IPL 2025 RCB: ಬಿಗ್ ಬ್ಯಾಷ್ ಲೀಗ್‌ನಲ್ಲಿ ಯುವ ಬ್ಯಾಟರ್ ಆರ್ಭಟ: 8 ಬೌಂಡರಿ, 4 ಸಿಕ್ಸರ್ ಸುರಿಮಳೆ
ಸದ್ಯ ವಿಶ್ವದಲ್ಲಿ ಕ್ರಿಕೆಟ್ ಹವಾ ದಿನವೂ ಹೆಚ್ಚಾಗುತ್ತಿದೆ. ಸದ್ಯ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್‌ಗಳು ನಡೆಯುತ್ತಿದ್ದರೆ, ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಿದೆ. ಈ ವೇಳೆ ಅಭಿಮಾನಿಗಳ ಕಣ್ಣು ತಮ್ಮ ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿದೆ. ಭಾರತದಲ್ಲೂ ಮಾರ್ಚ್‌ನಲ್ಲಿ ಐಪಿಎಲ್ ಆರಂಭವಾಗಲಿದೆ. ಈ ರಂಗು ಎರಡು ತಿಂಗಳ ಕಾಲ ಇರಲಿದೆ. ಅಭಿಮಾನಿಗಳು ಈಗಾಗಲೇ ತಮ್ಮ ತಮ್ಮ ತಂಡದ ಸ್ಟಾರ್ ಆಟಗಾರರ ಆಟದ ಮೇಲೆ ಒಂದು ಕಣ್ಣು ನೆಟ್ಟಿದ್ದಾರೆ.
ಐಪಿಎಲ್‌ನಲ್ಲಿ ಹಲವು ದೇಶದ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಯುವ ಆಟಗಾರರ ಮೇಲೆ ಅಭಿಮಾನಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಆರ್‍ಸಿಬಿ ತಂಡದ ಅಭಿಮಾನಿಗಳು ಸಹ ವಿಶ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಹಾಗೂ ನಾನಾ ಲೀಗ್‌ಗಳ ಮೇಲೆ ಒಂದು ಕಣ್ಣು ನೆಟ್ಟಿರುತ್ತಾರೆ. ಹಾಗೆಯೇ ಒಂದು ಕಣ್ಣನ್ನು ಬಿಗ್ ಬ್ಯಾಷ್ ಲೀಗ್ ಮೇಲೂ ನೆಟ್ಟಿರುತ್ತಾರೆ. ಈ ವೇಳೆ ಆರ್‍ಸಿಬಿ ತಂಡದ ಆಟಗಾರರು ಸಹ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಲೀಗ್‌ನಲ್ಲಿ ಆರ್‍ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿ ನೀಡಿದ ಆಟಗಾರನೊಬ್ಬ ಅಬ್ಬರದ ಆಟವಾಡುತ್ತಿದ್ದಾರೆ.

ಯುವ ಆಟಗಾರ ಯಾರು?
ಮೆಲ್ಬೋರ್ನ್ ರೆನೆಗೇಡ್ಸ್ ಪರ ಮಧ್ಯಮ ಕ್ರಮಂಕಾದಲ್ಲಿ ಆಡುವ ಅವಕಾಶವನ್ನು ಪಡೆದ ಇಂಗ್ಲೆಂಡ್ ತಂಡದ ಜಾಕಬ್ ಬೇತೆಲ್ ತಂಡಕ್ಕೆ ಆಧಾರವಾದರು. ಇವರು 23 ರನ್‌ಗಳಿಗೆ ಮೂರು ವಿಕೆಟ್ ಬಿದ್ದಿತ್ತು. ಆಗ ತಂಡಕ್ಕೆ ಜಾಕಬ್ ಬೇತೆಲ್ ಹಾಗೂ ಟಿಮ್ ಸೀಫರ್ಟ್ ಜೋಡಿ ಆಧಾರವಾಯಿತು. ಟಿಮ್ ಸೀಫರ್ಟ್ 24 ರನ್ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ವಿಲ್ ಸದರ್ಲ್ಯಾಂಡ್ 15 ರನ್ ಬಾರಿಸಿದರು.
ಮೆಲ್ಬೋರ್ನ್ ಪರ 87 ರನ್ ಸಿಡಿಸಿದ ಬ್ಯಾಟರ್
ಜಾಕಬ್ ಬೇತೆಲ್ ಬಿಗ್ ಬ್ಯಾಷ್ ಲೀಗ್ 34ನೇ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಅಬ್ಬರಿಸಿತು. ಈ ವೇಳೆ 50 ಎಸೆತಗಳಲ್ಲಿ ಎದುರಿಸಿದ ಬೇತೆಲ್ 87 ರನ್ ಸಿಡಿಸಿದರು. ಈ ಇನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್ ಒಳಗೊಂಡಿವೆ. ಇವರ ಅಮೋಘ ಆಟದ ಫಲವಾಗಿಯೇ ಮೆಲ್ಬೋರ್ನ್ ರೆನೆಗೇಡ್ಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ 19.4 ಓವರ್‍ಗಳಲ್ಲಿ 6 ವಿಕೆಟ್‌ಗೆ 155 ರನ್ ಸೇರಿಸಿ ಜಯ ಸಾಧಿಸಿತು.
ಜಾಕಬ್ ಬೇತೆಲ್ ಬೌಲಿಂಗ್‌ನಲ್ಲೂ ಅಬ್ಬರಿಸಿದರು. ಇವರು 3 ಓವರ್‍ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು.
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಜಾಕಬ್ ಬೇತೆಲ್ ಅವರಿಗೆ ಆರ್‍ಸಿಬಿ ಗಾಳ ಹಾಕಿತು. ಇವರ ಮೂಲ ಬೆಲೆ ಹರಾಜಿನ ಅಂಗಳದಲ್ಲಿ 1.25 ಕೋಟಿ ಆಗಿತ್ತು. ಆರ್‍ಸಿಬಿ ಈ ಯುವ ಆಟಗಾರನಿಗೆ 2.60 ಕೋಟಿ ನೀಡಿ ಖರೀದಿಸಿತು. 21 ವರ್ಷದ ಯುವ ಆಟಗಾರ ಈಗಾಗಲೇ ಇಂಗ್ಲೆಂಡ್ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ಇವರು ಇಂಗ್ಲೆಂಡ್ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಆರ್‍ಸಿಬಿ ಪರ ಅಬ್ಬರಿಸುಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications