For Quick Alerts
ALLOW NOTIFICATIONS  
For Daily Alerts
 

ದಾಖಲೆಗಳನ್ನು ಮುರಿಯಲೇ ನಿರ್ಮಿಸಲಾಗುತ್ತದೆ ಎಂದು ಲಾರಾ ಹೇಳಿದ್ದೇಕೆ?

ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮುಲ್ಡರ್ ಅಜೇಯ 367 ರನ್‌ಗಳ ಇನಿಂಗ್ಸ್ ಕಟ್ಟಿದರು. ಆದರೆ ಇವರು ಕ್ರಿಕೆಟ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರ ಐತಿಹಾಸಿಕ ದಾಖಲೆಯನ್ನು ಅಳಿಸುವ ಸಮೀಪದಲ್ಲಿದ್ದರು. ಆದರೆ ಇವರು ಈ ವೇಳೆ ಡಿಕ್ಲೇರ್ ಮಾಡಿಕೊಂಡರು. ಇವರಿಗೆ ವೆಸ್ಟ್‌ ಇಂಡೀಸ್ ತಂಡದ ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯಬಹುದಿತ್ತು. ಈ ಬಗ್ಗೆ ಬಹಳ ಚರ್ಚೆಗಳು ಆರಂಭವಾದವು.

ಬುಲಾವಾಯೊದಲ್ಲಿ ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮುಲ್ಡರ್ 334 ಎಸೆತಗಳಲ್ಲಿ 49 ಬೌಂಡರಿ ಮತ್ತು 4 ಸಿಕ್ಸರ್‌ ಸಹಾಯದಿಂದ 367 ರನ್‌ ಸೇರಿಸಿದರು. ಇದೇ ವೇಳೆ ಇವರು 297 ಎಸೆತಗಳಲ್ಲಿ ತ್ರಿಶತಕ ಪೂರ್ಣಗೊಳಿಸಿದರು. ಅಲ್ಲದೆ ವೇಗವಾಗಿ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಅಮೋಘ ಇನಿಂಗ್ಸ್‌ ಸಹಾಯದಿಂದ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳಿಗೆ 626 ರನ್‌ಗೆ ಡಿಕ್ಲೇರ್ ಮಾಡಿಕೊಂಡರು. ಇನ್ನು ವಿಯಾನ್ ಮುಲ್ಡರ್ 33 ರನ್‌ ಬಾರಿಸಿದ್ದರೆ ಬ್ರಿಯಾನ್‌ ಲಾರಾ ದಾಖಲೆ ಅಳಿಸಿ ಹಾಕುತ್ತಿದ್ದರು. ಆದರೆ ಇವರು ಈ ಸಾಧನೆ ಮಾಡಲಿಲ್ಲ.

Records Are Meant to Be Broken Brian Lara s Humble Reaction to Mulder s Missed Milestone

ವಿಯಾನ್ ಮುಲ್ಡರ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಬ್ರಿಯಾನ್‌ ಲಾರಾ ಅವರೇ ತಮ್ಮ ದಾಖಲೆ ಮುರಿಯಬೇಕಿತ್ತು ಎಂದು ಬಯಸಿದ್ದರು ಎಂದು ತಿಳಿಸಿದ್ದಾರೆ. ಬ್ರಿಯಾನಾ ಲಾರಾ ದಾಖಲೆಗಳನ್ನು ಮುರಿಯಲೇ ನಿರ್ಮಿಸಲಾಗುತ್ತದೆ, ನೀವು ಈ ದಾಖಲೆಯನ್ನು ಮುರಿದಿದ್ದರೆ ನನಗೆ ಸಂತಸವಾಗುತ್ತಿತ್ತು ಎಂದು ಲಾರಾ ತಮಗೆ ತಿಳಿಸಿದ್ದಾಗಿ ಮುಲ್ಡರ್ ನೆನಪಿಸಿಕೊಂಡರು.

ಲಾರಾ ಹೇಳಿದ್ದೇನು?

ಸೂಪರ್ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ವಿಯಾನ್ ಮುಲ್ಡರ್ ಬ್ರಿಯಾನ್‌ ಲಾರಾ ಅವರೊಂದಿಗೆ ಮಾತನಾಡಿರುವ ಕೆಲವು ವಿಷಯಗಳನ್ನು ಹಂಚಿಕೊಂಡರು. ಲಾರಾ, ಮಾತನಾಡುವಾಗ ಆಟವನ್ನು ತುಂಬ ಇಷ್ಟಪಟ್ಟಿದ್ದಾಗಿ ತಿಳಿಸಿದರು. ತಮ್ಮ ದಾಖಲೆ ಮುರಿಬೇಕಿತ್ತು. ನಿಮಗೆ ಅವಕಾಶ ಇದ್ದಿದ್ದರೆ, ನೀವು 400ಕ್ಕೂ ಹೆಚ್ಚು ರನ್ ಬಾರಿಸಬೇಕಿತ್ತು. ನೀವು ನಿಮ್ಮದೇ ದಾಖಲೆಯನ್ನು ನಿರ್ಮಿಸುತ್ತಿದ್ದೀರಿ ಆ ಬಗ್ಗೆ ನನಗೆ ಹೆಮ್ಮೆ ಇರುತ್ತಿತ್ತು ಎಂದು ತಿಳಿಸಿದ್ದಾಗಿ ಸಂದರ್ಶನದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಹೇಳಿದ್ದಾರೆ.

Records Are Meant to Be Broken Brian Lara s Humble Reaction to Mulder s Missed Milestone

ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್‌ ಶಾಲ್ ಪೊಲಾಕ್‌, ವಿಯಾನ್ ಮುಲ್ಡರ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದರು. ನೀವು ಲಾರಾ ದಾಖಲೆಯನ್ನು ಏಕೆ ಮುರಿಲಿಲ್ಲ ಎಂದು ಕೇಳಿದರು. ಇದಕ್ಕೆ ವಿಯಾನ್ ಮುಲ್ಡರ್ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು. ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಬೌಲಿಂಗ್‌ನತ್ತ ಗಮನ ಹರಿಸಬೇಕೆಂದು ಯೋಚಿಸಿದೆ. ಅಲ್ಲದೆ ಲಾರಾ ಅವರಂತಹ ದಾಖಲೆಯನ್ನು ಮುರಿಯುವ ಅಗತ್ಯವಿಲ್ಲ. ದಾಖಲೆಯ ಪುಸ್ತಕದಲ್ಲಿ ಅವರ ಹೆಸರು ಇರುವುದೇ ಒಳ್ಳೆಯದು. ನನಗೆ ಮತ್ತೆ ಇಂತಹದ್ದೇ ಅವಕಾಶ ಸಿಕ್ಕರೆ ನಾನು ಮತ್ತೆ ಇದೇ ನಿರ್ಧಾರವನ್ನು ತೆಗೆದುಕೊಳ್ಳುವೇ ಎಂದು ವಿಯಾನ್ ಮುಲ್ಡರ್ ತಿಳಿಸಿದ್ದಾರೆ.

Story first published: Friday, July 11, 2025, 16:53 [IST]
Other articles published on Jul 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+