Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DPL 2025: RCB ಯುವ ಪ್ಲೇಯರ್‌ ಅಬ್ಬರ: 4 ವಿಕೆಟ್ ಸಾಧನೆ

ಭಾರತ ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿ ತವರಿನತ್ತ ಮುಖ ಮಾಡಿದೆ. ಈಗ ದೆಹಲಿ ಪ್ರೀಮಿಯರ್ ಲೀಗ್‌ ಆರಂಭವಾಗಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಭಣಾಗವಹಿಸಿದ್ದರಿಂದ ಎಲ್ಲರ ಕಣ್ಣುಗಳು ಈ ಲೀಗ್‌ ಮೇಲೆ ನೆಟ್ಟಿವೆ. ಈ ಸರಣಿಯಲ್ಲಿ ಐಪಿಎಲ್‌ನಲ್ಲಿ ಮಿಂಚು ಹರಿಸಿದ ಆಟಗಾರರು ಸದ್ದು ಮಾಡುತ್ತಾ ಇದ್ದಾರೆ. ಡೆಲ್ಲಿ ಪ್ರೀಮಿಯರ್ ಲಿಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸ್ಟಾರ್ ಬೌಲರ್‌ ಸ್ಥಿರ ಪ್ರದರ್ಶನ ನೀಡಿ ನಾಲ್ಕು ವಿಕೆಟ್‌ ಪಡೆದ ಎಲ್ಲರ ಗಮನ ಸೆಳೆದಿದ್ದಾರೆ.

ಮಂಗಳವಾರ ಪುರಾನಿ ದೆಹಲಿ ಹಾಗೂ ಔಟರ್‌ ದೆಹಲಿ ವಾರಿಯರ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್‌ ದೆಹಲಿ ವಾರಿಯರ್ಸ್ 20 ಓವರ್‌ಗಳಲ್ಲಿ 10 ವಿಕೆಟ್‌ ನಷ್ಟಕ್ಕೆ 148 ರನ್‌ ಸೇರಿಸಿತು. ಈಗಾಗಲೇ ಐಪಿಎಲ್‌ ಅಬ್ಬರಿಸಿರುವ ಪ್ರಿಯಾಂಶ್ ಆರ್ಯ 16, ಸನತ್ ಸಾಂಗ್ವಾನ್‌ 26, ವರುಣ್‌ ಯಾದವ್‌ 18, ಧ್ರುವ್ ಸಿಂಗ್ 19, ಹರ್ಷಾ ತ್ಯಾಗಿ 17, ಸಿದ್ಧಾಂತ್ ಶರ್ಮಾ 21 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಆದರೆ ಯಾವೊಬ್ಬ ಬ್ಯಾಟರ್‌ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.

RCB s Suyash Sharma Takes 4-Wicket Haul in Delhi Premier League

ಪುರಾನಿ ದೆಹಲಿ ತಂಡದ ಪರ ಉಧವ್ ಮನೋಹರ್ ಬಿಗುವಿನ ದಾಳಿ ಸಂಘಟಿಸಿದರು. ಇವರು 4 ಓವರ್ ಬೌಲ್ ಮಾಡಿ 26 ರನ್ ನೀಡಿ 5 ವಿಕೆಟ್‌ ಕಬಳಿಸಿದರು. ಇನ್ನು ರಜನೀಶ್‌ ದಾದರ್, ಪ್ರದೀಪ್‌ ತಲಾ 2 ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಪುರಾನಿ ದೆಹಲಿ ತಂಡದ ಯಾವೊಬ್ಬ ಬ್ಯಾಟರ್‌ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ದೆಹಲಿ ತಂಡದ ಪರ ಸಮರ್ಥ್ ಸೇತ್ 18, ಲಲಿತ್ ಯಾದವ್ 20 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು.


ಸುಯೇಶ್‌ ಅಬ್ವರ

ಔಟರ್‌ ದೆಹಲಿ ವಾರಿಯರ್ಸ್ ತಂಡದ ಪರ ಬಿಗುವಿನ ಸ್ಪಿನ್ ದಾಳಿ ನಡೆಸಿದ ಸುಯೇಶ್‌ ಶರ್ಮಾ 4 ವಿಕೆಟ್‌ ಕಬಳಿಸಿದರು. ಇವರ ಬೌಲಿಂಗ್ ಎದುರಿಸುವಲ್ಲಿ ಎದುರಾಳಿ ಬ್ಯಾಟರ್‌ಗಳು ವೈಫಲ್ಯವನ್ನು ಅನುಭವಿಸಿದರು. ಉಳಿದಂತೆ ಸುಯೇಶ್ ಮಲಿಕ್ 3, ಶಿವಂ ಶರ್ಮಾ 1 ವಿಕೆಟ್‌ ಪಡೆದರು.

18ನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವಲ್ಲಿ ಸ್ಪಿನ್ ಬೌಲರ್‌ ಸುಯೇಶ್ ಶರ್ಮಾ ಅವರ ಕೊಡುಗೆ ಅಪಾರ.

Story first published: Tuesday, August 5, 2025, 21:00 [IST]
Other articles published on Aug 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+