆಟಗಾರ ಭವಿಷ್ಯದ ದೃಷ್ಟಿಯಿಂದ ದೊಡ್ಡ ಆಸ್ತಿ ಆಗಬಹುದು.
ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಸ್ಟಾರ್ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡ ಸೇರಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸುವಲ್ಲಿ ಹೆಸರುವಾಸಿ. ಇವರು ತಮ್ಮ ಬೌಲಿಂಗ್‌ನಲ್ಲಿ ಹಲವು ವೇರಿಯೇಷನ್ ಹೊಂದಿದ್ದು, ಎದುರಾಳಿಗಳಿಗೆ ಕಾಡಬಲ್ಲರು. ಇನ್ನು ಚಿನ್ನಸ್ವಾಮಿ ಅಂಗಳದಲ್ಲಿ ಇವರ ಪ್ರಭಾವಿ ಆಗಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲ ಬೇಕಾದಲ್ಲಿ ಇವರ ಪ್ರದರ್ಶನದಲ್ಲಿ ಸ್ಥಿರತೆ ಇಂಪಾರ್ಟೆಂಟ್.

ಫಿಲ್ ಸಾಲ್ಟ್
ಎದುರಾಳಿ ಬೌಲರ್‌ಗಳ ರಣ ತಂತ್ರವನ್ನು ಆರಂಭದಲ್ಲೇ ನುಚ್ಚು ನೂರು ಮಾಡಿ ಸ್ಕೋರ್ ಬೋರ್ಡ್ ವೇಗಕ್ಕೆ ಶ್ರಮಿಸುವ ಆಟಗಾರ ಫಿಲ್ ಸಾಲ್ಟ್. ಟಾಪ್ ಆರ್ಡರ್‌ನಲ್ಲಿ ಆಡುವ ಈ ಪ್ಲೇಯರ್ ನಿಶ್ಚಿತವಾಗಿ ಆರಂಭದಲ್ಲಿ ಅಬ್ಬರಿಸಬಲ್ಲರು. ಇಡೀ ಟೂರ್ನಿಯುದ್ದಕ್ಕೂ ಧಮಾಕೆದಾರ್ ಪ್ರದರ್ಶನದ ಬಲದಿಂದ ತಂಡಕ್ಕೆ ನೆರವಾದಲ್ಲಿ ತಂಡದ ಕನಸು ಈಡೇರುತ್ತದೆ.
ಜೋಶ್ ಹ್ಯಾಜಲ್‌ವುಡ್
ಆರ್‌ಸಿಬಿ ತಂಡದ ಈಗಾಗಲೇ ಆಡಿರುವ ವೇಗಿ ಜೋಶ್ ಹ್ಯಾಜಲ್‌ವುಡ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಇವರು ತಮ್ಮ ಲೈನ್ ಹಾಗೂ ಲೆಂಥ್‌ನಿಂದಲೇ ಹೆಸರುವಾಸಿ. ಇವರು ಐಪಿಎಲ್‌ನಲ್ಲಿ ರೆಡ್ ಜೆರ್ಸಿಯಲ್ಲಿ ಕರಾರುವಕ್ ದಾಳಿಯಿಂದ ಮಿಂಚಬೇಕಿದೆ. ಅಲ್ಲದೆ ಇವರು ತಮ್ಮ ಬೌಲಿಂಗ್‌ನಿಂದ ಇಂಪ್ಯಾಕ್ಟ್ ಮಾಡಿದಾಗ ಮಾತ್ರ ಚೊಚ್ಚಲ ಪ್ರಶಸ್ತಿಯ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications