Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ಆಡಲು ಎನ್‌ಒಸಿ ನೀಡುವಂತೆ ಕೋರ್ಟ್‌ ಮೊರೆ ಹೋದ RCB ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 19ನೇ ಆವೃತ್ತಿ ಆರಂಭವಾಗಿದೆ. ಈಗಾಗಲೇ ಎಲ್ಲ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಹಲವು ಫ್ರಾಂಚೈಸಿಗಳಿಗೆ ಆಟಗಾರರ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿವೆ. ಇನ್ನು ಹಲವು ಆಟಗಾರರು ತಮ್ಮ ಐಪಿಎಲ್‌ ತಂಡಗಳನ್ನೇ ಸೇರಿಲ್ಲ. ಇದೇ ಸಾಲಿಗೆ ಶ್ರೀಲಂಕಾ ತಂಡದ ಸ್ಟಾರ್ ನುವಾನ್ ತುಷಾರ ಸಹ ಸೇರುತ್ತದೆ. ಇವರು ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್‌ ತಮ್ಮ ಆಟಗಾರರು ಐಪಿಎಲ್‌ನಲ್ಲಿ ಆಡಲು ಎನ್‌ಒಸಿ ಖಡ್ಡಾಯ ಪಡಿಸಿದೆ. ಆದರೆ ನುವಾನ್ ತುಷಾರ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಎನ್‌ಒಸಿ ನೀಡಿಲ್ಲ. ಹೀಗಾಗಿ ನುವಾನ್‌ ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದ್ದಾರೆ. ಇವರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

RCB

ಶ್ರೀಲಂಕಾದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವ ಮೊದಲು ಫಿಟ್ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಕಡ್ಡಾಯ ಎಂದು ಕ್ರಿಕೆಟ್‌ ಮಂಡಳಿ ತಿಳಿಸಿತ್ತು. ಅದರಂತೆ ನುವಾನ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾದ ಕಾರಣ ಅವರಿಗೆ ಇನ್ನು ಎನ್‌ಒಸಿ ನೀಡಲ್ಲ. ಶ್ರೀಲಂಕಾ ಕ್ರಿಕೆಟ್‌ ಮಂಡಳಿಯಿಂದ ಎನ್ಒಸಿ ನೀಡಲು ಕೋರಿ ಈಗ ಕೊಲಂಬೊ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿದ್ದಾರೆ. ಪಿಟಿಐ ವರದಿಗಳ ಪ್ರಕಾರ ಅರ್ಜಿಯ ವಿಚಾರಣೆ ಏಪ್ರಿಲ್ 9 ರಂದು ನಡೆಯಲಿದೆ.

ನುವಾನ್‌ ತುಷಾರ ಅವರ ಒಪ್ಪಂದ ಇದೇ 31 ರಂದು ಕೊನೆಯಾಗುತ್ತದೆ. ಅಲ್ಲದೆ ಅವರು ಈ ಒಪ್ಪಂದವನ್ನು ನವೀಕರಿಸಲು ಬಯಸುವುದಿಲ್ಲ ಎಂದು ಹೇಳುತ್ತಿದ್ದು, ತಮಗೆ ಎನ್‌ಒಸಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೆ ತಮ್ಮ ಒಪ್ಪಂದ ನವೀಕರಿಸದ ಕಾರಣ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಉದ್ದೇಶ ಇದೆ ಎಂದು ಸಹ ಶ್ರೀಲಂಕಾ ಮಂಡಳಿಗೆ ತಿಳಿಸಿದ್ದರು. ಶ್ರೀಲಂಕಾ ಕ್ರಿಕೆಟ್ ಯಾವುದೇ ಆಟಗಾರನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಆರ್‌ಸಿಬಿ ತಂಡದಲ್ಲಿರುವ ನುವಾನ್‌

ನುವಾನ್ ತುಷಾರ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇವರನ್ನು 18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ 1.60 ಕೋಟಿ ನೀಡಿ ಖರೀದಿಸಿತ್ತು. 31 ವರ್ಷದ ನುವಾನ್‌ ತುಷಾರ ಶ್ರೀಲಂಕಾ ಪರ ಟಿ20 ಪಂದ್ಯಗಳನ್ನು ಆಡಿದ ಆಟಗಾರ. ಇವರು ಒಟ್ಟಾರೆ 30 ಪಂದ್ಯಗಳನ್ನು ಲಂಕಾ ತಂಡದ ಪರ ಆಡಿ 36 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಐಪಿಎಲ್‌ ಆಡಿದ 8 ಪಂದ್ಯಗಳಲ್ಲಿ 9 ವಿಕೆಟ್‌ ಪಡೆದಿದ್ದಾರೆ.

ಆರ್‌ಸಿಬಿ ತಂಡದ ಮುಂದಿನ ಐದು ಪಂದ್ಯಗಳು

ಏಪ್ರಿಲ್ 5, ಚೆನ್ನೈ ಸೂಪರ್ ಕಿಂಗ್ಸ್‌, ಸಂಜೆ 7.30ಕ್ಕೆ ಬೆಂಗಳೂರು
ಏಪ್ರಿಲ್‌ 10, ರಾಜಸ್ಥಾನ್ ರಾಯಲ್ಸ್‌, ಸಂಜೆ 7.30ಕ್ಕೆ, ಗುವಾಹಟಿ
ಏಪ್ರಿಲ್ 12, ಮುಂಬೈ ಇಂಡಿಯನ್ಸ್‌, ಸಂಜೆ 7.30ಕ್ಕೆ, ಮುಂಬೈ
ಏಪ್ರಿಲ್‌ 15, ಲಕ್ನೋ ಸೂಪರ್ ಜೈಂಟ್ಸ್‌, ಸಂಜೆ 7.30ಕ್ಕೆ, ಬೆಂಗಳೂರು
ಏಪ್ರಿಲ್ 18, ಡೆಲ್ಲಿ ಕ್ಯಾಪಿಟಲ್ಸ್‌, ಮಧ್ಯಾಹ್ನ 3.30ಕ್ಕೆ ಬೆಂಗಳೂರು

Story first published: Thursday, April 2, 2026, 19:49 [IST]
Other articles published on Apr 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+