IPL 2025: ಆರ್‌ಸಿಬಿ ತಂಡಕ್ಕೆ ಗುಡ್ ನ್ಯೂಸ್: ಏನದು ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಐಪಿಎಲ್ 2025ಕ್ಕೆ ಇನ್ನು ಹಲವು ದಿನಗಳು ಬಾಕಿ ಇವೆ. ಈ ನಡುವೆ ಐಪಿಎಲ್ ಎಲ್ಲ ತಂಡಗಳು ರಿಟೇನ್ಶನ್ ಪಾಲಿಸಿಯ ಮೇಲೆ ಚಿತ್ತ ನೆಟ್ಟಿವೆ. ಯಾರನ್ನು ಉಳಿಸಿಕೊಳ್ಳಬೇಕು. ಯಾರನ್ನು ಕೈ ಬಿಡಬೇಕು ಎಂಬ ಚಿಂತೆ ಮಾಲೀಕರನ್ನು ಕಾಡುತ್ತಿದೆ. ಎಲ್ಲಾ 10 ತಂಡಗಳು ತಾವು ಉಳಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಅಕ್ಟೋಬರ್ 31 ರೊಳಗೆ ಸಲ್ಲಿಸಬೇಕು. ಈ ನಡುವೆ ಆರ್‌ಸಿಬಿ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ಇನ್ನು ಐಪಿಎಲ್ ಫ್ರಾಂಚೈಸಿಗಳು ವಿಶ್ವಾದ್ಯಂತ ನಡೆಯುತ್ತಿರುವ ಟಿ20 ಲೀಗ್‌ಗಳ ಮೇಲೆ ಕಣ್ಣು ನೆಟ್ಟಿವೆ. ಯಾವ ಆಟಗಾರ ಯಾವ ರೀತಿ ಪ್ರದರ್ಶನ ನೀಡುತ್ತೀದ್ದಾನೆ ಎಂದು ಮಾಲೀಕರು ಲೆಕ್ಕಾಚಾರ ಆರಂಭಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಒಂದು ಗೆಲುವು ಹಲವು ಐಪಿಎಲ್ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಫಾಫ್ ನಾಯಕತ್ವದ ತಂಡ ಚಾಂಪಿಯನ್
ಈ ಬಾರಿಯ ಸಿಪಿಎಲ್ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್ ನಡುವೆ ನಡೆಯಿತು. ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಚುಕ್ಕಾಣಿಯನ್ನು ಫಾಫ್ ಡುಪ್ಲೆಸಿಸ್ ವಹಿಸಿದ್ದರು. ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಇಮ್ರಾನ್ ತಾಹಿರ್ ಮುನ್ನಡೆಸಿದ್ದರು. ಸೇಂಟ್ ಲೂಸಿಯಾ ಕಿಂಗ್ಸ್ ಅಮೋಘ ಪ್ರದರ್ಶನ ನೀಡಿ ಗಯಾನಾ ತಂಡವನ್ನು ಮಣಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅಂದಹಾಗೆ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸಿದ ಫಾಫ್ ಡುಪ್ಲೇಸಿಸ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾರೆ. ಕಳೆದ ಆವೃತ್ತಿಯಲ್ಲಿ ಇವರ ಮುಂದಾಳತ್ವದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಹೀಗಾಗಿ ಫಾಫ್ ಅವರು ಸಿಪಿಎಲ್‌ನಲ್ಲಿ ನೀಡಿದ ಪ್ರದರ್ಶನ ಅವರಿಗೆ ಹೇಗೆ ಸಹಾಯಕವಾಗಲಿದೆ ಎಂದು ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ. ಸಿಪಿಎಲ್ ಚಾಂಪಿಯನ್ ಸೇಂಟ್ ಲೂಸಿಯಾ ಕಿಂಗ್ಸ್ ತಂಡದಲ್ಲಿ ಪಂಜಾಬ್ ಕಿಂಗ್ಸ್ ಸಹ ಪಾಲನ್ನು ಹೊಂದಿದೆ.

ಫಾಫ್ ಅವರನ್ನು ಉಳಿಸಿಕೊಳ್ಳುತ್ತಾ ಆರ್‌ಸಿಬಿ?
ರಿಟೇನ್ಶನ್ ಟೆನ್ಷನ್‌ನಲ್ಲಿರುವ ತಂಡಗಳಿಗೆ ಸಿಪಿಎಲ್ ಫಲಿತಾಂಶ ಲೆಕ್ಕಾ ಕೆಡಿಸಿದೆ. ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರಿಗೆ ಈಗ 40 ವರ್ಷ. ಇದನ್ನೇ ಇಟ್ಟುಕೊಂಡು ಅವರನ್ನು ಕೈ ಬಿಡುವ ಯೋಚನೆಯನ್ನು ಮಾಡಿತ್ತು. ಆದರೆ ಫಾಫ್ ಸಿಪಿಎಲ್‌ನಲ್ಲಿ ನೀಡಿದ ಪ್ರದರ್ಶನ ಪದೆ ಪದೆ ಆರ್‌ಸಿಬಿ ಮ್ಯಾನೇಜ್ಮೆಂಟ್ ತಿರುಗಿ ನೋಡುವಂತೆ ಮಾಡಿದೆ. ಆರ್‌ಸಿಬಿಯ ಫಾಫ್ ಒಬ್ಬ ನಾಯಕನಾಗಿ ನೀಡಿರುವ ಪ್ರದರ್ಶನ ಅಮೋಘ. ಆರ್‌ಸಿಬಿ ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುತ್ತದಾ, ಅಥವಾ ಹರಾಜಿನಲ್ಲಿ ಬೇರೆ ನಾಯಕರತ್ತ ಮುಖ ಮಾಡುತ್ತದಾ ಅನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಈ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications