IND vs ENG T20: RCB ಸ್ಟಾರ್ಸ್ ಠುಸ್: ರನ್ ಕಲೆ ಹಾಕಲು ಪರಾದಟ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳ ಸಾಕ್ಷಿಯಾಯಿತು. ಈ ವೇಳೆ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇಂಗ್ಲೆಂಡ್ ಸ್ಟಾರ್ ಬ್ಯಾಟರ್‌ಗಳು ಭಾರತದ ಬೌಲಿಂಗ್ ವಿಭಾಗದ ಸವಾಲು ಎದುರಿಸುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಆರ್‌ಸಿಬಿ ಐಪಿಎಲ್ ಹರಾಜಿನಲ್ಲಿ ಕೊಂಡ ಆಟಗಾರರ ಮೇಲೆ ಇತ್ತು. ಈ ವೇಳೆ ಆರ್‌ಸಿಬಿ ಮೂವರು ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರ್‌ಸಿಬಿ ಖರೀದಿಸಿದ ಇಂಗ್ಲೆಂಡ್ ಆಟಗಾರರು ವರ್ಷದ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫಿಲ್ ಸಾಲ್ಟ್ ಅವರಿಗೆ ಮಣೆ ಹಾಕಿತ್ತು. ಇವರ ಮೂಲ ಬೆಲೆಗಿಂತಲೂ ಸುಮಾರು ಐದುವರೆ ಪಟ್ಟು ಹಣವನ್ನು ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಫಿಲ್ ಸಾಲ್ಟ್ ಹೇಗೆ ಆಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಮೊದಲ ಪಂದ್ಯದಲ್ಲೇ ನಿರಾಸೆ ಅನುಭಸಿದರು.

ಇವರು ತಾವು ಎದುರಿಸಿದ ಮೂರನೇ ಎಸೆತದಲ್ಲಿ ಇಲ್ಲದ ಶಾಟ್ ಹೊಡೆಯಲು ಮುಂದಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಆರ್‌ಸಿಬಿ ಮೊದಲ ಆಸೆಗೆ ಪೆಟ್ಟು ಬಿದ್ದಿತು.
ಸ್ಟಾರ್ ಆಲ್‌ರೌಂಡರ್ ಠುಸ್
ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಮೈದಾನಕ್ಕೆ ಇಳಿದರು. ಆದರೆ ಇವರು ತಂಡದ ಭರವಸೆಯನ್ನು ಹುಸಿಯಾಗಿಸಿದರು. ಮಿಸ್ಟ್ರಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರ ಸ್ಪಿನ್ ಎಸೆತದಲ್ಲಿ ಡ್ರೈವ್ ಮಾಡಲು ಮುಂದಾದರು. ಆದರೆ ಚೆಂಡು ಇವರ ಬ್ಯಾಟ್‌ಗೆ ಸಂಪರ್ಕ ಮಾಡದೇ ನೇರವಾಗಿ ಸ್ಟಂಪ್‌ಗೆ ಮುತ್ತಿಟ್ಟಿತು.
ನಿರೀಕ್ಷೆ ಹುಸಿಗೊಳಿಸಿದ ಯುವ ಬ್ಯಾಟರ್
ಇನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಆಡುವ ಅವಕಾಶವನ್ನು ಪಡೆದಿರುವ ಜಾಕಬ್ ಬೇತೆಲ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇವರು ಈಗಾಗಲೇ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರನ್ನು ಆರ್‌ಸಿಬಿ ಹರಾಜಿನಲ್ಲಿ ಖರೀದಿ ಮಾಡಿತ್ತು. ಇವರು ಭಾರತೀಯ ಅಭಿಮಾನಿಗಳ ಮುಂದೆ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರ್‌ಸಿಬಿ ಖರೀದಿಸಿದ ಯುವ ಬ್ಯಾಟರ್ ಈ ಪಂದ್ಯದಲ್ಲಿ ಒಂದೇ ಒಂದು ಬೌಂಡರಿ ಸಹ ಬಾರಿಸಲಿಲ್ಲ.
ಭಾರತ ತಂಡದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಸೆದ ಶಾರ್ಟ್ ಪಿಚ್ ಎಸೆತದಲ್ಲಿ ದೊಡ್ಡ ಹಿಟ್ ಬಾರಿಸಲು ಜಾಕಬ್ ಬೇತೆಲ್ (7ರನ್) ಮುಂದಾದರು. ಇವರು ಮಿಡ್ ವಿಕೆಟ್‌ನತ್ತ ಚೆಂಡನ್ನು ಅಟ್ಟಿದರು. ಆದರೆ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಅರ್ಷದೀಪ್ ಸಿಂಗ್‌ಗೆ ಕ್ಯಾಚ್ ನೀಡಿದರು.
ಇಂಗ್ಲೆಂಡ್ ತಂಡದ ಪರ ನಾಯಕ ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ನಿರಾಸೆ ಅನುಭವಿಸಿದರು. ಬಟ್ಲರ್ ಏಕಾಂಗಿಯಾಗಿ 68 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications