Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕ

Real challenge getting IPL to resume, says RR owner Manoj Badale

ಜೈಪುರ್: ಇಂಡಿಯನ್ ಪ್ರೀಮಿಯರ್ ಲೀಗ್‌ 14ನೇ ಆವೃತ್ತಿ ಅಮಾನತಾಗಿದೆ. ಆತಂಕ ಮಟ್ಟದಲ್ಲಿ ಹೆಚ್ಚುತ್ತಿದ್ದ ಕೋವಿಡ್-19 ಪ್ರಕರಣಗಳಿಂದಾಗಿ ಉದ್ದೇಶಿತ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ಆಲೋಚನೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.

ಐಪಿಎಲ್ 14ನೇ ಆವೃತ್ತಿ ನಡೆಯುತ್ತಿದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಇನ್ನು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್‌ ಲಕ್ಷ್ಮೀಪತಿ ಬಾಲಾಜಿಗೂ ಸೋಂಕು ತಗುಲಿದ್ದರಿಂದ ಈ ಬಾರಿಯ ಐಪಿಎಲ್ ಅನ್ನು ಸ್ಥಗಿತಗೊಳಿಸಲಾಯ್ತು.

ನಿಲುಗಡೆಯಾಗಿರುವ 2021ರ ಐಪಿಎಲ್ ಅನ್ನು ಸೆಪ್ಟೆಂಬರ್‌ನಲ್ಲಿ ಯುನೈಟೆಟ್ ಅರಬ್ ಎಮಿರೇಟ್ಸ್‌ನಲ್ಲಿ ಅಥವಾ ಇಂಗ್ಲೆಂಡ್‌ನಲ್ಲಿ ನಡೆಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಆ ವೇಳೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ರಾಜಸ್ಥಾನ್ ರಾಯಲ್ಸ್ ಮಾಲೀಕ ಮನೋಜ್ ಬದಲೆ, 'ನಾವು ಮಾಧ್ಯಮಗಳನ್ನು ಹತ್ತಿರದಿಂದ ಅನುಸರಿಸುತ್ತಿದ್ದೇವೆ. ನನಗನ್ನಿಸುತ್ತದೆ, ಐಪಿಎಲ್‌ಗೆ ವೇಳಾಪಟ್ಟಿ ಸಿದ್ಧಗೊಳಿಸೋದು ಬಲು ಸವಾಲಿನ ಸಂಗತಿ. ಯಾಕೆಂದರೆ ಆಟಗಾರರು ಈಗಾಗಲೇ ಬಹಳಷ್ಟು ಪಂದ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕ್ಯಾಲೆಂಡರ್ ಈಗಾಗಲೇ ಟೈಟ್ ಆಗಿದೆ. ಹೀಗಾಗಿ ಮತ್ತೆ ಐಪಿಎಲ್ ನಡೆಸೋದು ಬಲು ಸವಾಲಿನ ಸಂಗತಿಯಾಗಲಿದೆ,' ಎಂದಿದ್ದಾರೆ.

Story first published: Friday, May 14, 2021, 0:22 [IST]
Other articles published on May 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+