ಇನ್ನೇನು ಕೆಲವೇ ತಿಂಗಳುಗಳಲ್ಲಿ ಐಪಿಎಲ್ 2025 ಆರಂಭವಾಗಲಿದೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಎಲ್ಲ ತಂಡಗಳು ಪ್ಲ್ಯಾನ್ ಮಾಡಿವೆ. ಇದರಲ್ಲಿ ಆರ್‍ಸಿಬಿ ತಂಡದ ಮೇಲೆ ಎಲ್ಲರ ನಿರೀಕ್ಷೆಗಳು ಹೆಚ್ಚಾಗಿವೆ. ಸತತ 17 ವರ್ಷಗಳಿಂದ ಕಪ್ ಬರವನ್ನು ಈ ಬಾರಿ ನೀಗಿಸಲು ಆರ್‍ಸಿಬಿ ಸಹ ಬಲಿಷ್ಠ ತಂಡವನ್ನು ಕಟ್ಟಿದೆ. ಆರ್‍ಸಿಬಿ ಆಟಗಾರರು ವಿದೇಶದಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ಅಬ್ಬರಿಸುತ್ತಿರುವುದು ನಿಜಕ್ಕೂ ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದ್ದು, ಕಪ್ ಗೆಲುವಿನ ಆಸೆಗೆ ಮತ್ತಷ್ಟು ಹೆಚ್ಚಾಗಿದೆ.
ಆಸ್ಟ್ರೇಲಿಯಾದಲ್ಲಿ ಸದ್ಯ ಬಿಗ್ ಬ್ಯಾಷ್ ಲಿಗ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ಹಲವು ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರು ಮೈದಾನದಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಆರ್‍ಸಿಬಿ ಅಭಿಮಾನಿಗಳ ಕಣ್ಣು ತಮ್ಮ ತಂಡದಲ್ಲಿರುವ ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿದೆ. ಶುಕ್ರವಾರ ನಡೆದ ಬಿಗ್ ಬ್ಯಾಷ್ ಲಿಗ್ ಟೂರ್ನಿಯಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡ, 6 ವಿಕೆಟ್‌ಗಳಿಂದ ಸಿಡ್ನಿ ಥಂಡರ್ಸ್ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ಆರ್‍ಸಿಬಿಗೆ ಈಗ ತಾನೆ ಎಂಟ್ರಿ ನೀಡಿರುವ ಟೀಮ್ ಡೇವಿಡ್.

ಟೀಮ್ ಡೇವಿಡ್ ಒಬ್ಬ ನುರಿತ ಬ್ಯಾಟರ್. ತಂಡ ಅವರಿಗೆ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ಲೇಯರ್. ಹೋಬಾರ್ಟ್ ಹರಿಕೇನ್ಸ್ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸಿದ ಟೀಮ್ ಡೇವಿಡ್ ಹೋಬರ್ಟ್‌ನಲ್ಲಿ ಪಂದ್ಯವನ್ನು ಆಡಿ, ಬೆಂಗಳೂರಿನಲ್ಲಿರುವ ಅಭಿಮಾನಿಗಳಿ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ತಮ್ಮ ನೈಜ ಶೈಲಿಯ ಬ್ಯಾಟಿಂಗ್ ಮಾಡಿದ ಟೀಮ್ ಡೇವಿಡ್ ಮನಮೋಹಕ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಇವರ ಅಮೋಘ ಆಟದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
ಸಿಡ್ನಿ ಥಂಡರ್ಸ್ ನೀಡಿದ್ದ 165 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಹೋಬಾರ್ಟ್ ಹರಿಕೇನ್ಸ್, ತಂಡ ಸಾಧಾರಣ ಆರಂಭ ಕಂಡಿತು. ತಂಡದ ಮೊತ್ತ 59 ಆಗಿದ್ದಾಗ ಕ್ರೀಸ್‌ಗೆ ಎಂಟ್ರಿ ನೀಡಿದವರೇ ಟೀಮ್ ಡೇವಿಡ್. ಮೂರನೇ ವಿಕೆಟ್ ರೂಪದಲ್ಲಿ ಚಾರ್ಲಿ ವಕಿಮ್ ವಿಕೆಟ್ ಬಿದ್ದಾಗ, ಡೇವಿಡ್ ರಾಯಲ್ ಎಂಟ್ರಿ ನೀಡುತ್ತಾರೆ. ತಮ್ಮ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದ ಟೀಮ್ ಡೇವಿಡ್ ಅಬ್ಬರಿಸಿದರು. ಇವರ ಬಿರುಸಿನ ಬ್ಯಾಟಿಂಗ್‌ಗೆ ಬ್ರೇಕ್ ಹಾಕಲು ಸಿಡ್ನಿ ತಂಡದ ಬೌಲರ್‍ಗಳು ವಿಫಲರಾದರು. ಟೀಮ್ ಡೇವಿಡ್ 38 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 68 ರನ್ ಬಾರಿಸಿ ಆರ್ಭಟಿಸಿದರು.

ಈಗಾಗಲೇ ಟೀಮ್ ಡೇವಿಡ್ ಐಪಿಎಲ್‌ನಲ್ಲಿ ತಮ್ಮ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿಆಡಿದ 13 ಪಂದ್ಯಗಳಲ್ಲಿ 241 ರನ್ ಸಿಡಿಸಿದರು. ಇದರಲ್ಲಿ 14 ಬೌಂಡರಿ,15 ಸಿಕ್ಸರ್ ಸೇರಿವೆ. ಒಟ್ಟಾರೆ ಐಪಿಎಲ್ ಆವೃತ್ತಿಯಲ್ಲಿ ಟೀಮ್ ಡೇವಿಡ್ 38 ಪಂದ್ಯಗಳನ್ನು ಆಡಿದ್ದು 28.65ರ ಸರಾಸರಿಯಲ್ಲಿ 659 ರನ್ ಕಲೆ ಹಾಕಿದ್ದಾರೆ. ಈ ಬಾರಿಯ ಐಪಿಎಲ್ ಹರಾಜು ಆಗುವ ಮುನ್ನವೇ ಆರ್‍ಸಿಬಿ ಇವರನ್ನು ಟ್ರೇಡ್ ಮಾಡಿ ತಂಡಕ್ಕೆ ಸೇರಿಸಿಕೊಂಡಿತ್ತು.