ಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊದಲ ಪಂದ್ಯವಾಡಿದ ಕರ್ನಾಟಕದ ದೇವದತ್ ಪಡಿಕ್ಕಲ್ ಮಿಂಚಿನ ಆಟದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಮೊದಲ ಪಂದ್ಯದಲ್ಲೆ 50ಪ್ಲಸ್ ರನ್ ಸ್ಕೋರ್ ಮಾಡಿ, ಈ ಸಾಧನೆ ಮಾಡಿದ ಹಲವು ದಿಗ್ಗಜರ ಸಾಲಿಗೆ ಸೇರಿದ್ದಾರೆ.
2019ರ ದೇಶಿ ಸೀಸನ್ ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್, ವಿಜಯ್ ಹಜಾರೆ 50 ಓವರ್ ಗಳ ಟೂರ್ನಮೆಂಟ್, ರಣಜಿ, ಕೆಂಪು, ಬಿಳಿ ಎಲ್ಲ ಚೆಂಡುಗಳನ್ನು ಚೆಚ್ಚಿ ರನ್ ಹೊಳೆ ಹರಿಸಿದ್ದ ಪಡಿಕ್ಕಲ್ ಇಂದು ಐಪಿಎಲ್ 13ರ ಮೊದಲ ಪಂದ್ಯ ಹಾಗ್ ತಮ್ಮ ಐಪಿಎಲ್ ವೃತ್ತಿ ಬದುಕಿನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಓಪನರ್ ಆಗಿ ಕಣಕ್ಕಿಳಿದರು.
20 ವರ್ಷ ವಯಸ್ಸಿನ ಪಡಿಕ್ಕಲ್ ಅವರು 42 ಎಸೆತಗಳಲ್ಲಿ 56ರನ್ (8 ಬೌಂಡರಿ) ಚೆಚ್ಚಿದರು. ಈ ಮೂಲಕ ಕೇದಾರ್ ಜಾಧವ್ ನಂತರ ಈ ಪಟ್ಟಿ ಸೇರಿದ ಭಾರತೀಯ ಆಟಗಾರ ಎನಿಸಿಕೊಂಡರು. ಎಡಗೈ ಬ್ಯಾಟ್ಸ್ ಮನ್ ಪಡಿಕ್ಕಲ್ ಅವರು ಐಪಿಎಲ್ ಗೂ ಮುನ್ನ ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಪಂದ್ಯ ಟೂರ್ನಮೆಂಟ್ ಗಳ ಮೊದಲ ಪಂದ್ಯದಲ್ಲೂ 50 ಪ್ಲಸ್ ರನ್ ಸ್ಖೋರ್ ಮಾಡಿದ ದಾಖಲೆ ಹೊಂದಿದ್ದಾರೆ.
ಪಡಿಕ್ಕಲ್ ಅಲ್ಲದೆ 8 ಮಂದಿ ಭಾರತೀಯರು ಮೊದಲ ಪಂದ್ಯದಲ್ಲಿ 50 ಪ್ಲಸ್ ಸ್ಕೋರ್ ಮಾಡಿದ್ದಾರೆ.
2008ರಿಂದ 2020ರ ತನಕ ಮೆಕಲಮ್ ನಿಂದ ಪಡಿಕ್ಕಲ್ ತನಕ ಪಟ್ಟಿ ಹೀಗಿದೆ:
2008:
ಬ್ರೆಂಡನ್ ಮೆಕಲಮ್
ಮೈಕ್ ಹಸ್ಸಿ
ಜೇಮ್ಸ್ ಹೋಪ್ಸ್
ಕುಮಾರ ಸಂಗಕ್ಕಾರ
ಶಿಖರ್ ಧವನ್
ಗ್ರಹಾಂ ಸ್ಮಿತ್
ಆಸ್ನೋಡ್ಕರ್
ಶಾನ್ ಮಾರ್ಷ್
ವಿದ್ಯುತ್ ಶಿವರಾಮಕೃಷ್ಣನ್
ಶ್ರೀವತ್ಸ್ ಗೋಸ್ವಾಮಿ
2009:
ಡೇವಿಡ್ ವಾರ್ನರ್
2010;
ಓವಿಸ್ ಶಾ
ಅಂಬಟಿ ರಾಯುಡು
ಕೇದಾರ್ ಜಾಧವ್
ಕಾಲಿಂಗ್ ವುಡ್
2012:
ರಿಚರ್ಡ್ ಲೆವಿ
2016:
ಸ್ಯಾಮ್ ಬಿಲ್ಲಿಂಗ್ಸ್
2020
ದೇವದತ್ ಪಡಿಕ್ಕಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications