Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಆದಾಯಕ್ಕೆ ಭಾರೀ ಹೊಡೆತ: ವಿರಾಟ್‌ಗೂ ತಟ್ಟಲಿದೆ ಬಿಸಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ 17 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ. ಆರ್‌ಸಿಬಿ ಚಾಂಪಿಯನ್‌ ಆದ ಬಳಿಕ ನಡೆದ ಘಟನೆ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆರ್‌ಸಿಬಿ ಚಾಂಪಿಯನ್ ಪಟ್ಟದ ಸಂಭ್ರಮಾಚರಣೆ ಮಾಡಲು ಚಿನ್ನಸ್ವಾಮಿ ಮೈದಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದಾರೆ. ಇದರಿಂದ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಮುಜುಗರವಾಗಿದೆ. ಈ ಘಟನೆ ನಡೆದ ತಿಂಗಳುಗಳ ಬಳಿಕ ಆರ್‌ಸಿಬಿ ಪ್ರಾಯೋಜಕರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಉದ್ಭವಿಸಿದೆ.

ಆರ್‌ಸಿಬಿ ಕಾಲ್ತುಳಿತ ಪ್ರಕರಣದ ಬಳಿಕ ಮುಜಗರಕ್ಕೆ ಈಡಾಗಿದೆ. ಇದಲ್ಲದೆ ತಂಡವನ್ನು ಮಾರಾಟ ಮಾಡಲಗುತ್ತದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಈ ಸುದ್ದಿ ಸುಳ್ಳು ಎಂದು ಫ್ರಾಂಚೈಸಿ ಸ್ಪಷ್ಟ ಪಡಿಸಿತು. ಈಗ ಬರುತ್ತಿರುವ ಸುದ್ದಿಯ ಪ್ರಕಾರ ಆರ್‌ಸಿಬಿ ಪ್ರಾಯೋಜಕರು, ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇವರು ಪ್ರಾಯೋಜಕತ್ವದಿಂದ ಹಿಂದೆ ಸರಿಯುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.

RCB s Champion Joy Dims as Sponsors Exit Post-Stampede Qatar Airways Deal Ends

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಕಂಪನಿಯಿಂದ ಡಿಯಾಜಿಯೊ ಕಂಪನಿಗೆ ಹಸ್ತಾಂತರಿಸಲಾಯಿತು. ಆ ಬಳಿಕ ಕತಾರ್ ಏರ್‌ವೈಸ್‌ (Qatar Airways) ಕಂಪನಿಯೊಂದಿಗೆ ಮೂರು ವರ್ಷದ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಅಡಿಯಲ್ಲಿ ಕತಾರ್ ಏರ್‌ವೈಸ್‌ 75 ಕೋಟಿ ರೂ. ಆರ್‌ಸಿಬಿ ನೀಡುತ್ತಿತ್ತು. ಈ ಒಪ್ಪಂದ 2025ರಲ್ಲಿ ಕೊನೆಗೊಂಡಿದೆ.

ಭಾರೀ ಪ್ರಚಾರ

ವಿಶ್ವದಲ್ಲೇ ಖ್ಯಾತಿ ಪಡೆದಿದ್ದ ಏರ್‌ವೈಸ್‌ ಸಂಸ್ಥೆ ಪ್ರತಿಷ್ಠಿತ ಐಪಿಎಲ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಎರಡೂ ಕಂಪನಿಗಳು ಬ್ರ್ಯಾಂಡ್‌ ವ್ಯಾಲ್ಯೂ ಹಾಗೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿವೆ. ವಿಶ್ವದಲ್ಲೇಡೆ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಕ್ರಿಕೆಟ್ ತಂಡ ಎಂಬ ಖ್ಯಾತಿ ಆರ್‌ಸಿಬಿ ತಂಡದ್ದಾಗಿದೆ. ಆರ್‌ಸಿಬಿ ಜೆರ್ಸಿ ಮೇಲೆ ಕತಾರ್‌ ಏರ್‌ವೈಸ್‌ ಲೋಗೋ ಕಂಪನಿಗೆ ದೊಡ್ಡ ಪ್ರಚಾರವನ್ನು ನೀಡಿದೆ. ಉಭಯ ಕಂಪನಿಗಳ ನಡುವಣ ಒಪ್ಪಂದ ಈಗ ಕೊನೆಯಾಗಿದ್ದು, ಮುಂದಿನ ನಡೆ ಏನು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

ಬ್ರ್ಯಾಂಡ್‌ಗಳಿಗೆ ಆರ್‌ಸಿಬಿ ಅಚ್ಚು ಮೆಚ್ಚು ಏಕೆ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು, ಇದೇ ದೊಡ್ಡ ಬ್ರ್ಯಾಂಡ್ ರೀತಿ ಆಗಿದೆ. ಈ ತಂಡದ ಖ್ಯಾತಿ ಎಷ್ಟು ಇದೆ ಎಂಬುದಕ್ಕೆ ಆರ್‌ಸಿಬಿ ಕಪ್‌ ಗೆದ್ದ ಮೇಲೆ ನಡೆದ ಸಂಭ್ರಮಾಚರಣೆ ಸಾಕ್ಷಿ. ಇನ್ನು ಆರ್‌ಸಿಬಿ ತಂಡದಲ್ಲಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ರ್ಯಾಂಡ್‌ಗಳನ್ನು ಸೆಳೆಯುವ ಮುಖ ಹೊಂದಿದ್ದಾರೆ. ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ, ಗರಿಷ್ಠವಾಗಿದೆ. ವಿರಾಟ್‌ ಕೊಹ್ಲಿ ಈ ತಂಡದಲ್ಲಿ ಇರುವುದರಿಂದ ಬ್ರ್ಯಾಂಡ್‌ಗಳು ಸಹ ಹುಡುಕಿಕೊಂಡು ಬರಬಹುದು. ಅಲ್ಲದೆ ಸಾಮಜಿಕ ತಾಣದಲ್ಲಿ ಈ ತಂಡ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.

Story first published: Wednesday, July 16, 2025, 12:57 [IST]
Other articles published on Jul 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+