For Quick Alerts
ALLOW NOTIFICATIONS  
For Daily Alerts
 

RCB's Brand Value: ಆರ್‌ಸಿಬಿ ಮೌಲ್ಯ ಹೆಚ್ಚಳ: ಚೆನ್ನೈ ಹಿಂದಿಕ್ಕಿದ ಬೆಂಗಳೂರು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಹಿಂದೆ ಮಾಡದ ಸಾಧನೆಯನ್ನು ಮಾಡಿ ಇತಿಹಾಸ ನಿರ್ಮಿಸಿದೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಆದರೆ ಆರ್‌ಸಿಬಿ ಗೆದ್ದ ಬಳಿಕ ನಡೆದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ 11 ಜನರು ಸಾವನ್ನಪ್ಪಿದ್ದರು. ಹೀಗಾಗಿ ವಿವಾದ ಹುಟ್ಟಿಕೊಂಡಿತ್ತು. ಆದರೆ ಈ ದುರ್ಘಟನೆಯ ಬಳಿಕ ಆರ್‌ಸಿಬಿ ಮೇಲೆ ಟೀಕೆಗಳ ಸುರಿಮಳೆ ಕೇಳಿ ಬಂದಿತ್ತು. ಆರ್‌ಸಿಬಿ ತಂಡ ಸಾಮಾಜಿಕ ತಾಣದಿಂದ ಮೂರು ತಿಂಗಳವರೆಗೂ ದೂರವಿತ್ತು. ಈಗ ಆರ್‌ಸಿಬಿ ಸಾಮಾಜಿಕ ತಾಣಕ್ಕೆ ಮರಳುತ್ತಿದ್ದಂತೆ ಗುಡ್‌ ನ್ಯೂಸ್‌ ಒಂದು ಸಿಕ್ಕಿದೆ.

ಆರ್‌ಸಿಬಿ ಮೊದಲಿನಿಂದಲೂ ವಿಶ್ವದ ಅತ್ಯಂತ ಜನಪ್ರೀಯ ಕ್ರಿಕೆಟ್‌ ತಂಡವಾಗಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಆರ್‌ಸಿಬಿ ಕಪ್‌ ಗೆಲ್ಲದ ನೋವು ಮಾತ್ರ ಬಹು ದಿನ ಕಾಡಿತ್ತು. ಈ ಬಾರಿ ಪ್ರಶಸ್ತಿ ಎತ್ತುವ ಬರ ಸಹ ಕೊನೆಯಾಗಿದೆ. ಆರ್‌ಸಿಬಿ ಸಾಮಾಜಿಕ ತಾಣದಲ್ಲೂ ಭಾರೀ ಸದ್ದು ಮಾಡಿತ್ತು. ಅಲ್ಲದೆ ಅತಿ ಹೆಚ್ಚು ಹಿಂಬಾಲಕರನ್ನು ಹೊಂದು ಮೂಲಕ ದಾಖಲೆಯನ್ನು ನಿರ್ಮಿಸಿತ್ತು. ಈಗ ಬ್ರ್ಯಾಂಡ್‌ ವ್ಯಾಲ್ಯೂ ವಿಚಾರದಲ್ಲೂ ಆರ್‌ಸಿಬಿ ಹೊಸ ದಾಖಲೆ ನಿರ್ಮಿಸಿದೆ. ಬ್ರ್ಯಾಂಡ್‌ ವ್ಯಾಲ್ಯೂ ಲೆಕ್ಕಾಚಾರದಲ್ಲಿ ಆರ್‌ಸಿಬಿ ಇತರ ಫ್ರಾಂಚೈಸಿಗಳನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಜಿಗಿದಿದೆ.

