For Quick Alerts
ALLOW NOTIFICATIONS  
For Daily Alerts
 

IPL 2025: ಸ್ಟಾರ್‌ ಆಲ್‌ರೌಂಡರ್‌ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತಾ RCB?

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಇನ್ನು ಹಲವು ದಿನಗಳು ಬಾಕಿ ಇವೆ. ಈ ಲೀಗ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ತಾನು ತೆಗೆದುಕೊಂಡ ಆ ಒಂದು ನಿರ್ಧಾರ ತಪ್ಪಾ ಎಂಬ ಭಯ ಕಾಡಲು ಆರಂಭವಾಗಿದೆ. ಸದ್ಯ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್‌ ಆರಂಭವಾಗಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಆರ್ಭಟ ನಡೆಸುತ್ತಿದ್ದಾರೆ. ಈ ಆಟವನ್ನು ಕಂಡು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೈ ಕೈ ಹಿಚಿಕೊಳ್ಳುತ್ತಿದೆ.

ಆರ್‌ಸಿಬಿ ಸ್ಟಾರ್ ಆಟಗಾರನನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇವರು ಐಪಿಎಲ್‌ ಮೆಗಾ ಹಾರಜಿನ ಅಂಗಳ ಪ್ರವೇಶಿಸಿದ್ದರು. ಇವರಿಗೆ ಆರ್‌ಸಿಬಿ ಬಿಡ್‌ ಮಾಡುವುದನ್ನು ಬಿಡಿ, ತನ್ನ ಬಳಿ ಇದ್ದ ರೈಟ್‌ ಟು ಮ್ಯಾಚ್ ಕಾರ್ಡ್‌ನ್ನು ಸಹ ಬಳಸುವಲ್ಲಿ ವಿಫಲವಾಗಿತ್ತು. ಆದರೆ ಈ ಸ್ಟಾರ್‌ ಪ್ಲೇಯರ್‌ ಆಟ ಕಂಡು ಪಂಜಾಬ್‌ ತಂಡಕ್ಕೆ ಸೇರಿಸಿಕೊಂಡಿತು. ಈಗ ಪಂಜಾಬ್‌ ಕಿಂಗ್ಸ್‌ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿದ್ದೆ.

RCB s Regret Glenn Maxwell Shines in BBL After Royal Challengers Let Him Go

ಯಾರು ಆ ಸ್ಟಾರ್ ಪ್ಲೇಯರ್‌?

ಮೇಲಿನ ವಿಷಯವನ್ನು ಓದಿದ ಮೇಲೆ ಇವರೇ ಆ ಆಟಗಾರ ಎಂಬ ಅಭಿಪ್ರಾಯ ನಿಮ್ಮ ಮನಸ್ಸಿನಲ್ಲಿ ಬಂದಿರುತ್ತದೆ. ಹೌದು, ನಿಮ್ಮ ಊಹೆ ಸರಿಯಾಗಿದೆ ಅವರೇ ಗ್ಲೇನ್‌ ಮ್ಯಾಕ್ಸ್‌ವೆಲ್‌. ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಆಟ ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಅನಾವರಣ ಆಗುತ್ತಿದೆ. ಇವರು ಸಿಕ್ಕ ಅವಕಾಶದಲ್ಲಿ ಆರ್ಭಟ ನಡೆಸಿ, ತಮ್ಮನ್ನು ಬೆಂಬಲಿಸಿದವರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಅವರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ಮ್ಯಾನೇಜ್ಮೆಂಟ್‌ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದೆ.

ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆರ್ಭಟ

ಗ್ಲೇನ್‌ ಮ್ಯಾಕ್ಸ್‌ವೆಲ್‌ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ತಮ್ಮ ಆರ್ಭಟವನ್ನು ಮುಂದುವರೆಸಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಎರಡನೇ ಅರ್ಧಶತಕ ಬಾರಿಸಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಭಾನುವಾರ ನಡೆದ ಬಿಬಿಎಲ್‌ನಲ್ಲಿ ಮೆಲ್ಬೋರ್ನ್‌ ಸ್ಟಾರ್ಸ್‌ ಪರ ಬ್ಯಾಟ್ ಮಾಡಿದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅಬ್ಬರಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್‌ ಸ್ಟಾರ್ಸ್‌ 20 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅಮೋಘ ಬ್ಯಾಟಿಂಗ್ ನಡೆಸಿ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸಿಡಿಸಿದ್ದಾರೆ.

RCB s Regret Glenn Maxwell Shines in BBL After Royal Challengers Let Him Go

ಬೌಂಡರಿ, ಸಿಕ್ಸರ್‌ ಸುರಿಮಳೆ

ಇದೇ ಪಂದ್ಯದಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ 18ನೇ ಓವರ್‌ನ ಮೊದಲ ಮೂರು ಸಿಕ್ಸರ್‌ಗಳನ್ನು ಬಾರಿಸಿ ಆರ್ಭಟಿಸಿದರು. ಮ್ಯಾಕ್ಸ್‌ವೆಲ್‌ ಆಡಿದ 52 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್‌ ಸಹಾಯದಿಂದ 90 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು ಮೆಲ್ಬೋರ್ನ್‌ ಸ್ಟಾರ್‌ ತಂಡ 42 ರನ್‌ಗಳಿಂದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಮಣಿಸಿತು.

ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು ಆರ್‌ಸಿಬಿ ತಂಡ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇವರ ಮೂಲ ಬೆಲೆ 2 ಕೋಟಿ ಆಗಿತ್ತು. ಕೊನೆಗೆ ಪಂಜಾಬ್‌ ಕಿಂಗ್ಸ್ ಇವರ ಆಟವನ್ನು ಗುರುತಿಸಿ 4.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

Story first published: Monday, January 13, 2025, 9:00 [IST]
Other articles published on Jan 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+