ಆರ್‌ಸಿಬಿ ಜೊತೆಗೆ ಕೊಹ್ಲಿ ಯುಎಇಗೆ ಪ್ರಯಾಣಿಸದ್ದಕ್ಕೆ ಕಾರಣ ಬಹಿರಂಗ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರದರ್ಶನ ಈ ಬಾರಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇತ್ತ ಆರ್‌ಸಿಬಿ ಕೂಡ ಈ ಬಾರಿ ಕಪ್ ಗೆಲ್ಲುವ ಉಮ್ಮಸ್ಸಿನಲ್ಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್‌ಗಾಗಿ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ತಂಡಗಳು ಭಾರತದಿಂದ ಯುಎಇಗೆ ಪ್ರಯಾಣ ಬೆಳೆಸುತ್ತಿವೆ. ಆರ್‌ಸಿಬಿ ಕೂಡ ಶುಕ್ರವಾರ (ಆಗಸ್ಟ್ 21) ಚಾರ್ಟರ್ಡ್ ಫ್ಲೈಟ್‌ನಲ್ಲಿ ಯುಎಇಗೆ ಹೊರಡುತ್ತಿರುವುದಾಗಿ ತಂಡದ ಸದಸ್ಯರೊಂದಿಗಿನ ಫೋಟೋ ಹಂಚಿಕೊಂಡಿತ್ತು. ಆದರೆ ಆ ಚಿತ್ರದಲ್ಲಿ ನಾಯಕ ವಿರಾಟ್ ಕೊಹ್ಲಿ ಇರಲೇ ಇಲ್ಲ!
ಆರ್‌ಸಿಬಿ ನಾಯಕನಾಗಿದ್ದೂ ಕೊಹ್ಲಿ ಯಾಕೆ ತಂಡದೊಂದಿಗೆ ಯುಎಇಗೆ ಪ್ರಯಾಣಿಸುತ್ತಿಲ್ಲ ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವೀಗ ಬಹಿರಂಗಗೊಂಡಿದೆ. ಕ್ವಾರಂಟೈನ್ ನಿಯಮದ ಕಾರಣ ಕೊಹ್ಲಿ ಶುಕ್ರವಾರ ತಂಡದೊಂದಿಗೆ ಯುಎಇಗೆ ತೆರಳಿಲ್ಲ ಎಂದು ತಿಳಿದು ಬಂದಿದೆ.
ಯುಎಇಗೆ ಹೊರಡುವುದಕ್ಕೂ ಮುನ್ನ ಆರ್‌ಸಿಬಿ ಎಲ್ಲಾ ಆಟಗಾರರು ಬೆಂಗಳೂರಿನಲ್ಲಿ ಚಿಕ್ಕ ಕ್ಯಾಂಪ್‌ಗಾಗಿ ಒಟ್ಟು ಸೇರಿದ್ದರು. ಅಲ್ಲೇ ಅವರು ಕ್ವಾರಂಟೈನ್ ಪಾಲಿಸಿದ್ದರು, ಜೈವಿಕ ಸುರಕ್ಷಾ ಪರದೆ ಪ್ರವೇಶಿಸಿದ್ದರು. ಆದರೆ ನಾಯಕ ಕೊಹ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿರಲಿಲ್ಲ. ಹೀಗಾಗಿ ಕೊಹ್ಲಿ ಮುಂಬೈನಲ್ಲೇ ಕೊಂಚ ಕಾಲ ಇದ್ದು ಅಲ್ಲೇ ಕ್ವಾರಂಟೈನ್ ಪಾಲಿಸಲು ನಿರ್ಧರಿಸಿದ್ದಾರೆ. ಆ ಬಳಿಕ ಕೊಹ್ಲಿ ಯುಎಇಗೆ ಹೋಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications