For Quick Alerts
ALLOW NOTIFICATIONS  
For Daily Alerts
 

RCB ಯುವ ಆಟಗಾರನಿಗೆ ಇಂಗ್ಲೆಂಡ್‌ ನಾಯಕತ್ವ ಪಟ್ಟ

ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ತಂಡದ ನಾಯಕತ್ವವನ್ನು ಇದೇ ಮೊದಲ ಬಾರಿಗೆ ಯುವ ಆಟಗಾರನಿಗೆ ಕಟ್ಟಲಾಗಿದೆ. ಈ ಯುವ ಆಟಗಾರ ಈಗಾಗಲೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಜಾಕಬ್ ಬೆತೆಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಯುವ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸೆಪ್ಟಂಬರ್ ಆರಂಭದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೂ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರು ನಾಯಕತ್ವ ತೊರೆದ ಬಳಿಕ ಈ ಸ್ಥಾನವನ್ನು ಹ್ಯಾರಿ ಬ್ರೂಕ್ ಅವರು ತುಂಬಲಿದ್ದಾರೆ. ಗಾಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ತವರು ಸರಣಿಯ ಭಾಗವಾಗದ ಜೋಫ್ರಾ ಆರ್ಚರ್ ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿದ್ದಾರೆ.

RCB s Young Star Jacob Bethell Becomes England s Youngest Captain for T20 Series

ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಗೆ ಸನ್ನಿ ಬೇಕರ್ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ಸೆ.2 ರಂದು, ಎರಡನೇ ಪಂದ್ಯ ಸೆ.4 ರಂದು, ಮೂರನೇ ಪಂದ್ಯ ಸೆ.7 ರಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಟಿ20 ಪಂದ್ಯಗಳು ಆರಂಭವಾಗಲಿವೆ. ಮೊದಲ ಟಿ20 ಪಂದ್ಯ ಸೆ.10 ರಂದು, ಎರಡನೇ ಟಿ20 ಪಂದ್ಯ ಸೆ.12 ರಂದು, ಮೂರನೇ ಟಿ20 ಪಂದ್ಯ 14 ರಂದು ನಡೆಯಲಿವೆ.

ಬೆತೆಲ್ ಐಪಿಎಲ್ ಸಾಧನೆ

ಜಾಕಬ್‌ ಬೆತೆಲ್‌ ಈಗಾಗಲೇ ಆರ್‌ಸಿಬಿ ತಂಡದ ಪರ ಐಪಿಎಲ್ ಲೀಗ್ ಆಡಿದ ಅನುಭವ ಹೊಂದಿದ್ದಾರೆ. ಇವರನ್ನು ಆರ್‌ಸಿಬಿ ಸೌದಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರಿಗೆ ಆರ್‌ಸಿಬಿ 2.60 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರು ಆರ್‌ಸಿಬಿ ಪರ ಆಡಿದ 2 ಪಂದ್ಯಗಳಲ್ಲಿ 67 ರನ್‌ ಸಿಡಿಸಿದ್ದಾರೆ.

ಇಂಗ್ಲೆಂಡ್‌ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸನ್ನಿ ಬೇಕರ್, ಟಾಮ್ ಬ್ಯಾಂಟನ್, ಜಾಕಬ್ ಬೆತೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಜೇಮೀ ಸ್ಮಿತ್.

RCB s Young Star Jacob Bethell Becomes England s Youngest Captain for T20 Series

ಇಂಗ್ಲೆಂಡ್‌ ಟಿ20 ತಂಡ: ಜಾಕಾಬ್ ಬೆತೆಲ್ (ನಾಯಕ), ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ಲ್ಯೂಕ್ ವುಡ್.

Story first published: Friday, August 15, 2025, 22:58 [IST]
Other articles published on Aug 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+