Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಸೋಲಿಗೆ ಕ್ಯಾಚ್‌ ಬಿಟ್ಟಿದ್ದು, ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದೇ ಕಾರಣನಾ? ಅಸಲಿ ರೀಸನ್‌ ಬೆರೇನೆ ಇದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಎರಡನೆ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರೂ, ಬೌಲಿಂಗ್‌ನಲ್ಲಿ ಬೌಲರ್‌ಗಳು ಕಮಾಲ್‌ ಮಾಡಲಿಲ್ಲ. ಈ ಪಂದ್ಯದಲ್ಲಿ ಹಲವು ತಿರುವಿನ ಅಂಶಗಳು ಕಾಣಸಿಗುತ್ತಿವೆ. ಆದರೆ ಈ ಪಂದ್ಯದ ಗತಿಯನ್ನು ಬದಲಿಸಿದ ಅಂಶ ಯವಾದು ಎಂಬ ಬಗ್ಗೆ ಚರ್ಚೆಗಳು ನಡೆದಿರುತ್ತವೆ. ಆದರೆ ಆರ್‌ಸಿಬಿ ಮಾಡಿದ ಆ ಒಂದು ತಪ್ಪನ್ನು ಮಾಡಿ ಕೈ ಸುಟ್ಟುಕೊಂಡಿತು. ಹಾಗಿದ್ದರೆ ಆರ್‌ಸಿಬಿ ಮಾಡಿದ ಆ ಒಂದು ತಪ್ಪು ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಆರ್‌ಸಿಬಿ ತಂಡ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಮಿಡ್ಲ್‌ ಓವರ್‌ಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿ ಆರ್‌ಸಿಬಿ ಬಿಗ್ ಸ್ಕೋರ್‌ ಕಲೆ ಹಾಕುವಲ್ಲಿ ವಿಫಲವಾಯಿತು. ಬೆಂಗಳೂರು ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 163 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಆಘಾತ ಅನುಭವಿಸಿತು. ಆದರೂ ಕೆಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ಇನ್ನು 13 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‌ ಕಳೆದುಕೊಂಡು ಗುರಿಯನ್ನು ಮುಟ್ಟಿತು. ಈ ಮೂಲಕ ಟೂರ್ನಿಯಲ್ಲಿ ಡೆಲ್ಲಿ ತಂಡ ಅಜೇಯ ಓಟವನ್ನು ಮುಂದುವರೆಸಿದೆ.

RCB s One Costly Mistake That Shifted the Match Momentum Against Delhi Capitals

ರಾಹುಲ್‌ ಕ್ಯಾಚ್‌ ಬಿಟ್ಟಿದ್ದು ಗತಿ ಬದಲಿಸಿತಾ?

ಆರ್‌ಸಿಬಿ ನಿಜಕ್ಕೂ ಪವರ್‌ಪ್ಲೇನಲ್ಲಿ ಪವರ್‌ಫುಲ್ ಬೌಲಿಂಗ್ ಪ್ರದರ್ಶನ ನೀಡಿ ಮೂರು ವಿಕೆಟ್ ಕಬಳಿಸಿ ಪ್ರವಾಸಿ ತಂಡಕ್ಕೆ ಪೆಟ್ಟು ನೀಡಿತ್ತು. ಆದರೆ ಈ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ರಾಹುಲ್ ಸಫಲರಾದರು. ಈ ಹಂತದಲ್ಲಿ ರಾಹುಲ್‌ ಅವರಿಗೆ ಒಂದು ಜೀವದಾನ ಸಹ ಸಿಕ್ಕಿತು. ಯಶ್ ದಯಾಳ್ ಎಸೆದ ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಎಕ್ಸ್‌ಟ್ರಾ ಕವರ್‌ನಲ್ಲಿ ನಾಯಕ ರಜತ್‌ ಪಟಿದಾರ್‌ ಹಾಫ್‌ ಚಾನ್ಸ್‌ ಕೈ ಚೆಲ್ಲಿದರು. ಇಲ್ಲಿಂದ ರಾಹುಲ್ ವೀರಾವೇಶದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ರಾಹುಲ್ ದ್ರಾವಿಡ್ ಕ್ಯಾಚ್‌ ಬಿಟ್ಟಿದ್ದು ಟರ್ನಿಂಗ್ ಪಾಯಿಂಟ್‌ ಎಂದು ಕೇಳಿದ್ರೆ ಅಲ್ಲ.

ಎಲ್ಲವೂ ಅಂದು ಕೊಂಡಂತೆ ನಡೆಯುತ್ತಿದ್ದಾಗ ಅರೆಕಾಲಿಕ್ ಬೌಲರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರಿಗೆ ನಾಯಕ ಚೆಂಡು ನೀಡಿದ್ದು ತಪ್ಪು ನಿರ್ಧಾರಾನಾ ಎಂದು ಅನಿಸುತ್ತದೆ. ಆದರೆ ಈ ಎಲ್ಲದಕ್ಕಿಂತ ಮುಖ್ಯ ಆ ಒಂದು ಔಟ್‌.

RCB s One Costly Mistake That Shifted the Match Momentum Against Delhi Capitals

ನಿಜಕ್ಕೂ ಪಂದ್ಯಕ್ಕೆ ಇದುವೆ ಟರ್ನಿಂಗ್ ಪಾಯಿಂಟ್‌

ಆರ್‌ಸಿಬಿ ಟಾಸ್ ಸೋತು ಬ್ಯಾಟ್‌ ಮಾಡಿದ ಆರ್‌ಸಿಬಿ ಅಮೋಘ ಆರಂಭ ಕಂಡಿತು. ಜಸ್ಟ್‌ 19 ಎಸೆತದಲ್ಲಿ ಆರ್‌ಸಿಬಿ 50 ರನ್‌ಗಳ ಅಮೋಘ ಆರಂಭ ಕಂಡಿತ್ತು. ಈ ಹಂತದಲ್ಲಿ ಫಿಲ್‌ ಸಾಲ್ಟ್‌ ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಫಿಲ್‌ ಸಾಲ್ಟ್‌ ಎಕ್ಸ್‌ಟ್ರಾ ಕವರ್‌ನಲ್ಲಿ ಪುಲ್ ಮಾಡಿ ಸಿಂಗಲ್ ರನ್‌ ಕದಿಯಲು ನೋಡಿದರು. ಆಗ ವಿರಾಟ್ ಬೇಡ ಬೇಡ ಎಂದು ಹೇಳಿ ತಡಿದರು. ಸಾಲ್ಟ್‌ ದುಡುಕಿ ತಮ್ಮ ವಿಕೆಟ್ ಒಪ್ಪಿಸಿದರು. ನಿಜಕ್ಕೂ ಆರ್‌ಸಿಬಿ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿದ್ದೇ ಇದೇ ಕಾರಣ.

Story first published: Thursday, April 10, 2025, 23:41 [IST]
Other articles published on Apr 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+