ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬ್ಯಾಟಿಂದ ಹಾರಿದ 'ಮುತ್ತು' ಎಲ್ಲಿ ಹೋಯಿತು?

ಹೈದ್ರಾಬಾದ್ ನ.10 : ಯಶಸ್ವಿ ಪುರುಷನೊಬ್ಬನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನೋದು ಹಳೆ ಗಾದೆ. ಆದರೆ ಇಲ್ಲಾಗಿದ್ದು ಪಕ್ಕಾ ಉಲ್ಟಾ. ಭಾರತದ ಭರವಸೆಯ ಆಟಗಾರ ಇಂಗ್ಲೆಂಡ್ ಪ್ರವಾಸಲ್ಲಿ ರನ್ ಗಳಿಸಲು ವಿಫಲನಾಗಿದ್ದ. ಇದಕ್ಕೆ ಆಕೆ ಜತೆ ತಿರುಗಾಡಿಕೊಂಡಿದ್ದೆ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳು ಬಾಲಿವುಡ್ ಬೆಡಗಿನ್ನು ಮನಸೋ ಇಚ್ಛೆ ಬೈದುಕೊಂಡಿದ್ದರು.

ಹೌದು .. ನಾವು ಹೇಳುತ್ತಿರೋದು ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಬಗ್ಗೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೊಹ್ಲಿ ಬ್ಯಾಟಿಂದ ರನ್ ಹೊಳೆ ಹರಿಯತೊಡಗಿದೆ. ಹೈದ್ರಾಬಾದ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಆಕರ್ಷಕ ಅರ್ಧ ಶತಕ ಗಳಿಸಿ 25 ವರ್ಷದ ದಾಖಲೆಯೊಂದನ್ನೂ ಮುರಿದಿದ್ದಾರೆ. ಭಾರತ ಆರು ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದಿಕೊಂಡಿದೆ. ಆದರೆ ಮ್ಯಾಚ್ ಹೈ ಲೈಟ್ಸ್ ಇಷ್ಟಕ್ಕೇ ಮುಗಿಯಲ್ಲ.[25 ವರ್ಷ ಹಳೆ ದಾಖಲೆ ಮುರಿದ 'ವಿರಾಟ್' ಕೊಹ್ಲಿ]

virat

ಕೊಹ್ಲಿ ಆಟ ನೋಡಲು ಸ್ವತಃ ಅನುಷ್ಕಾ ಶರ್ಮಾ ಹಾಜರಿ ಹಾಕಿದ್ದರು. ಅರ್ಧ ಶತಕ ಗಳಿಸಿದ ಭಾರತದ ಯುವ ನಾಯಕ ತಮ್ಮ ಬ್ಯಾಟ್ ಮೂಲಕ 'ಮುತ್ತು' ಒಂದನ್ನು ಅನುಷ್ಕಾ ಕುಳಿತಿದ್ದ ಗ್ಯಾಲರಿ ಕಡೆ ತೇಲಿ ಬಿಟ್ಟರು. ಇದನ್ನು ಸಂತಸದಿಂದಲೇ ಸ್ವೀಕರಿಸಿದ ಅನುಷ್ಕಾ ಕುಳಿತಲ್ಲಿಂದ ಎದ್ದು ನಿಂತರು. ಕ್ಯಾಮರಾ ಇಬ್ಬರ ಕಡೆಗೂ ನೆಟ್ಟಿದ್ದರೂ ಕೊಹ್ಲಿ ಹಾರಿಸಿಬಿಟ್ಟ ಮುತ್ತು ಎಲ್ಲಿ ಹೋಗಿ ಬಿತ್ತೋ ಎನ್ನೋದು ಕಾಣಲಿಲ್ಲ...!

ಸ್ಕೋರ್ ಕಾರ್ಡ್/ ಕೊಹ್ಲಿ ಶತಕಗಳ ಪಟ್ಟಿ

ಅನುಷ್ಕಾ ಮತ್ತು ಕೊಹ್ಲಿ ಲವ್ವಿ ಡವ್ವಿ ಈಗ ಗುಟ್ಟಾಗೇನು ಉಳಿದಿಲ್ಲ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ವೇಳೆ ಅನುಷ್ಕಾ-ಕೊಹ್ಲಿ ಓಡಾಡಿಕೊಂಡಿದ್ದರು ಎಂಬುದನ್ನೇ ದೊಡ್ಡ ಸುದ್ದಿ ಮಾಡಲಾಗಿತ್ತು. ಇತ್ತೀಚೆಗೆ ರವೀಂದ್ರ ಜಡೇಜಾ ಟ್ವೀಟ್ ಮಾಡುವಾಗ ಅನುಷ್ಕಾ ಅವರನ್ನು 'ಬಾಬಿ' ಎಂದು ಕರೆದಿದ್ದರು. ಇದೆಲ್ಲಾ ಗಮನಿಸಿದರೆ ಟೀಮ್ ಇಂಡಿಯಾದ ರನ್ ಮಷಿನ್ ಯಾವಾಗ ಗ್ರಹಸ್ಥಾಶ್ರಮ ಪ್ರವೇಶಿಸುತ್ತಾರೆ ಎನ್ನುವುದೆ ನಮ್ಮ ಮುಂದಿರುವ ಕುತೂಹಲ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X