RCB s Brand Value Soars to No 1 After Historic IPL Victory Beating CSK

ವರದಿಗಳ ಪ್ರಕಾರ, ಆರ್‌ಸಿಬಿಯ ಮೌಲ್ಯವು ಈಗ 2370 ಕೋಟಿಗಳಿಗೆ ತಲುಪಿದೆ. ಇಷ್ಟು ದಿನ ಬ್ರ್ಯಾಂಡ್‌ ವ್ಯಾಲ್ಯೂ ಲೆಕ್ಕಾಚಾರದಲ್ಲಿ ಸಿಎಸ್‌ಕೆ ಅಗ್ರ ಸ್ಥಾನದಲ್ಲಿ ಇತ್ತು. ಈಗ ಈ ಸ್ಥಾನವನ್ನು ಆರ್‌ಸಿಬಿ ತನ್ನದಾಗಿಸಿಕೊಂಡಿದೆ. ವಿವಾದಗಳಿಗೆ ಆರ್‌ಸಿಬಿ ಆಹಾರವಾದರೂ ಸಹ ಬೆಂಗಳೂರು ತಂಡದ ಬ್ರಾಂಡ್ ಮೌಲ್ಯ ನಿರಂತರವಾಗಿ ಹೆಚ್ಚುತ್ತಿದೆ. ಇದರ ಪರಿಣಾಮ ಆರ್‌ಸಿಬಿ ಬ್ರ್ಯಾಂಡ್‌ ವ್ಯಾಲ್ಯೂ ಲೆಕ್ಕಾಚಾರದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಕುಸಿದಿದೆ. ಆರ್‌ಸಿಬಿ ತಂಡದ ಬ್ರ್ಯಾಂಡ್‌ ವ್ಯಾಲ್ಯೂ 269 ಮಿಲಿಯನ್ ಡಾಲರ್‌ಗಳಿಗೆ ಹೆಚ್ಚಾಗಿದೆ.

ಪಂಜಾಬ್‌ ಮೌಲ್ಯ 39.6 ರಷ್ಟು ಏರಿಕೆ

ಮುಂಬೈ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಸಹ ಶೇಕಡಾ 18.6 ರಷ್ಟು ಹೆಚ್ಚಾಗಿದ್ದು, 242 ಮಿಲಿಯನ್ ಡಾಲರ್‌ಗೆ ಏರಿಕೆ ಆಗಿದೆ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಕಳೆದ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾದರೂ, 235 ಮಿಲಿಯನ್ ಡಾಲರ್‌ಗಳ ಬ್ರ್ಯಾಂಡ್‌ ವ್ಯಾಲ್ಯೂ ಹೊಂದಿದೆ. ಇನ್ನು ಸುಮಾರು 10 ವರ್ಷಗಳ ಬಳಿಕ ಐಪಿಎಲ್‌ ಫೈನಲ್‌ ತಲುಪಿದ್ದ ಪಂಜಾಬ್‌ ಕಿಂಗ್ಸ್‌ ತಂಡದ ಬ್ರ್ಯಾಂಡ್‌ ವ್ಯಾಲ್ಯೂ 39.6 ರಷ್ಟು ಏರಿಕೆಯಾಗಿದ್ದು, ಸದ್ಯ ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ 141 ಮಿಲಿಯನ್ ಡಾಲರ್‌ಗೆ ಏರಿದೆ.

RCB s Brand Value Soars to No 1 After Historic IPL Victory Beating CSK

ಆರ್‌ಸಿಬಿ ತಂಡ ಅಭಿಮಾನಿಗಳಿಗೆ ಹತ್ತಿರವಾಗಲು ಆರ್‌ಸಿಬಿ ಕೇರ್ಸ್‌ ಎಂಬ ಪೇಜ್‌ ಓಪನ್ ಮಾಡಿದೆ. ಈ ಮೂಲಕ ಮೂರು ತಿಂಗಳ ಬಳಿಕ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿದೆ. ಅಲ್ಲದೆ ಕಾಲ್ತುಳಿತದಲ್ಲಿ ಮೃತ ಪಟ್ಟ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.

Story first published: Sunday, August 31, 2025, 10:15 [IST]
Other articles published on Aug 31, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+