ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸಿಕ್ಕ ಪಂಚ ರತ್ನಗಳು
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಈ ಸರಣಿಯನ್ನು ಭಾರತ 4-1 ಅಂತರದಲ್ಲಿ ಗೆದ್ದುಕೊಂಡಿದೆ. ಈ ಸರಣಿಯಲ್ಲಿ ಭಾರತದ ಹಲವು ಶ್ರೇಷ್ಠ ಆಟಗಾರರು ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದರು. ಇದರ ಹೊರತಾಗಿಯೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಯುವ ಆಟಗಾರರನ್ನು ಮುನ್ನಡೆಸಿದರು. ಅಲ್ಲದೆ ಯುವ ಪಡೆಯನ್ನು ಮುನ್ನಡೆಸಿ ಜಯ ಸಾಧಿಸಿದರು. ಈ ಸರಣಿಯು ಭಾರತ ಅನೇಕ ಸ್ಟಾರ್ ಆಟಗಾರರನ್ನು ಕಂಡಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆ 5 ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ತನ್ನ ಭವಿಷ್ಯದ ತಂಡವನ್ನು ಕಟ್ಟಿಕೊಂಡು ಈ ಬಾರಿ ಕಣಕ್ಕೆ ಇಳಿದಿತ್ತು. ಬೆರಳೇಣಿಕೆ ಅನುಭವಿಗಳೊಂದಿಗೆ ಮೈದಾನ ಪ್ರವೇಶಿಸಿದ್ದ ಟೀಮ್ ಇಂಡಿಯಾ ಅನುಭವಿ ಇಂಗ್ಲೆಂಡ್ ತಂಡದ ಸವಾಲು ಮೀರಿ ನಿಂತಿತು. ಯುವ ಆಟಗಾರರ ಆಟ ಕಂಡು ಎದುರಾಳಿಗಳು ಸಹ ಕಂಗಾಲಾದರು. ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಆಡುವ ಅವಕಾಶ ಲಭಿಸಿತು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಹಲವರು ಯಶಸ್ವಿಯಾದರು. ಪದಾರ್ಪಣೆ ಮಾಡಿ ಗಮನ ಸೆಳೆದ ಆಟಗಾರರ ಪಟ್ಟಿಯಲ್ಲಿ ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ಧ್ರುವ್ ಜುರೇಲ್, ಆಕಾಶ್ ದೀಪ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಪ್ರದರ್ಶನ ನೀಡಿದರು.

ಯಶಸ್ವಿ ಫೈರ್
ಟೀಮ್ ಇಂಡಿಯಾದ ಯುವ ಓಪನರ್ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಎಲ್ಲ ಐದು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು. ಅಲ್ಲದೆ 89ರ ಸರಾಸರಿಯಲ್ಲಿ 712 ರನ್ ಗಳಿಸಿದರು. ಇದರಲ್ಲಿ ಎರಡು ಬಾರಿ ದ್ವಿಶತಕ ಸಾಧನೆ ಮಾಡಿದ್ದಾರೆ. ಅಲ್ಲದೆ ಮೂರು ಅರ್ಧಶತಕ ಸೇರಿವೆ. ಇವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಸ್ಮರಣೀಯ ಟೆಸ್ಟ್
ಇನ್ನು ಟೀಮ್ ಇಂಡಿಯಾದ ಪರ ಸ್ಮರಣೀಯ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಆರ್.ಅಶ್ವಿನ್ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಿದರು. ಇವರು ನೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರು. ಇವರಿಗೂ ಸಹ ಎಲ್ಲ ಐದು ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತು. ಇವರು 24.8 ಸರಾಸರಿಯಲ್ಲಿ 26 ವಿಕೆಟ್ ಕಬಳಿಸಿದ್ದಾರೆ.
ಕುಲ್‌ದೀಪ್ ಅಬ್ಬರ
ಟೀಮ್ ಇಂಡಿಯಾದ ಚೈನಾಮೆನ್ ಬೌಲರ್ ಕುಲ್‌ದೀಪ್ ಯಾದವ್ ಆಡಿದ ನಾಲ್ಕು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರ ರಾಂಗ್ ಒನ್ ಡಿಲೇವರಿಗಳನ್ನು ಅರಿಯುವಲ್ಲಿ ಎದುರಾಳಿ ತಂಡ ವಿಫಲವಾಯಿತು. ಕುಲ್‌ದೀಪ್ ಆಡಿದ 4 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸಿದರು.

ಬುಮ್ರಾ ಶೈನ್
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ರಾಜ್‌ಕೋಟ್ ಟೆಸ್ಟ್ ವೇಳೆ ವಿಶ್ರಾಂತಿ ಪಡೆದಿದ್ದ ಬುಮ್ರಾ ಆಡಿರುವ ನಾಲ್ಕು ಪಂದ್ಯಗಳಲ್ಲಿ 16.5ರ ಸರಾಸರಿಯಲ್ಲಿ 19 ವಿಕೆಟ್ ಕಬಳಿಸಿದ್ದಾರೆ.
ಮೂರನೇ ಕ್ರಮಾಂಕಕ್ಕೆ ನ್ಯಾಯ
ಶುಭ್‌ಮನ್ ಗಿಲ್ ಆಡಿದ ಐದು ಪಂದ್ಯಗಳಲ್ಲಿ ಭರ್ಜರಿ ಆಟವಾಡಿ ಭರವಸೆ ಮೂಡಿಸಿದ್ದಾರೆ. ಇವರು ಈ ಸರಣಿಯಲ್ಲಿ 452 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications